ಕೇಂದ್ರ ಸರ್ಕಾರವು ಇತ್ತೀಚೆಗೆ ಅಟಲ್ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ಬದಲಾವಣೆ ಮಾಡಿದೆ. ಇನ್ನು ಮುಂದೆ ಈ ಯೋಜನೆಗೆ ಸೇರಲು ಇವರು ಅರ್ಹರಾಗಿರುವುದಿಲ್ಲ. ಆದಾಯ ತೆರಿಗೆ ಪಾವತಿದಾರರು ಅಟಲ್ ಪಿಂಚಣಿ ಯೋಜನೆಗೆ ಸೇರದಂತೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ.
ಈಗಾಗಲೇ ಕೇಂದ್ರ ಸರ್ಕಾರವು ಹಲವಾರು ಪಿಂಚಣಿ ಯೋಜನೆಗಳನ್ನು ನಡೆಸುತ್ತಾ ಇದೆ. ಹಾಗೆನೇ ಅಸಂಘಟಿತ ವಲಯದ ಕಾರ್ಮಿಕರಿಂದ ನೌಕರರಿಗೆ ವಿವಿಧ ಪಿಂಚಣಿ ಯೋಜನೆಗಳು ಲಭ್ಯವಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ (NPS), ಉದ್ಯೋಗಿಗಳ ಭವಿಷ್ಯ ನಿಧಿ (EPF), ಅಟಲ್ ಪಿಂಚಣಿ ಯೋಜನೆ (APY) ನಂತಹ ಪಿಂಚಣಿ ಯೋಜನೆಗಳಿವೆ.
ಆದರೆ, ಈ ಪಿಂಚಣಿ ಯೋಜನೆಗಳು ಎಲ್ಲರಿಗೂ ಅನ್ವಯಿಸುವುದಿಲ್ಲ. ಇವುಗಳಿಗೆ ಕೆಲವು ಅರ್ಹತೆಗಳಿವೆ.
ಹೊಸ ನಿಯಮಗಳ ಪ್ರಕಾರ, ಯಾವುದೇ ಚಂದಾದಾರರು ಅಕ್ಟೋಬರ್ 1, 2022 ರಂದು ಅಥವಾ ನಂತರ ಅಟಲ್ ಪಿಂಚಣಿ ಯೋಜನೆಗೆ ಸೇರಿದರೆ ಮತ್ತು ಅದರ ನಂತರ ಆದಾಯ ತೆರಿಗೆ ಪಾವತಿದಾರರಾದರೆ, ಅವರ APY ಖಾತೆಯನ್ನು ಮುಚ್ಚಲಾಗುತ್ತದೆ. ಅಲ್ಲಿಯವರೆಗೆ ಠೇವಣಿ ಮಾಡಿದ ಮೊತ್ತವನ್ನು ಸರ್ಕಾರವು ಚಂದಾದಾರರಿಗೆ ಮರುಪಾವತಿ ಮಾಡುತ್ತದೆ. ಆದಾಗ್ಯೂ, ಈ ಪಿಂಚಣಿ ಯೋಜನೆಯಲ್ಲಿ ಹಣವನ್ನು ಠೇವಣಿ ಮಾಡುವ ಜನರು ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯಬಹುದೇ ಅಥವಾ ಇಲ್ಲವೇ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ.
ಆದಾಯ ತೆರಿಗೆ ಪಾವತಿದಾರರು ಅಕ್ಟೋಬರ್ 1ರಿಂದ
ಅಟಲ್ ಪಿಂಚಣಿ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಪ್ರಸ್ತುತ ನಿಯಮಗಳ ಪ್ರಕಾರ, 18 ರಿಂದ 40 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಅವರು ಆದಾಯ ತೆರಿಗೆ ಪಾವತಿಸಲಿ ಅಥವಾ ಇಲ್ಲದಿರಲಿ ಈ ಸರ್ಕಾರಿ ಪಿಂಚಣಿ ಯೋಜನೆಗೆ ಸೇರಬಹುದು. ಈ ಯೋಜನೆಯಡಿ ಪ್ರತಿ ತಿಂಗಳು ರೂ. 5000 ಮಾಸಿಕ ಪಿಂಚಣಿ ನೀಡಲಾಗುತ್ತದೆ.
