Hotel Association: ಕೆಲವ ದಿನಗಳ ಹಿಂದೆ ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಹುದ್ದೆಗಳಲ್ಲಿರುವ ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆಯನ್ನು ನೀಡುವಂತೆ ಆದೇಶ ಹೊರಡಿಸಿತ್ತು. ಆದರೆ ಇದೀಗ ಈ ಮುಟ್ಟಿನ ರಜೆಯನ್ನು ಪ್ರಶ್ನಿಸಿ ಹೋಟೆಲ್ ಸಂಘಟನೆಗಳು ಹೈಕೋರ್ಟ್ ಮೆಟ್ಟಿಲೇರಿವೆ.
ಯಸ್, ಸರ್ಕಾರ ಎಲ್ಲ ಮಹಿಳಾ ಸಿಬ್ಬಂದಿಗೆ ಪ್ರತಿ ತಿಂಗಳು 1 ಸಂಬಳ ಸಹಿತ ಮುಟ್ಟಿನ ರಜೆ ನೀಡಬೇಕು ಎಂದು ಎಂದು ರಾಜ್ಯ ಸರ್ಕಾರ ನವೆಂಬರ್ 12 ರಂದು ಅಧಿಸೂಚನೆ ಹೊರಡಿಸಿತ್ತು. ಇದೀಗ ಮಹಿಳಾ ಸಿಬ್ಬಂದಿಗೆ ಕಡ್ಡಾಯವಾಗಿ ತಿಂಗಳಿಗೆ ಒಂದು ದಿನ ಸಂಬಳ ಸಹಿತ ಮುಟ್ಟಿನ ರಜೆ ನೀಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಹೋಟೆಲ್ಸ್ ಅಸೋಸಿಯೇಷನ್ ಹೈಕೋರ್ಟ್ ಮೆಟ್ಟಿಲೇರಿದೆ.
ಹೈಕೋರ್ಟ್ ಮೊರೆ ಹೋಗಿರುವ ಬೆಂಗಳೂರು ಹೋಟೆಲ್ಸ್ ಅಸೋಸಿಯೇಷನ್, ರಾಜ್ಯ ಸರ್ಕಾರಕ್ಕೆ ಸರ್ಕಾರಿ ಆದೇಶದ ಮೂಲಕ ಈ ನಿಯಮವನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಫ್ಯಾಕ್ಟರಿ ಕಾಯ್ದೆ, ಕರ್ನಾಟಕ ಶಾಪ್ಸ್ ಮತ್ತು ಕಮರ್ಷಿಯಲ್ ಎಸ್ಟಬ್ಲಿಷ್ ಮೆಂಟ್ ಕಾಯ್ದೆ, ಪ್ಲಾಂಟೇಷನ್ ಲೇಬರ್ ಕಾಯ್ದೆ, ಬೀಡಿ ಮತ್ತು ಸಿಗರೇಟ್ ವರ್ಕರ್ಸ್ ಕಾಯ್ದೆ ಮತ್ತು ಮೋಟಾರ್ ಟ್ರಾನ್ಸರ್ಪೋರ್ಟ್ ವರ್ಕರ್ಸ್ ಕಾಯ್ದೆಯಡಿ ನೋಂದಾಯಿತ ಸಂಸ್ಥೆಗಳಿಗೆ ಸರ್ಕಾರ ಈ ರೀತಿ ಆದೇಶ ನೀಡಲು ನಿಯಮಗಳಲ್ಲಿ ಅವಕಾಶವಿಲ್ಲ. ಈ ರೀತಿ ರಜೆ ನೀಡುವುದು ಸಂಸ್ಥೆಗಳು ಮತ್ತು ಅವುಗಳ ಆಂತರಿಕ ಮಾನವ ಸಂಪನ್ಮೂಲ ನೀತಿಯ ವ್ಯಾಪ್ತಿಗೆ ಒಳಟ್ಟಿರುವುದು ಎಂದು ವಾದಿಸಿದೆ.
