Home » Chaitra kundapura case: ಬಿಜೆಪಿ ಟಿಕೆಟ್ ಡೀಲ್ ಪ್ರಕರಣಕ್ಕೆ ರೋಚಕ ಟ್ವಿಸ್ಟ್- ಸಿಸಿಬಿ ಎದುರು ಎಲ್ಲಾ ಸತ್ಯ ಕಕ್ಕಿಬಿಟ್ಟ ಚೈತ್ರಾ – ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ಹಾಲಶ್ರೀ !!

Chaitra kundapura case: ಬಿಜೆಪಿ ಟಿಕೆಟ್ ಡೀಲ್ ಪ್ರಕರಣಕ್ಕೆ ರೋಚಕ ಟ್ವಿಸ್ಟ್- ಸಿಸಿಬಿ ಎದುರು ಎಲ್ಲಾ ಸತ್ಯ ಕಕ್ಕಿಬಿಟ್ಟ ಚೈತ್ರಾ – ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ಹಾಲಶ್ರೀ !!

1 comment
Ticket fraud case

Ticket fraud case: ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದ ಚೈತ್ರಾ ಕುಂದಾಪುರಳ(Chaitra kundapura) ಬಿಜೆಪಿ ಟಿಕೆಟ್(BJP Ticket) ವಂಚನೆ ಪ್ರಕರಣವು ಇದೀಗ ಕೊನೆಗೂ ಅಂತಿಮ ಹಂತಕ್ಕೆ ಬಂದು ತಲುಪಿದೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು, ತಲೆ ಮರೆಸಿಕೊಂಡು ಹೋಗಿದ್ದ ಹಾಲಸ್ವಾಮಿಗಳು ಸೇರಿ ಎಲ್ಲರೂ ಸಿಸಿಬಿ ಬಲೆಗೆ ಬಿದ್ದಿದ್ದು ಒಬ್ಬೊಬ್ಬರೂ ಕೂಡ ಸತ್ಯ ಕಕ್ಕಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಹೌದು, ಉದ್ಯಮಿ ಗೋವಿಂದ ಬಾಬು ಪೂಜಾರಿಗೆ(Govinda babu poojari) ಎಂಎಲ್‌ಎ(MLA) ಟಿಕೆಟ್ ಕೊಡಿಸುವುದಾಗಿ ಹೇಳಿ ನಂಬಿಸಿ( Ticket fraud case)ಸುಮಾರು ಐದು ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಮುಖ ಆರೋಪಿ ಆಗಿರುವಂತಹ ಚೈತ್ರಾ ಕುಂದಾಪುರ ಸಿಸಿಬಿ(CCB) ಅಧಿಕಾರಿಗಳ ಮುಂದೆ ಬಾಯಿಬಿಟ್ಟು ಮಾಡಿರೋ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಚೈತ್ರಾ ಕುಂದಾಪುರ ಹಾಗೂ ಹಾಲಶ್ರೀ ಅವರನ್ನು ಮುಖಾಮುಖಿ ಕೂರಿಸಿ ಸಿಸಿಬಿ ತಂಡ ವಿಚಾರಣೆ ನಡೆಸಿತು. ಸಾಕ್ಷ್ಯಗಳನ್ನು ಮುಂದಿಟ್ಟು ಪ್ರಶ್ನೆ ಮಾಡಿದಾಗ ಚೈತ್ರಾ ಎಲ್ಲವನ್ನೂ ಬಾಯಿ ಬಿಟ್ಟಿದ್ದಾಳೆ.

