Home » ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಶಾಸಕ ತನ್ವೀರ್ ಸೇಠ್

ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಶಾಸಕ ತನ್ವೀರ್ ಸೇಠ್

by Praveen Chennavara
0 comments
Mysore

Mysore: ಮೈಸೂರು : ರಾಜ್ಯ ವಿಧಾನಸಭೆ ಚುನಾವಣೆ ಹೊತ್ತಲ್ಲೇ ಹಾಲಿ ಶಾಸಕ ತನ್ವೀರ್ ಸೇಠ್ ಚುನಾವಣಾ ರಾಜಕೀಯದಿಂದ ನಿವೃತ್ತಿ ಬಯಸಿ ಎಐಸಿಸಿಗೆ ಪತ್ರ ಬರೆದಿದ್ದಾರೆ.

ತನ್ವೀರ್ ಸೇಠ್ ದಿಢೀರ್ ನಿರ್ಧಾರ ಘೋಷಣೆಯಿಂದ ಕಾಂಗ್ರೆಸ್‌ಗೆ ತಲೆನೋವು ಶುರುವಾಗಿದೆ. ಮುಂದಿನ ಅಭ್ಯರ್ಥಿ ಆಯ್ಕೆ ಹಾಗೂ ಪಕ್ಷದೊಳಗೆ ಸೃಷ್ಟಿಯಾಗಲಿರುವ ಅಭ್ಯರ್ಥಿಗಳ ಪಟ್ಟಿ ಹಾಗೂ ಆಕಾಂಕ್ಷಿಗಳ ಗುಂಪುಗಾರಿಕೆ ಆರಂಭವಾಗುವುದೇ ಎಂಬ ಆತಂಕ ಸೃಷ್ಟಿಯಾಗಿದೆ.

ಮೈಸೂರಿ(Mysore)ನ ಎನ್.ಆರ್ ಕ್ಷೇತ್ರದ ಹಾಲಿ ಶಾಸಕ ತನ್ವೀರ್ ಸೇಠ್ ಚುನಾವಣಾ ರಾಜಕೀಯದಿಂದ ನಿವೃತ್ತಿ ಬಯಸಿ ಎಐಸಿಸಿಗೆ ಪತ್ರ ಬರೆದಿದ್ದು,ನನ್ನ ಮೇಲೆ ಹಲ್ಲೆಯಾದ ಬಳಿಕ ಆರೋಗ್ಯ ತುಂಬಾ ಏರುಪೇರಾಗಿದೆ. ಮೊದಲಿನಂತೆ ನಾನು ಮಾನಸಿಕ ಹಾಗೂ ದೈಹಿಕವಾಗಿಯೂ ಶಕ್ತಿಯುತವಾಗಿಲ್ಲ. ಹೀಗಾಗಿ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಆದರೆ ಕಾಂಗ್ರೆಸ್ ಪಕ್ಷದಲ್ಲೇ ಮುಂದುವರೆಯುತ್ತೇನೆ ಎಂದು ಹೇಳಿದ್ದಾರೆ.

You may also like

Leave a Comment