Home » Udupi: ಶ್ರಾದ್ದ ಪೂಜೆ ಕೆಲಸ ಬೇರೆಯವರಿಗೆ ನೀಡಿದ್ದಕ್ಕೆ ಮನೆಗೆ ನುಗ್ಗಿ ಗಲಾಟೆ ಮಾಡಿ ಬೆದರಿಕೆ ಹಾಕಿದ ಅರ್ಚಕ

Udupi: ಶ್ರಾದ್ದ ಪೂಜೆ ಕೆಲಸ ಬೇರೆಯವರಿಗೆ ನೀಡಿದ್ದಕ್ಕೆ ಮನೆಗೆ ನುಗ್ಗಿ ಗಲಾಟೆ ಮಾಡಿ ಬೆದರಿಕೆ ಹಾಕಿದ ಅರ್ಚಕ

0 comments

Udupi: ಶ್ರಾದ್ದ ಕಾರ್ಯದ ಪೂಜೆ ತನಗೆ ನೀಡಿಲ್ಲ ಎಂದು ಸಿಟ್ಟುಗೊಂಡ ಅರ್ಚಕರೊಬ್ಬರು ಮೃತರ ಮನೆಗೆ ತೆರಳಿ ಗಲಾಟೆ ಮಾಡಿದ ಘಟನೆಯೊಂದು ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ನಡೆದಿದೆ ಬ್ರಹ್ಮಾವರದ ತಾಲೂಕಿನ ಹೊಸೂರು ಗ್ರಾಮದಲ್ಲಿ. ರಾಘವೇಂದ್ರ ಎಂಬುವವರ ಮನೆಯಲ್ಲಿ ಕೆಲವು ದಿನಗಳ ಹಿಂದೆ ತಾಯಿ ಮೃತ ಹೊಂದಿದ್ದರು. ಮಾರ್ಚ್‌ 6 ರಂದು ರಾಘವೇಂದ್ರ ಅವರ ಮನೆಯಲ್ಲಿ ಮೃತರ ಶ್ರಾದ್ಧಕಾರ್ಯ ನಡೆದಿತ್ತು. ಈ ಕಾರ್ಯಕ್ರಮ ನಡೆದ ಬಳಿಕ ರಾಘವೇಂದ್ರ ಅವರ ಮನೆಗೆ ಅತಿಕ್ರಮವಾಗಿ ಪ್ರವೇಶ ಮಾಡಿದ್ದ ಅರ್ಚಕ ರಾಮಕೃಷ್ಣ ಪೂಜೆಯನ್ನು ಬೇರೆಯವರಿಗೆ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾಘವೇಂದ್ರ ಅವರ ಕುಟುಂಬವನ್ನು ಸರ್ವನಾಶ ಮಾಡುತ್ತೇನೆ ಎಂಬ ಬೆದರಿಕೆ ಹಾಕಿರುವುದಾಗಿ ವರದಿಯಾಗಿದೆ.

ಜಾತಿ ನಿಂದನೆ ಮಾಡಿ ಬೆದರಿಕೆ ಒಡ್ಡಿದ ಆರೋಪ ಕೂಡಾ ವ್ಯಕ್ತವಾಗಿದ್ದು, ಈ ಕುರಿತು ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಅರ್ಚಕನ ವಿರುದ್ಧ ಪ್ರಕರಣ ದಾಖಲಾಗಿದೆ.

You may also like

Leave a Comment