Home » ದಕ್ಷಿಣ ಭಾರತದಲ್ಲಿ ಆ್ಯಂಕರಿಂಗ್ ಕ್ಷೇತ್ರದಲ್ಲೇ ಅತೀ ಹೆಚ್ಚು ಸಂಭಾವಣೆ ಪಡೆಯುವ ಸ್ಟಾರ್ ಆ್ಯಂಕರ್ ಯಾರು ಗೊತ್ತಾ? ಒಂದು ಇವೆಂಟ್ ಗೆ ಇವರು ಮಾಡುವ ಚಾರ್ಜ್ ಎಷ್ಟು?

ದಕ್ಷಿಣ ಭಾರತದಲ್ಲಿ ಆ್ಯಂಕರಿಂಗ್ ಕ್ಷೇತ್ರದಲ್ಲೇ ಅತೀ ಹೆಚ್ಚು ಸಂಭಾವಣೆ ಪಡೆಯುವ ಸ್ಟಾರ್ ಆ್ಯಂಕರ್ ಯಾರು ಗೊತ್ತಾ? ಒಂದು ಇವೆಂಟ್ ಗೆ ಇವರು ಮಾಡುವ ಚಾರ್ಜ್ ಎಷ್ಟು?

0 comments

ಕನ್ನಡದಲ್ಲಿ ನಿರೂಪಣೆ ಎಂದ ತಕ್ಷಣ ಪಟ್ ಅಂತ ನೆನಪಾಗೋದು ಅನುಶ್ರೀ. ಅನುಶ್ರೀ ಅವರ ಸ್ಪಷ್ಟ ಕನ್ನಡ ಕೇಳೋದೇ ಕಿವಿಗೆ ಇಂಪು. ಇದೇ ರೀತಿ  ತೆಲುಗಿನಲ್ಲಿ  ತನ್ನ ಛಾಪು ಮೂಡಿಸಿದ  ನಿರೂಪಕಿ ಸುಮಾ ಕನಕಾಲ. ಈ ಮಾತಿನ ಮಲ್ಲಿ ಕಿರುತೆರೆಯಲ್ಲಿ ಕಾರ್ಯಕ್ರಮಗಳ ಮೂಲಕ ಜನರ ಮನದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿರುವ ಸುಮಾ ಆ್ಯಂಕರ್ ಆಗಿ ಫೇಮಸ್ ಆಗಿರೋದು ಹೆಚ್ಚಿನವರಿಗೆ ತಿಳಿದಿರುವ ಸಂಗತಿ. ಆದರೆ, ಈ ಸ್ಟಾರ್  ಆ್ಯಂಕರ್ ಸಂಭಾವನೆ ಕೇಳಿದರೆ ಶಾಕ್ ಆಗೋದು ಫಿಕ್ಸ್ ಅಂತಾನೆ ಲೆಕ್ಕ.

