Home » Mangaluru: ಉಳ್ಳಾಲ ಸಮುದ್ರದಲ್ಲಿ ನೀರಾಟಕ್ಕಿಳಿದ ಯುವಕರು; ಇಬ್ಬರು ಸಮುದ್ರಪಾಲು, ಓರ್ವನ ರಕ್ಷಣೆ!!!

Mangaluru: ಉಳ್ಳಾಲ ಸಮುದ್ರದಲ್ಲಿ ನೀರಾಟಕ್ಕಿಳಿದ ಯುವಕರು; ಇಬ್ಬರು ಸಮುದ್ರಪಾಲು, ಓರ್ವನ ರಕ್ಷಣೆ!!!

0 comments

Mangaluru: ಅರಬ್ಬಿ ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಪ್ರವಾಸಿಗರು ಸಾವನ್ನಪ್ಪಿರುವಂತಹ ಘಟನೆಯೊಂದು ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ.

ಸಲ್ಮಾನ್‌ (19), ಬಶೀರ್‌ (23) ಮೃತ ಯುವಕರು ಎಂದು ಟಿವಿ9 ವರದಿ ಮಾಡಿದೆ. ಇನ್ನೋರ್ವ ಯುವಕ ಸೈಫ್‌ ಆಲಿ ಕಡಲಿನ ಸೆಳೆತಕ್ಕೆ ಸಿಲುಕಿದ್ದು ಆತನನ್ನು ಸ್ಥಳಿಯ ಜೀವರಕ್ಷಕ ತಂಡ ರಕ್ಷಣೆ ಮಾಡಿದೆ.

ಬದುಕುಳಿದ ಸೈಫ್‌ ಆಲಿ

 

ಈ ಮೂವರು ಚಿಕ್ಕಮಗಳೂರು ಮೂಲದವರು. ಇವರು ಉಳ್ಳಾಲ ದರ್ಗಾಗೆ ಬಂದಿದ್ದಾಗ ಈ ಘಟನೆ ಸಂಭವಿಸಿದೆ. ಈ ಘಟನೆ ಕುರಿತು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment