Home » Udupi Murder: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಆರೋಪಿಗೆ 14 ದಿನ ಪೊಲೀಸ್‌ ಕಸ್ಟಡಿ!! ತನಿಖಾಧಿಕಾರಿ ಮುಂದೆ ಹಂತಕ ಹೇಳಿದ್ದೇನು?

Udupi Murder: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಆರೋಪಿಗೆ 14 ದಿನ ಪೊಲೀಸ್‌ ಕಸ್ಟಡಿ!! ತನಿಖಾಧಿಕಾರಿ ಮುಂದೆ ಹಂತಕ ಹೇಳಿದ್ದೇನು?

0 comments

ಉಡುಪಿ: ಉಡುಪಿ ಮಾತ್ರವಲ್ಲ ಇಡೀ ರಾಜ್ಯವೇ ಬೆಚ್ಚಿಬೀಳಿಸಿದ ಘಟನೆಯೇ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ. ಇದೀಗ ಬಂಧಿತ ಆರೋಪಿ ಪ್ರವೀಣ್‌ ಚೌಗುಲೆಯನ್ನು ಇಂದು ಸಂಜೆ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಧೀಶರಾದ ಶ್ಯಾಮ್‌ ಪ್ರಕಾಶ್‌ ಅವರು ಆರೋಪಿಯನ್ನು ಹದಿನಾಲ್ಕು ದಿನ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದ್ದಾರೆ ಎಂದು ವರದಿಯಾಗಿದೆ.

ಪ್ರಕರಣದ ಆರೋಪಿಯ ಸಂಪೂರ್ಣ ತನಿಖೆ ನಡೆಯದ ಹೊರತು ಸ್ಪಷ್ಟ ಮಾಹಿತಿ ಹೇಳಲು ಅಸಾಧ್ಯ. ಆದರೆ ಆರೋಪಿ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದರಿಂದ ಕೃತ್ಯ ನಡೆಸಿರುವುದನ್ನು ಒಪ್ಪಿಕೊಂಡಿದ್ದಾನೆ. ಈತನ ಉದ್ದೇಶ ಅಯ್ನಾಝ್‌ ಕೊಲೆ ಮಾಡುವುದಾಗಿತ್ತು. ಆರೋಪಿ ತಪ್ಪಿಸಿಕೊಳ್ಳಲು ಮತ್ತು ಸಾಕ್ಷಿ ನಾಶ ಮಾಡಲು ಇತರರ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಗೆ ಹೇಳಿಕೊಂಡಿದ್ದಾನೆ ಎಂದು ಉಡುಪಿ ಎಸ್ಪಿ ಹೇಳಿದ್ದಾರೆ.

ಅಯ್ನಾಝ್‌ ಮತ್ತು ಪ್ರವೀಣ್‌ ಚೌಗುಲೆ ನಡುವಿನ ಸಂಬಂಧಗಳ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ಉಡುಪಿ ಎಸ್‌ಪಿ ಡಾ.ಅರುಣ್‌ ಹೇಳಿಕೆ ನೀಡಿದ್ದಾರೆ.

You may also like

Leave a Comment