Home » ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ನ ಪ್ರೇಮ ಪುರಾಣ, ಶಾಲಾ ಬಾಲಕಿಯೊಂದಿದೆ ಓಡಿ ಹೋದ ಪೊಲೀಸಪ್ಪ | ದೂರು ದಾಖಲು

ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ನ ಪ್ರೇಮ ಪುರಾಣ, ಶಾಲಾ ಬಾಲಕಿಯೊಂದಿದೆ ಓಡಿ ಹೋದ ಪೊಲೀಸಪ್ಪ | ದೂರು ದಾಖಲು

by Mallika
0 comments

ರಕ್ಷಕರೇ ಕೆಲವೊಮ್ಮೆ ತಪ್ಪು ಮಾಡಿದಾಗ ನಮಗೆ ಏನು ಹೇಳಬೇಕು ಎಂದು ಅನಿಸುವುದಿಲ್ಲ. ಅದಕ್ಕೆ ಉದಾಹರಣೆಯಾಗಿ ನಿಂತಿದೆ ಈ ಘಟನೆ. ಏಕೆಂದರೆ ಇಲ್ಲೊಬ್ಬ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಶಾಲಾ ಬಾಲಕಿಯೊಂದಿಗೆ ಓಡಿ ಹೋಗಿದ್ದಾನೆ. ನಂಬಲು ಅಸಾಧ್ಯ, ಆದರೆ ಇದು ನಿಜ. ಹೌದು, ಇದನ್ನೇ ದೊಡ್ಡವರು ಹೇಳೋದು, ಬೇಲಿಯೇ ಎದ್ದು ಹೊಲ ಮೇಯೋದು ಎಂದು.

ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆರಕ್ಷರರೊಬ್ಬರು ಇಂಥದ್ದೊಂದು ಕೆಟ್ಟ ಕೆಲಸಕ್ಕೆ ಕೈ ಹಾಕಿದ್ದು, ಇದನ್ನು ತಿಳಿದ ಅಲ್ಲಿನ ಜನ ನಿಜಕ್ಕೂ ಕಕ್ಕಾಬಿಕ್ಕಿಯಾಗಿದ್ದಾರೆ. ಲಖಿಂಪುರ ಖೇರಿ ಜಿಲ್ಲೆಯಲ್ಲಿ ಶಾಲಾ ಬಾಲಕಿಯೊಂದಿಗೆ ಪೊಲೀಸ್​ ಅಧಿಕಾರಿಯೊಬ್ಬ ಓಡಿ ಹೋಗಿರುವ ಘಟನೆ ಸಾರ್ವಜನಿಕರಲ್ಲಿ ಕಳವಳ ಉಂಟುಮಾಡಿದೆ ಎಂದರೆ ತಪ್ಪೇನಿಲ್ಲ.

ಜೋಗೇಂದ್ರ ಸಿಂಗ್ ಎಂಬುವವರೇ ಬಾಲಕಿಯೊಂದಿಗೆ ಪಲಾಯನ ಮಾಡಿರುವ ಎಸ್‌ಐ. ಈ ಘಟನೆಯು ಬಾಲಕಿಯ ಕುಟುಂಬಸ್ಥರು, ಸಂಬಂಧಿಕರೂ ಸೇರಿದಂತೆ ಇಡೀ ಪ್ರದೇಶದಲ್ಲಿ ಆಘಾತ ಉಂಟುಮಾಡಿದೆ. ಇಲ್ಲಿನ ಪಲಿಯಾ ಚೌಕಿ ಪ್ರಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜೋಗೇಂದ್ರ ಸಿಂಗ್ ಎರಡು ದಿನಗಳ ಹಿಂದೆ ಬಾಲಕಿಯೊಂದಿಗೆ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿ ಜೋಗೇಂದ್ರ ಸಿಂಗ್ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿದ್ದರು. ಈ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದ ಎಸ್‌ಐ ಆಗಾಗ್ಗೆ ಆಕೆಯೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಎಂಬ ಮಾಹಿತಿ ದೊರೆತಿದೆ. ಬಾಲಕಿಯ ತಂದೆ ದೂರು ದಾಖಲು ಮಾಡಿದ್ದಾರೆ.

You may also like

Leave a Comment