Home » UP Crime: ಅಯೋಧ್ಯೆಯ ಹನುಮಾನ್‌ ದೇವಸ್ಥಾನದ ಅರ್ಚಕನ ಕತ್ತು ಸೀಳಿ ಭೀಕರ ಕೊಲೆ!

UP Crime: ಅಯೋಧ್ಯೆಯ ಹನುಮಾನ್‌ ದೇವಸ್ಥಾನದ ಅರ್ಚಕನ ಕತ್ತು ಸೀಳಿ ಭೀಕರ ಕೊಲೆ!

by Mallika
0 comments
UP Crime

UP Crime: ಅಯೋಧ್ಯೆ ಜಿಲ್ಲೆಯ ರಾಮ ಜನ್ಮಭೂಮಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ಧ ಪೀಠ ಹನುಮಾನ್‌ಗರ್ಹಿ ದೇವಸ್ಥಾನದ ಸಂಕೀರ್ಣದಲ್ಲಿರುವ ಆಶ್ರಮದಲ್ಲಿ ಅರ್ಚಕರೋರ್ವರನ್ನು ಇರಿದು ಹತ್ಯೆ ಮಾಡಲಾಗಿದೆ(UP Crime news) . ಕುತ್ತಿಗೆ, ಎದೆ ಮತ್ತು ಬೆನ್ನಿನ ಮೇಲೆ ಹರಿತವಾದ ಆಯುಧಗಳ ಆಳವಾದ ಗುರುತುಗಳಿವೆ. ಮೊದಲು ತೆಳುವಾದ ತಂತಿಯಿಂದ ಕತ್ತು ಹಿಸುಕಿ ನಂತರ ಚಾಕುವಿನಿಂದ ಇರಿದಿರುವ ಶಂಕೆ ವ್ಯಕ್ತವಾಗಿದೆ.

ಗುರುವಾರ ಬೆಳಗ್ಗೆ ಈ ಮಾಹಿತಿ ಸಿಕ್ಕಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಎಸ್‌ಎಸ್‌ಪಿ ರಾಜಕರಣ್ ನಾಯರ್, ಎಸ್‌ಪಿ ಸಿಟಿ ಮಧುಬನ್ ಸಿಂಗ್, ಸಿಒ ಬಿಕಾಪುರ್ ಡಾ.ರಾಜೇಶ್ ತಿವಾರಿ ಸೇರಿದಂತೆ ವಿಧಿವಿಜ್ಞಾನ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಮೃತ ಸಾಧುವನ್ನು ರಾಮ್ ಸಹರೆ ದಾಸ್ (44) ಎಂದು ಗುರುತಿಸಲಾಗಿದೆ.

ಹನುಮಂತನಗರದ ಮೆಟ್ಟಿಲು ಪಕ್ಕದ ಅವರ ಕೊಠಡಿಯಲ್ಲಿ ಶವ ಪತ್ತೆಯಾಗಿದೆ. ಇವರೊಂದಿಗೆ ಇವರ ಇಬ್ಬರು ಶಿಷ್ಯರು ಅವರೊಂದಿಗೆ ಕೋಣೆಗೆ ಹೋಗುತ್ತಿದ್ದರು. ಇವರು ಬಿಟ್ಟರೆ ಬೇರೆಯವರಿಗೆ ಅವಕಾಶವಿರಲಿಲ್ಲ.
ಓರ್ವ ಶಿಷ್ಯನನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನೋರ್ವ ಶಿಷ್ಯ ಕಾಣೆಯಾಗಿದ್ದಾನೆ.

ನಿನ್ನೆ ರಾತ್ರಿ ರಾಮ್‌ ಸಹ್ರೇ ದಾಸ್‌ ಅವರಿಗೂ ಅವರ ಶಿಷ್ಯರಿಗೂ ಜಗಳ ಆಗಿರುವ ಕುರಿತು ಮಾಹಿತಿ ತಿಳಿದು ಬಂದಿದೆ. ತನಿಖೆಯ ನಂತರ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Rabi Crops MSP: ರೈತರಿಗೆ ಸಕ್ಕರೆಯಂತಹ ಸಿಹಿ ಸುದ್ದಿ! 6 ಬೆಳೆಗಳಿಗೆ ಭರ್ಜರಿ ಬೆಂಬಲ ಬೆಲೆ ಘೋಷಿಸಿದ ಕೇಂದ್ರ!!!

You may also like

Leave a Comment