Home » ಹಲ್ಲುಜ್ಜುವಾಗ ಜಾರಿ ಬಿದ್ದ ಮಹಿಳೆ : ಕೆನ್ನೆಗೆ ಅಂಟಿಕೊಂಡ ಹಲ್ಲುಜ್ಜುವ ಬ್ರಷ್

ಹಲ್ಲುಜ್ಜುವಾಗ ಜಾರಿ ಬಿದ್ದ ಮಹಿಳೆ : ಕೆನ್ನೆಗೆ ಅಂಟಿಕೊಂಡ ಹಲ್ಲುಜ್ಜುವ ಬ್ರಷ್

by Praveen Chennavara
0 comments

ತಮಿಳುನಾಡಿನ ಕಾಂಚಿಪುರಂ ಆಯಿಲ್ ಸ್ವೀಟ್‌ನಲ್ಲಿ ವಾಸವಿದ್ದ 34 ವರ್ಷದ ರೇವತಿ ವಿಚಿತ್ರವಾದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಮಾರ್ಜ್ 4ರಂದು ರೇವತಿಯವರು ಹಲ್ಲುಜುತ್ತಿರುವಾಗ, ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ, ಆಕೆ ಬಿದ್ದ ರಭಸಕ್ಕೆ ಬಾಯಿಯಲ್ಲಿದ್ದ ಹಲ್ಲುಜ್ಜುವ ಬ್ರಷ್‌ ಟೂತ್ ಫಿಕ್ಸ್ ಸೀಳಿಕೊಂಡು, ಕೆನ್ನೆಯ ಭಾಗದಲ್ಲಿ ಅಂಟಿಕೊಂಡಿದೆ. ಈ ಅಪಘಾತದಿಂದ ಬಾಯಿ ತೆರೆಯಲು , ಮುಚ್ಚಲು ಸಾಧ್ಯವಾಗದೆ ರೇವತಿಯನ್ನು ರಕ್ಷಿಸಿ ಕಾಂಚೀಪುರಂ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಯ ಶಸ್ತ್ರಚಿಕಿತ್ಸಕರಾದ ನರೇನ್ ಮತ್ತು ವೆಂಕಟೇಶ್ ಅವರು ಸಮಾಲೋಚಿಸಿ ರೇವತಿಯ ಕೆನ್ನೆಯ ಮೂಲಕ ಹಲ್ಲುಜುವ ಬ್ರಷ್‌ಅನ್ನು ತೆಗೆಯಬಹುದು ಎಂದು ನಿರ್ಧರಿಸಿದರು. ಟೂತ್ ಬ್ರಶ್ ಅನ್ನು ಹೊರಕಿವಿಯ ಕೆಳಗೆ ಚುಚ್ಚಿ ಕೆನ್ನೆಯ ಮೂಲಕ ಹೊರಬಂದ ಟೂತ್ ಬ್ರಶ್‌ನ ಅರ್ಧಭಾಗ ತುಂಡರಿಸಲಾಯಿತು.

ಅದೇ ರೀತಿ ಬಾಯಿಯಲ್ಲಿ ಟೂತ್ ಪಿಕ್ ಗಳ ಮಧ್ಯದಲ್ಲಿ ತುಂಬಾ ಆಳವಾಗಿ ಅಂಟಿಕೊಂಡಿದ್ದ ಟೂತ್ ಬ್ರಷ್‌ನ ಅರ್ಧ ಭಾಗವನ್ನು ಶಸ್ತ್ರಚಿಕಿತ್ಸೆ ಮಾಡಿ ಬಾಯಿಯಿಂದ ಹೊರತೆಗೆದರು. ಸದ್ಯ ರೇವತಿ ಸುರಕ್ಷಿತವಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

You may also like

Leave a Comment