Home » ಮೊದಲ ಬಾರಿಗೆ ದೆಹಲಿಯಲ್ಲಿ ರಾರಾಜಿಸಿದ ತುಳು ಲಿಪಿ ಫಲಕ

ಮೊದಲ ಬಾರಿಗೆ ದೆಹಲಿಯಲ್ಲಿ ರಾರಾಜಿಸಿದ ತುಳು ಲಿಪಿ ಫಲಕ

0 comments

ದೆಹಲಿ :ಅದೆಷ್ಟೇ ಭಾಷೆ ಇದ್ದರೂ ತುಳುವರಿಗೆ ತುಳು ಭಾಷೆಯೇ ಹತ್ತಿರವಾದದ್ದು.ಹಲವು ತುಳುವರ ಹೋರಾಟ ತುಳುನಾಡಿಗೆ ಸಂಬಂಧಿಸಿದಂತೆ ಇಂದಿಗೂ ನಡೆಯುತ್ತಲೇ ಇದೆ.

ಇದೀಗ ದೆಹಲಿಯಲ್ಲಿ ನಡೆದ ಕರ್ನಾಟಕ ಆಹಾರ ಮೇಳದಲ್ಲಿ ತುಳುನಾಡ ಅಡುಗೆ ವಿಶೇಷ ಕೌಂಟರ್ ನಲ್ಲಿ ತುಳು ಲಿಪಿ ಫಲಕ ರಾರಾಜಿಸುವ ಮೂಲಕ ತುಳುವರ ಗೌರವ ಹೆಚ್ಚಿಸಿದೆ.

ಹೌದು. ದೆಹಲಿಯಲ್ಲಿ ನಡೆದ ಈ ಅಡುಗೆ ಕೌಂಟರ್ ನಲ್ಲಿ ಮೋಹಿನಿ ರೈ ಎಂಬುವವರು ತುಳುವಿನಲ್ಲಿ ಬರೆದ ಫಲಕ ಹಾಕುವ ಮೂಲಕ,ದೆಹಲಿಯಲ್ಲಿ ಕಂಡ ಮೊದಲ ಬಾರಿಯ ತುಳು ಲಿಪಿ ಫಲಕವು ಇದಾಗಿಸಿದ್ದಾರೆ.ಬಂದ ಅತಿಥಿಗಳು ಮತ್ತು ಸಾರ್ವಜನಿಕರಿಗೆ ತುಳು ಲಿಪಿ ಕಾರ್ಡ್ ಕೊಟ್ಟು ತುಳು ಭಾಷೆಯ ಬಗ್ಗೆ ಅಭಿಮಾನ ಹುಟ್ಟಿಸುವ ಕೆಲಸವು ಈ ಸಂದರ್ಭದಲ್ಲಿ ನಡೆಯಿತು.

You may also like

Leave a Comment