Home » Udupi: ಉಡುಪಿ ಪ್ರವಾಸಿ ತಾಣಗಳ ಕಡೆ ಪ್ರವೇಶ ನಿರ್ಬಂಧ – ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಆದೇಶ

Udupi: ಉಡುಪಿ ಪ್ರವಾಸಿ ತಾಣಗಳ ಕಡೆ ಪ್ರವೇಶ ನಿರ್ಬಂಧ – ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಆದೇಶ

0 comments

ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸ್ಥಳಗಳಿಗೆ ಪ್ರವಾಸಿಗರು ಹಾಗೂ ಸಾರ್ವಜನಿಕರ ಭೇಟಿಗೆ ಜಿಲ್ಲಾಡಳಿತ ನಿರ್ಭಂಧ ಹಾಕಿದೆ. ಈಗ ವಿಧಿಸಿರುವ ನಿರ್ಬಂಧವನ್ನು ಆಗಸ್ಟ್ ತಿಂಗಳಾಂತ್ಯದ ವರೆಗೆ ಇರಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಅವರು ತಿಳಿಸಿದ್ದಾರೆ.

ಉಡುಪಿಗೆ ಈ ನಿರ್ಭಂಧ ಯಾಕೆ ?
ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪದ ಅರಶಿನ ಗುಂಡಿ ಜಲಪಾತದಲ್ಲಿ ನಡೆದ ದುರ್ಘಟನೆಯ ಬಳಿಕ ಜಿಲ್ಲಾಡಳಿತದಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಉಡುಪಿಯ ಬೀಚ್, ಜಲಪಾತ ಇತ್ಯಾದಿ ನೀರಿನ ಹಿನ್ನೆಲೆಯ ಸ್ಥಳಗಳು ಮಳೆಗಾಲದಲ್ಲಿ ತೀರಾ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಉಡುಪಿಯ ಮತ್ತು ಸುತ್ತಮುತ್ತಲ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಮತ್ತು ಸಾರ್ವಜನಿಕರ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ.

ಆದರೆ ಇದೀಗ ಮಳೆ ಇಲ್ಲದೆ ಕರಾವಳಿ ಶಾಂತವಾಗಿದೆ. ಉಡುಪಿಯಲ್ಲಿ ಕೂಡ ಮಳೆಯ ಲಕ್ಷಣಗಳೇ ಇಲ್ಲ. ಎಲ್ಲೆಡೆ ಜೋರಾಗಿ ಬಿಸಿಲು ಬೀಳುತ್ತಿದ್ದರೂ, ಈ ಹಿಂದೆ ರೆಡ್ ಮತ್ತು ಎಲ್ಲೋ ಅಲರ್ಟ್ ಇರುವ ಸಂದರ್ಭದಲ್ಲಿ ಹಾಕಿದ್ದ ನಿರ್ಬಂಧವನ್ನು ವಾಪಸ್ ಪಡೆಯದೆ ಇರುವ ಜಿಲ್ಲಾಡಳಿತದ ಕ್ರಮ ಅಚ್ಚರಿ ಮೂಡಿಸಿದೆ. ಇದೀಗ ಜಿಲ್ಲಾಧಿಕಾರಿಯವರು ನೀಡಿರುವ ನಿರ್ದೇಶನದಂತೆ, ಈ ತಿಂಗಳ ಅಂತ್ಯದವರೆಗೂ ಈ ಪ್ರವಾಸೀ ನಿರ್ಬಂಧ ಇರಲಿದೆ.

You may also like