ಚೈತ್ರಾ ತಪ್ಪೊಪ್ಪಿಗೆಯಿಂದ ಪ್ರಕರಣದಲ್ಲಿ ಅತಿದೊಡ್ಡ ತಿರುವು ಸಿಕ್ಕಿದೆ. ಸಿಸಿಬಿ ಮುಂದೆ ಮೊದಲ ಬಾರಿಗೆ ಸಿಸಿಬಿ ಮುಂದೆ ತಪೊಪ್ಪಿಕೊಂಡಿರೋ ಚೈತ್ರಾ, ಮೊದಲು ಡ್ರಾಮ ಮಾಡ್ತಿದ್ದರು. ಊಟ ಬಿಟ್ಟು ಆಸ್ಪತ್ರೆಯನ್ನೂ ಸೇರಿದ್ದರು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ವಿಚಾರಣೆ ವೇಳೆ ವ್ಯವಹಾರ ನಡೆಸಿದ್ದಕ್ಕೆ ವಿಡಿಯೋ, ಆಡಿಯೋ, ಮೊಬೈಲ್ ಕರೆಗಳು ಹಾಗೂ ವಂಚನೆ ಮಾಡಿದ್ದಾರೆ ಎನ್ನುವುದಕ್ಕೆ ಚಿನ್ನ, ಹಣ, ಬ್ಯಾಂಕ್, ಠೇವಣಿ, ಜಪ್ತಿ ಮಾಡಿದ್ದ ಕಾರು ಸೇರಿ ದಾಖಲೆಗಳನ್ನ ಮುಂದಿಟ್ಟು ಸಿಸಿಬಿ ಪ್ರಶ್ನೆ ಕೇಳಿದೆ. ಈ ವೇಳೆ ದಾಖಲೆ ಕಂಡು ಕಕ್ಕಾಬಿಕ್ಕಿ ಆದ ಚೈತ್ರ ಬೇರೆ ದಾರಿ ಕಾಣದೆ ಎಲ್ಲವನ್ನು ಬಾಯಿಬಿಟ್ಟಿದ್ದಾಳೆ.

ಚೈತ್ರಾ ಹೇಳಿದ್ದೇನು?
ತಾನು ಹಣ ಮಾಡುವ ಉದ್ದೇಶದಿಂದೇ ಈ ಕೃತ್ಯ ಮಾಡಿದ್ದಾಗಿ ತಪ್ಪಕೊಂಡಿರುವ ಚೈತ್ರಾ ಅದಕ್ಕಾಗಿ ಪರಿಚಿತರೊಬ್ಬರ ಮೂಲಕ ಗೋವಿಂದ ಬಾಬು ಅವರನ್ನು ಮುನ್ನೆಲೆಗೆ ತರುತ್ತೇನೆ ಎಂದು ನಂಬಿಸಿ ಟಿಕೆಟ್ ನಮಗೆ ಬರುವಂತಹ ಸನ್ನಿವೇಶ ಸೃಷ್ಟಿಸುವುದಾಗಿ ಹೇಳಿದ್ದಾಳೆ. ನಂತರ ಟಿಕೆಟ್ ಸಿಕ್ಕರೆ ತಾನು ಸೇಫ್ ಅಂತ ಪ್ಲಾನ್ ಮಾಡಿದ್ದಳು ಎಂದು ಹೇಳಿದ್ದಾಳೆ. ಒಂದು ವೇಳೆ ಪ್ಲಾನ್ ಮಿಸ್ಸಾಗಿ ಟಿಕೆಟ್ ಮಿಸ್ ಆದ್ರೂ ಕೂಡ ಏನು ಮಾಡಬೇಕು ಅನ್ನೋದನ್ನ ಕೂಡ ಚೈತ್ರ ಮತ್ತು ಒಂದು ವೇಳೆ ಟಿಕೆಟ್ ಮಿಸ್ ಆಗಿದ್ದರೆ ಚೈತ್ರಾ ಮತ್ತು ಗ್ಯಾಂಗ್ ಎರಡನೇ ಪ್ಲಾನ್ ಮಾಡಿದ್ದರು. ನಾವು ಹಣ ಇಟ್ಟುಕೊಂಡಿಲ್ಲ ವಿಶ್ವನಾಥ ಜಿಗೆ ಕೊಟ್ಟಿದ್ದಾಗಿ ಗೋವಿಂದ ಬಾಬುಗೆ ಹೇಳಿದ್ದಾರೆ.ನಾವು ನೆಪ ಮಾತ್ರಕ್ಕೆ ಸಹಾಯ ಮಾಡಿದ್ದೇವೆ ಹಣ ತೆಗೆದುಕೊಂಡು ಹೋಗಿ ನೀಡಿದ್ದೇವೆ ಅಷ್ಟೇ ಎಂದು ನಂಬಿಸುವುದು ಎರಡನೇ ಪ್ಲಾನ್ ಆಗಿತ್ತು. ಒಂದು ವೇಳೆ ನಂಬದಿದ್ದರೆ ವಿಶ್ವನಾಥ್ ಜಿ ಮೃತಪಟ್ಟಿದ್ದಾರೆ. ನಮಗೆ ಗೊತ್ತೇ ಇಲ್ಲ ಎಂದು ಗೋವಿಂದ ಬಾಬು ಬಳಿ ಹೇಳುವುದಾಗಿ ಪ್ಲಾನ್ ಮಾಡಿದ್ದರು. ಅದರಂತೆ ಗೋವಿಂದ ಬಾಬುಗೆ ಹೇಳಿದ ಚೈತ್ರ ಅಂಡ್ ಗ್ಯಾಂಗ್ ನಂತರ ಮೂರುವರೆ ಕೋಟಿ ಚೈತ್ರ ಕೈ ಸೇರಿತ್ತು ಎನ್ನಲಾಗಿದೆ.ಈ ಎಲ್ಲಾ ವಿಚಾರವನ್ನು ಸಿಸಿಬಿ ಮುಂದೆ ಚೈತ್ರ ಬಾಯಿ ಬಿಟ್ಟಿದ್ದಾಳೆ ಎನ್ನಲಾಗಿದೆ.

