Heavy Vehicle Rule: ಇಂದಿನಿಂದ ಭಾರೀ ವಾಹನ (Heavy Vehicle Rule ) ದಲ್ಲಿ ಸೀಟ್ ಬೆಲ್ಟ್ ಹಾಗೂ ಕ್ಯಾಮೆರಾ ಅಳವಡಿಕೆಯನ್ನು ಕಡ್ಡಾಯ ಮಾಡಿದೆ. ಕೇರಳದಲ್ಲಿ ಇಂದಿನಿಂದ ಇದು ಜಾರಿಗೆ ಬರಲಿದೆ. ಸಾರಿಗೆ ಸಚಿವ ಆಂಟನಿ ರಾಜು ಅವರು ರಸ್ತೆಯಲ್ಲಿ ಯಾವುದೇ ವಾಹನ ತಡೆದು ತಪಾಸಣೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ. ನ.1ರಿಂದ ಫಿಟ್ನೆಸ್ ಸರ್ಟಿಫಿಕೇಟ್ ಬೇಕಾದರೆ ಸೀಟ್ ಬೆಲ್ಟ್ ಮತ್ತು ಕ್ಯಾಮೆರಾ ಬೇಕು ಎಂದು ಈ ಹಿಂದೆಯೇ ಹೇಳಿದ್ದು, ಈ ನಿರ್ಧಾರ ಸಿದ್ಧ ಎಂದು ಸಚಿವರು ಹೇಳಿದ್ದಾರೆ.
ಹಾಗಾಗಿ ಇಂದಿನಿಂದ ಲಾರಿ, ಬಸ್ ಸೇರಿದಂತೆ ಭಾರೀ ವಾಹನಗಳ ಚಾಲಕರಿಗೆ ಸೀಟ್ ಬೆಲ್ಟ್ ಮತ್ತು ಕ್ಯಾಮೆರಾ ಕಡ್ಡಾಯಗೊಳಿಸಲಾಗಿದೆ. 5,200 ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸೀಟ್ ಬೆಲ್ಟ್ ಅಳವಡಿಸುವಂತೆ ಅ.31ರೊಳಗೆ ರಾಜ್ಯ ಸರಕಾರ ಸೂಚನೆ ನೀಡಿತ್ತು. ಇದೀಗ ಕೇರಳದ ಖಾಸಗಿ ಬಸ್ ಮಾಲೀಕರು ಈ ಕಡ್ಡಾಯ ಸೀಟ್ ಬೆಲ್ಟ್, ಕ್ಯಾಮೆರಾ ನೀತಿಗೆ ಟೀಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಯಾವ ಗ್ಯಾರಂಟಿಗಳು ಇಲ್ಲಾ ಅಂದ್ರೂ ನಿಮಗೆ ಸಿಗುತ್ತೆ 3 ಲಕ್ಷ ಸಾಲ – ಅರ್ಜಿ ಸಲ್ಲಿಸಿಸಲು ಮುಗಿಬಿದ್ದ ಜನ
