Home » ಉಡುಪಿ : ಡೆಂಗ್ಯೂ ಪ್ರಕರಣ ಹೆಚ್ಚಳ ಕಾರಣ, 10 ದಿನ ಶಾಲೆಗೆ ರಜೆ ಘೋಷಿಸಿದ ಡಿ.ಸಿ!!!

ಉಡುಪಿ : ಡೆಂಗ್ಯೂ ಪ್ರಕರಣ ಹೆಚ್ಚಳ ಕಾರಣ, 10 ದಿನ ಶಾಲೆಗೆ ರಜೆ ಘೋಷಿಸಿದ ಡಿ.ಸಿ!!!

0 comments

ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರದ ಬೈಂದೂರು ತಾಲೂಕಿನ ಜಡ್ಕಲ್ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರದ ಪ್ರಕರಣ ಹೆಚ್ಚಾದ ಕಾರಣ ಜಡ್ಕಲ್‌ನಲ್ಲಿರುವ ಮುದೂರು ಶಾಲೆಯನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಕೂರ್ಮಾರಾವ್ ಆದೇಶ ಹೊರಡಿಸಿದ್ದಾರೆ.

ಜಡ್ಕಲ್ ಮುದೂರು ಭಾಗದಲ್ಲಿ ನಿರಂತರವಾಗಿ ಡೆಂಗ್ಯೂ ಹೆಚ್ಚುತ್ತಿರುವ ಕಾರಣದಿಂದ ಒಟ್ಟು 10 ದಿನಗಳ ಕಾಲ ಶಾಲೆಗೆ ರಜೆ ಘೋಷಣೆ ಮಾಡಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಈ ಭಾಗದ ಪ್ರತಿ ಮನೆಗಳಿಗೂ ಭೇಟಿ ನೀಡುತ್ತಿರುವ ಆರೋಗ್ಯ ಕಾರ್ಯಕರ್ತರು ಭೇಟಿ ನೀಡುತ್ತಿದ್ದು, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಲು, ನೈರ್ಮಲ್ಯಕ್ಕೆ ಆದ್ಯತೆ ನೀಡಲು ಸೂಚನೆ ನೀಡಲಾಗುತ್ತಿದೆ.

You may also like

Leave a Comment