Home » Udupi News: ಅಯ್ಯಪ್ಪ ವೃತಧಾರಿ ಕೆಂಡ ಹಾಯುವಾಗ ದುರ್ಘಟನೆ; ಕೆಂಡದ ರಾಶಿಗೆ ಬಿದ್ದ ಸ್ವಾಮಿ!!!

Udupi News: ಅಯ್ಯಪ್ಪ ವೃತಧಾರಿ ಕೆಂಡ ಹಾಯುವಾಗ ದುರ್ಘಟನೆ; ಕೆಂಡದ ರಾಶಿಗೆ ಬಿದ್ದ ಸ್ವಾಮಿ!!!

0 comments

Udupi: ಅಯ್ಯಪ್ಪ ಮಾಲಾಧಾರಿ ವ್ಯಕ್ತಿಯೊಬ್ಬರು ಕೆಂಡ ಸೇವೆ ನಡೆಸುತ್ತಿದ್ದ ಸಂದರ್ಭದಲ್ಲಿ ಬೆಂಕಿಗೆ ಬಿದ್ದ ಘಟನೆಯೊಂದು ಮಲ್ಪೆಯಲ್ಲಿ ನಡೆದಿದೆ. ಈ ಘಟನೆ ಕುರಿತು ವೀಡಿಯೋ ಇದೀಗ ವೈರಲ್‌ ಆಗಿದೆ.

ಮಲ್ಪೆಯ ಅಯ್ಯಪ್ಪ ಮಂದಿರದ ವಾರ್ಷಿಕೋತ್ಸವ ಸಂದರ್ಭದಲ್ಲಿ ಈ ಅವಘಡ ನಡೆದಿದೆ. ಮಲಾಧಾರಿ ವ್ಯಕ್ತಿ ಕೆಂಡ ಹಾಯುವ ವೇಳೆ ಆಯತಪ್ಪಿ ಬಿದ್ದಿದ್ದಾರೆ ಎಂದು ವರದಿಯಾಗಿದೆ. ಕೂಡಲೇ ಇತರೆ ಅಯ್ಯಪ್ಪ ಮಾಲಾಧಾರಿಗಳು ಆ ವ್ಯಕ್ತಿಯನ್ನು ಎತ್ತಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬರಿ ಮೈಯಲ್ಲಿ ಕೆಂಡ ಹಾಯುತ್ತಿದ್ದರಿಂದ ಮೈಯಲ್ಲಿ ಸುಟ್ಟ ಗಾಯಗಳಾಗಿದೆ ಎಂದು ವರದಿಯಾಗಿದೆ.

ಕರಾವಳಿಯಲ್ಲಿ ಕೆಂಡ ಸೇವೆ ಒಂದು ಸಂಪ್ರದಾಯ. ಕುದಿಯುವ ಬಾಣಲೆಯಿಂದ ಅಪ್ಪ ಪ್ರಸಾದವನ್ನು ತೆಗೆಯುವ ಸಂಪ್ರದಾಯ ಕೂಡಾ ಇದ್ದು, ಅಚಲ ವೃತ ಅಯ್ಯಪ್ಪ ಮಾಲಾಧಾರಿಗಳು ನಿರಾಸಾಯವಾಗಿ ಮಾಡುತ್ತಾರೆ.

You may also like

Leave a Comment