Home latest Lakkundi : ಇಲ್ಲಿ ಸಾವಿರ ಕೆಜಿ ಚಾಮುಂಡೇಶ್ವರಿ ಮೂರ್ತಿ ಇದೆ – ಉತ್ಖನನದ ವೇಳೆ ಸ್ವಾಮೀಜಿ...

Lakkundi : ಇಲ್ಲಿ ಸಾವಿರ ಕೆಜಿ ಚಾಮುಂಡೇಶ್ವರಿ ಮೂರ್ತಿ ಇದೆ – ಉತ್ಖನನದ ವೇಳೆ ಸ್ವಾಮೀಜಿ ಹೈ ಡ್ರಾಮಾ!!

Lakkundi : ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ (Lakkundi Excavation)ಕಾರ್ಯ ದಿನಕ್ಕೊಂದು ರಹಸ್ಯವನ್ನು ಬಹಿರಂಗಪಡಿಸುತ್ತಿದ್ದು, ರಾಜ್ಯದ ಜನರ ಕುತೂಹಲವನ್ನು ಹೆಚ್ಚಿಸಿದೆ. ಈ ನಡುವೆ ಇಲ್ಲಿಗೆ ಸ್ವಯಂಘೋಷಿತ ಸ್ವಾಮೀಜಿ ಒಬ್ಬ ಆಗಮಿಸಿ ಬಾರಿ ಹೈಡ್ರಾಮ ನಡೆಸಿದ್ದಾನೆ.
ಹೌದು, ಇಲ್ಲಿ ಸಾವಿರ ಕೆಜಿ ಚಿನ್ನದ ಶಿವಲಿಂಗ ಮತ್ತು ಚಾಮುಂಡೇಶ್ವರಿಯ ಮೂರ್ತಿ ಇದೆ (1000 Kg Gold Shivalinga Statue) ಎಂದು ಕಿತ್ತೂರು ರಾಣಿ ಚೆನ್ನಮ್ಮ ಅವರ ಮಗನೆಂದು ಹೇಳಿಕೊಂಡು ಬಂದಿದ್ದ ಸ್ವಾಮೀಜಿಯ ಮಾತು ಗ್ರಾಮದ ಜನರಿಗೆ ಭಾರೀ ಆಶ್ಚರ್ಯ ಮೂಡಿಸಿದೆ.

ಉತ್ಖನನ ನಡೆಯುತ್ತಿರುವ ಜಾಗಕ್ಕೆ ಆಗಮಿಸಿದ ಖಾವಿಧಾರಿ ವ್ಯಕ್ತಿಯೊಬ್ಬರು ತಾನು ‘ಕಿತ್ತೂರು ರಾಣಿ ಚೆನ್ನಮ್ಮನ ಮಗ’ ಎಂದು ಹೇಳಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸಿದರು. ಸ್ಥಳಕ್ಕೆ ಬಂದವರೇ ಒಂದೇ ಕಾಲಿನ ಮೇಲೆ ನಿಂತು ವಿಚಿತ್ರವಾಗಿ ವರ್ತಿಸಲು ಶುರು ಮಾಡಿದ ಈ ವ್ಯಕ್ತಿ, ‘ಉತ್ಖನನ ಮಾಡುತ್ತಿರುವ ಜಾಗದಲ್ಲಿ ಏನೂ ಇಲ್ಲ, ಅದರ ಪಕ್ಕದಲ್ಲೇ ಸಾವಿರ ಕೆಜಿ ತೂಕದ ಚಿನ್ನದ ಶಿವಲಿಂಗ ಮತ್ತು ಕ್ವಿಂಟಲ್ ತೂಕದ ಚಿನ್ನದ ದೇವಿಯ ಮೂರ್ತಿ (100 KG Gold goddess Idol) ಇದೆ. ಒಂದು ವೇಳೆ ಆ ಮೂರ್ತಿಯನ್ನು ಸ್ಥಳಾಂತರಿಸಿದರೆ ಜಗತ್ತಿನಲ್ಲಿ ಮಳೆಯೇ ಆಗುವುದಿಲ್ಲ’ ಎಂದು ಕೈಯಲ್ಲಿ ಗಜಲಿಂಬೆ ಹಿಡಿದುಕೊಂಡು ಡ್ರಾಮಾ ಮಾಡಿದ್ದಾರೆ.

ಆರಂಭದಲ್ಲಿ ಎಲ್ಲವನ್ನೂ ತೀವ್ರ ಕುತೂಹಲದಲ್ಲಿ ವೀಕ್ಷಿಸಿದ ಗ್ರಾಮಸ್ಥರು ಬಳಿಕ ಸ್ವಯಂಘೋಷಿತ ಪವಾಡ ಪುರುಷನನ್ನು ಬೆನ್ನಟ್ಟಿ ಓಡಿಸಿದ್ದಾರೆ. ಲಕ್ಕುಂಡಿ ಹಾಗೂ ಚಾಮುಂಡಿ ಇತಿಹಾಸಕ್ಕೂ ಸಂಬಂಧವಿಲ್ಲ. ನಮ್ಮೂರಿಗೆ ಬಂದು ಸುಳ್ಳು ಹೇಳ್ತಿಯಾ ಎಂದು ತರಾಟೆಗೆ ಪಡೆದಿದ್ದಾರೆ. ಜನರ ಆಕ್ರೋಶಕ್ಕೆ ಹೆದರಿದ ಸ್ವಾಮೀಜಿ ಹಿಮ್ಮುಖವಾಗಿ ಓಡಿ ಪರಾರಿಯಾಗಿದ್ದಾನೆ.