Home » Vijay Devarakonda : ಇಂತಹ ರೈತರಿಗೆ ತೆರೆಯಿತು ಅದೃಷ್ಟದ ಬಾಗಿಲು- ಕುಳಿತಲ್ಲೇ ನಿಮ್ಮ ಕೈ ಸೇರಲಿದೆ ಬರೋಬ್ಬರಿ 1 ಲಕ್ಷ !! ವಿಜಯ್ ಕೊಟ್ರು ಸಖತ್ ‘ಖುಷಿ’ ನ್ಯೂಸ್

Vijay Devarakonda : ಇಂತಹ ರೈತರಿಗೆ ತೆರೆಯಿತು ಅದೃಷ್ಟದ ಬಾಗಿಲು- ಕುಳಿತಲ್ಲೇ ನಿಮ್ಮ ಕೈ ಸೇರಲಿದೆ ಬರೋಬ್ಬರಿ 1 ಲಕ್ಷ !! ವಿಜಯ್ ಕೊಟ್ರು ಸಖತ್ ‘ಖುಷಿ’ ನ್ಯೂಸ್

0 comments

Tollywood: ಟಾಲಿವುಡ್ ಕಿಸ್ಸಿಂಗ್ ಸ್ಟಾರ್ ವಿಜಯ್ ದೇವರಕೊಂಡ(Vijay Devrakonda)ಹಾಗೂ ಸಮಂತಾ ಜೋಡಿಯಾಗಿ ನಟಿಸಿರುವ ಖುಷಿ ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತಿದೆ. ಸಿನಿಮಾ ಭರ್ಜರಿ ಯಶಸ್ಸು ಗಳಿಸಿದ ಹಿನ್ನೆಲೆ ವಿಶಾಖಪಟ್ಟಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಈ ಸಂದರ್ಭ ವಿಜಯ್ ದೇವರಕೊಂಡ ಅವರು ಬೊಂಬಾಟ್ ಸುದ್ದಿಯನ್ನು ಪ್ರಕಟಿಸಿದ್ದಾರೆ.

 

ವಿಜಯ್ ದೇವರಕೊಂಡ ಜೀವನದಲ್ಲಿ ಹೆಚ್ಚು ಸಂಪಾದನೆ ಮಾಡಿ ಪೋಷಕರನ್ನು ಸಂತೋಷದಿಂದ ನೋಡಿಕೊಳ್ಳುವ ಅಭಿಲಾಷೆ ಹೊತ್ತು ಸಮಾಜದಲ್ಲಿ ಉತ್ತಮ ಹೆಸರು ಪಡೆಯುವ ಹಂಬಲ ಹೊಂದಿದ್ದಾಗಿ ಇತ್ತೀಚೆಗೆ ಹೇಳಿಕೊಂಡಿದ್ದಾರೆ. ನನ್ನ ಮತ್ತು ಖುಷಿ ಸಿನಿಮಾದ ಯಶಸ್ಸಿಗೆ ಅಪಾರ ಪ್ರೀತಿ ಕೊಡುತ್ತಿರುವ ಅಭಿಮಾನಿಗಳು ಕಾರಣವಾಗಿದ್ದು, ಇನ್ನು ಮುಂದೆ ನಾನು ಅಭಿಮಾನಿಗಳಿಗೋಸ್ಕರ ಕೆಲಸ ಮಾಡುವುದಾಗಿ ಇತ್ತೀಚಿಗೆ ಹೇಳಿಕೊಂಡಿದ್ದಾರೆ.ಈ ನಡುವೆ, ಖುಷಿ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟ ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಸಖತ್ ಖುಷಿಯ ವಿಚಾರ ತಿಳಿಸಿದ್ದಾರೆ.

 

50 ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಿರುವ ಖುಷಿ ಸಿನಿಮಾ ಸಿನಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.’ನಾನು ಒಂದು ಕೋಟಿ ರೂಪಾಯಿ ಹಣವನ್ನು ಸುಮಾರು 100 ರೈತ ಕುಟುಂಬಗಳಿಗೆ ನೀಡಲು ತೀರ್ಮಾನ ಮಾಡಿದ್ದು, ಇದರಿಂದ ನನಗೆ ತುಂಬಾ ಸಂತಸವಾಗಿದೆ. ನಾವು ಪಟ್ಟಿ ಮಾಡುವ 100 ರೈತ ಕುಟುಂಬಗಳಿಗೆ 1 ಲಕ್ಷ ಹಣವನ್ನು ವರ್ಗಾವಣೆ ಮಾಡಲಿದ್ದೇನೆ. ಇದು ನನ್ನ ವೈಯಕ್ತಿಕ ಖಾತೆಯಿಂದ ನಿಮ್ಮ ಖಾತೆಗೆ ಹಣ ಜಮೆಯಾಗಲಿದೆ ಎಂದು ಘೋಷಣೆ ಮಾಡಿದ್ದಾರೆ. ಇದರಿಂದ ವಿಜಯ್ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

You may also like

Leave a Comment