ಅಭಿನವ ಹಾಲಶ್ರೀ ಹೇಳಿದ್ದೇನು?
ಉದ್ಯಮಿ ಗೋವಿಂದ ಬಾಬು ಪೂಜಾರಿಯಿಂದ (Govind Babu Poojari) ಹಣ ಪಡೆದಿದ್ದು ನಿಜ. ಎಂಎಎಲ್‌ಎ ಟಿಕೆಟ್ ವಿಚಾರವಾಗಿ (BJP MLA Ticket Scam) ಹಣ ಪಡೆದಿದ್ದೆ, ಆದರೆ ಟಿಕೆಟ್ ಸಿಗಲಿಲ್ಲವಾದ್ದರಿಂದ ಹಣ ವಾಪಸ್ ಕೊಡೋದಾಗಿ ಹೇಳಿದ್ದೆ. ಈಗಾಗಲೆ 50 ಲಕ್ಷ ಹಣ ವಾಪಸ್‌ ಕೊಟ್ಟಿದ್ದೇನೆ. ಉಳಿದ ಹಣ ಮಠದಲ್ಲಿದೆ ಅಂತ ಸ್ವಾಮೀಜಿ ಅಧಿಕಾರಿಗಳ ಮುಂದೆ ಸತ್ಯ ಬಾಯ್ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಈ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ, ಚೈತ್ರಾ ಹೇಳಿದಂತೆ ಕೇಳಿದ್ದೀನಿ. ತಪ್ಪಿಗೆ ನಾನೇ ಹೊಣೆಯಾಗಿದ್ದು, ಬೇರೆ ಯಾರೂ ಈ ಕೇಸ್ ನಲ್ಲಿ ಇಲ್ಲ ಅಂತಾ ಅಭಿನವ ಹಾಲಶ್ರೀ ಸಿಸಿಬಿ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: Food tips: ಮೊಟ್ಟೆ ಜೊತೆ ಅಪ್ಪಿ ತಪ್ಪಿಯೂ ಈ ಪದಾರ್ಥಗಳನ್ನು ಸೇವಿಸಬಾರದು !! ತಿಂದರೆ ಅಪಾಯ ಕಟ್ಟಿಟ್ಟ ಬುತ್ತಿ !!

You may also like

Leave a Comment