Home » ವೇಗವಾಗಿ ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿ ಯುವಕನೋರ್ವನ ಹುಚ್ಚಾಟ!

ವೇಗವಾಗಿ ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಲ್ಲಿ ಯುವಕನೋರ್ವನ ಹುಚ್ಚಾಟ!

0 comments

ವೇಗವಾಗಿ ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲಿನ ಬಾಗಿಲಿನಲ್ಲಿ ನಿಂತು ಯುವಕನೋರ್ವ ಪ್ರಾಣದ ಹಂಗು ತೊರೆದು ಹುಚ್ಚಾಟ ತೋರಿದ ಘಟನೆ ನಡೆದಿದೆ.

ಮಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ವಿಜಯಪುರಕ್ಕೆ
ಬರುತ್ತಿದ್ದ ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಬಾಗಿಲಿನಲ್ಲಿ ನಿಂತಿದ್ದ ಯುವಕ, ರೈಲಿನ ಬಾಗಿಲು ಹಿಡಿದು ಜೋಕಾಲಿ ಆಡುವುದು, ಸ್ವಲ್ಪ ಮುಂದೆ ಬಾಗಿ ಕೈಗೆ ಸಿಕ್ಕ ಗಿಡಗಳ ಎಲೆಗಳನ್ನು ಹರಿಯುವದು, ಅಲ್ಲದೇ ಕಾಲಿನಿಂದ ಒದೆಯಲು ಯತ್ನಿಸಿದ್ದಾನೆ.

ಈ ಯುವಕನ ದುಸ್ಸಾಹಸವನ್ನು ಅದೇ ಟ್ರೈನಿನಲ್ಲಿ
ಪ್ರಯಾಣಿಸುತ್ತಿದ್ದ ಮತ್ತೋರ್ವ ಯುವಕ ವಿಡಿಯೋ ಮಾಡಿದ್ದು, ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈತನ ಈ ಹುಚ್ಚಾಟಕ್ಕೆ ನೋಡುಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

You may also like

Leave a Comment