ಪಾಲಕ್ಕಾಡ್‌ನಲ್ಲಿ  ಹುಟ್ಟಿದ  ಸುಮಾ ಅವರು 15 ವರ್ಷ ವಯಸ್ಸಿನಲ್ಲಿಯೇ  ನಿರೂಪಣೆಗೆ ಎಂಟ್ರಿ ಕೊಟ್ಟು ಇದೀಗ ಸ್ಟಾರ್ ಆ್ಯಂಕರ್ ಆಗಿ ಹೊರ ಹೊಮ್ಮಿದ್ದಾರೆ. ಸುಮಾ ಅವರು ಟಾಲಿವುಡ್ ಇಂಡಸ್ಟ್ರಿಯಲ್ಲಿ  ಮಾತ್ರವಲ್ಲದೇ, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್​ ಭಾಷೆಗಳನ್ನು ನೀರು ಕುಡಿದಂತೆ ಸರಾಗವಾಗಿ ಮಾತನಾಡಬಲ್ಲ ಬಹುಭಾಷಾ ತಾರೆ ಎಂದರೂ ತಪ್ಪಾಗಲಾರದು. ದೊಡ್ಡ ಸ್ಟಾರ್ ಸಿನಿಮಾಗಳ ಕಾರ್ಯಕ್ರಮಗಳಿಗೆ ಆ್ಯಂಕರ್ ಮಾಡುವ ಮೂಲಕ ನೇಮ್ ಫೇಮ್ ಗಳಿಸಿರುವ   ಸ್ಟಾರ್ ಆಂಕರ್ ಸುಮಾ ಕನಕಲಾ ಇವರು ಹೆಸರಿಗೆ ಮಾತ್ರ ಸ್ಟಾರ್ ನಿರೂಪಕಿಯಲ್ಲ, ಅವರ ಸಂಭಾವನೆ ಕೂಡ ಅದೇ ರೀತಿ ಇದೆ. ಅಷ್ಟೆ ಅಲ್ಲದೆ, ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಆ್ಯಂಕರ್ ಎಂದರೆ ಅದು ಸುಮಾ ಕನಕಲಾ. ಇವರು ಹೋಸ್ಟ್ ಮಾಡುವ ಒಂದು ಕಾರ್ಯಕ್ರಮಕ್ಕೆ ಸುಮಾರು 2.5 -3 ಲಕ್ಷ ರೂಪಾಯಿಗಳ ಸಂಭಾವನೆ ಪಡೆಯುತ್ತಾರಂತೆ.

ಮೂಲತಃ ಸುಮಾ ಮಲಯಾಳಂ ಬೆಡಗಿಯಾಗಿದ್ದರು ಕೂಡ  ತೆಲುಗನ್ನು ಸ್ಪಷ್ಟ ಶುದ್ಧವಾಗಿ ಮಾತನಾಡುವ ಕಲೆಯನ್ನ ಕರಗತ ಮಾಡಿಕೊಂಡಿರೋದು ವಿಶೇಷ. ಬಿಕಾಂ ಪದವಿ ಪೂರ್ಣ ಗೊಳಿಸಿದ ಬಳಿಕ M.COM ಪದವಿ ಪಡೆದು ತನ್ನ ವಿದ್ಯಾರ್ಹತೆಯ ಕ್ಷೇತ್ರದಲ್ಲೇ ಕೆಲ್ಸ ಗಿಟ್ಟಿಸಿಕೊಳ್ಳುವ ಕನಸು ಕಂಡ ಸುಮಾ ಆ ಬಳಿಕ ಶಿಕ್ಷಕಿಯಾಗಬೇಕೆಂದು ಬಯಸಿದ್ದರು. ಆದರೆ,  ಕಿರುತೆರೆಗೆ ಪಾದಾರ್ಪಣೆ ಮಾಡಿದ ಬಳಿಕ ಅವಕಾಶದ ಬಾಗಿಲು ತೆರೆಯುತ್ತಾ ಸಾಗಿ, ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡಿ ಇದೀಗ ಬಹುಬೇಡಿಕೆಯ ಸ್ಟಾರ್ ಆ್ಯಂಕರ್ ಅನ್ನೋ ಬಿರುದು ಪಡೆದುಕೊಂಡಿದ್ದಾರೆ. ಹೀಗೆ, ಬರೋಬ್ಬರಿ 20 ವರ್ಷಗಳ ಸುದೀರ್ಘವಾಗಿ ಮಾತಿನಲ್ಲೇ  ಮೋಡಿ ಮಾಡಿದ ಹಿನ್ನೆಲೆ  ಈ ಹಿಂದೆ ಗಂಟಲು ಆಪರೇಷನ್‌ಗೆ ಕೂಡ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿತ್ತು.  ಈ ನಿಟ್ಟಿನಲ್ಲಿ ಸುಮಾ ಅವರು ಕೊಂಚ ಸಮಯ ಬ್ರೇಕ್ ತೆಗೆದುಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

You may also like

Leave a Comment