Home » Malpe Beach: ಸ್ಕೂಟಿ ಸಮೇತ ಸಮುದ್ರಕ್ಕೆ ಬಿದ್ದ ಮೀನುಗಾರ ಮೃತ್ಯು!!!

Malpe Beach: ಸ್ಕೂಟಿ ಸಮೇತ ಸಮುದ್ರಕ್ಕೆ ಬಿದ್ದ ಮೀನುಗಾರ ಮೃತ್ಯು!!!

0 comments

Udupi Malpe: ಮಲ್ಪೆ ಬಂದರಿನಲ್ಲಿ (Malpe Beach) ಹೋಗುತ್ತಿದ್ದ ಮೀನುಗಾರನೋರ್ವ ತನ್ನ ಸ್ಕೂಟಿ ಸಮೇತ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆಯೊಂದು ನಡೆದಿದೆ. ತಮಿಳುನಾಡು ಮೂಲದ ಮೀನುಗಾರ ಆಕಸ್ಮಿಕವಾಗಿ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ನೀರಿಗೆ ಬಿದ್ದು ಮೃತಹೊಂದಿದ್ದಾನೆ ಎಂದು ವರದಿಯಾಗಿದೆ.

ಮೃತ ವ್ಯಕ್ತಿ ಮಲ್ಪೆಯ ಬೋಟು ಒಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಎನ್ನಲಾಗಿದೆ. ಅಚಾನಕ್‌ ನೀರಿಗೆ ಬಿದ್ದದ್ದ ವ್ಯಕ್ತಿಯನ್ನು ರಕ್ಷಿಸಲು ಮುಳುಗು ತಜ್ಞ ಈಶ್ವರ್‌ ಮಲ್ಪೆ ಮುಂದಾಗಿದ್ದು, ಆದರೆ ಸುಮಾರು ಹೊತ್ತಿನ ಬಳಿಕ ಸ್ಕೂಟಿ, ಮೀನುಗಾರನ ಶವ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ. ಕ್ರೇನ್‌ ಬಳಸಿ ಸ್ಕೂಟಿ ಮತ್ತು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಈ ಕುರಿತು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment