ಬೆಂಗಳೂರು : ದೇವಸ್ಥಾನಗಳ ಅಭಿವೃದ್ಧಿ, ಜೀರ್ಣೋದ್ಧಾರ ಅನುದಾನ ತಡೆ ಹಿಡಿದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಮೂರು ವಿಷಯಗಳನ್ನು ಮುಂದಿಟ್ಟು ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಗಳ ಜೀರ್ಣೋದ್ದಾರ ಅನುದಾನ ತಡೆ ಹಿಡಿದಿತ್ತು. ಅನುದಾನ ಮಂಜೂರಾಗಿದ್ದು, ಕಾಮಗಾರಿ ಆರಂಭಿಸದಿದ್ದರೆ ಮುಂದಿನ ಸೂಚನೆಯವರೆಗೂ ಹಣ ಬಿಡುಗಡೆ ಮಾಡಬಾರದು
ಅನುದಾನ ಮಂಜೂರಾಗಿ ಈಗಾಗಲೇ ಶೇ.50ರಷ್ಟು ಹಣ ಬಿಡುಗಡೆ ಆಗಿದ್ದು, ಹಣ ಬಳಕೆ ಆಗದಿದ್ದಲ್ಲಿ ಉಳಿದ ಹಣ ಬಿಡುಗಡೆ ಮಾಡಬಾರದು ಹಾಗೂ ಕಾಮಗಾರಿ ಆರಂಭ ಆಗದಿದ್ದಲ್ಲಿ ಕಾಮಗಾರಿ ಪ್ರಾರಂಭ ಮಾಡದಂತೆ ತಡೆಯುಬೇಕು. 3. ಆಡಳಿತಾತ್ಮಕ ಮಂಜೂರಾತಿ ಸ್ವೀಕೃತವಾಗಿದ್ದರೆ ಮುಂದಿನ ನಿರ್ದೇಶನದವರೆಗೆ ತಡೆ ಹಿಡಿಯಬೇಕು ಎಂದು ಮುಜರಾಯಿ ಇಲಾಖೆ ಆದೇಶದಲ್ಲಿ ತಿಳಿಸಿತ್ತು.
ಇದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆ ದಿಢೀರ್ ಆದೇಶ ಹಿಂಪಡೆದಿದೆ. ಈ ಕುರಿತು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
