Home » ಶಾಕಿಂಗ್ ನ್ಯೂಸ್ : ಹುಟ್ಟಿದಹಬ್ಬದಂದು ಫೋನ್ ಗಿಫ್ಟ್ ನೀಡಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ 18 ರ ಯುವತಿ| ಪಬ್ ಜಿ ಗೇಮ್ ಆಡಲು ಬೇಕಿತ್ತು ಫೋನ್|

ಶಾಕಿಂಗ್ ನ್ಯೂಸ್ : ಹುಟ್ಟಿದಹಬ್ಬದಂದು ಫೋನ್ ಗಿಫ್ಟ್ ನೀಡಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ 18 ರ ಯುವತಿ| ಪಬ್ ಜಿ ಗೇಮ್ ಆಡಲು ಬೇಕಿತ್ತು ಫೋನ್|

0 comments

18 ವರ್ಷದ ಬಾಲಕಿಯೊಬ್ಬಳು ಶುಕ್ರವಾರ ( ಫೆ.18) ತನ್ನ ತಂದೆ ತಾಯಿ ಪಬ್ ಜಿ ಗೇಮ್ ಆಡಲು ಹೊಸ ಫೋನ್ ಕೊಟ್ಟಿಲ್ಲವೆಂದು ನೇಣಿಗೆ ಶರಣಾಗಿದ್ದಾಳೆ.

ಈ ಘಟನೆ ಜೈಪುರ ಸೋಡಾಲಾ ಪ್ರದೇಶದಲ್ಲಿ ನಡೆದಿದೆ. 12 ನೆಯ ತರಗತಿಯಲ್ಲಿ ಓದುತ್ತಿದ್ದ 18 ವರ್ಷದ ವಿದ್ಯಾರ್ಥಿನಿಯ ಹುಟ್ಟಿದ ಹಬ್ಬ ಫೆಬ್ರವರಿ 13 ರಂದು ನಡೆದಿತ್ತು. ಈ ಸಂದರ್ಭದಲ್ಲಿ ಆಕೆ ಫೋನ್ ಗಾಗಿ ಬೇಡಿಕೆ ಇಟ್ಟಿದ್ದಾಳೆ. 12 ನೇ ತರಗತಿಯ ಪರೀಕ್ಷೆ ಮುಗಿಯಲಿ ನಂತರ ಹೊಸ ಫೋನ್ ಕೊಡಿಸುವೆ ಎಂದು ತಂದೆ ಭರವಸೆ ಕೊಟ್ಟಿದ್ದಾರೆ.

ಆದರೂ ತನಗೆ ಪಬ್ ಜಿ ಆಡಲು ಫೋನ್ ಉಡುಗೊರೆಯಾಗಿ ಕೊಟ್ಟಿಲ್ಲವೆಂದು ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

You may also like

Leave a Comment