Home » Uttar Pradesh: ಬೆತ್ತಲೆ ಕಾಣೋ ಕನ್ನಡಿಯಲ್ಲಿ ಹುಡುಗಿಯರನ್ನು ಕಾಣೋ ಆಸೆ !! ಮರ ಮುಪ್ಪಾದರೂ ಹುಳಿ ಮುಪ್ಪೇ ಎನ್ನುತ್ತ ಲಕ್ಷ ಲಕ್ಷ ಪೀಕಿದ ವೃದ್ಧ !!

Uttar Pradesh: ಬೆತ್ತಲೆ ಕಾಣೋ ಕನ್ನಡಿಯಲ್ಲಿ ಹುಡುಗಿಯರನ್ನು ಕಾಣೋ ಆಸೆ !! ಮರ ಮುಪ್ಪಾದರೂ ಹುಳಿ ಮುಪ್ಪೇ ಎನ್ನುತ್ತ ಲಕ್ಷ ಲಕ್ಷ ಪೀಕಿದ ವೃದ್ಧ !!

0 comments

Uttar Pradesh: ಹಲವಾರು ಜನರು ಪ್ರೀತಿ ಪ್ರೇಮದ ಬಲೆಯಲ್ಲಿ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಹೌದು, 72 ವರ್ಷದ ವೃದ್ಧನೋರ್ವ ಬೆತ್ತಲೆ ಕನ್ನಡಿಯಲ್ಲಿ ಹುಡುಗಿಯರನ್ನು ಕಾಣೋ ಆಸೆಗೆ ಬರೋಬ್ಬರಿ 9 ಲಕ್ಷ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

ಅವಿನಾಶ್‌ ಕುಮಾರ್‌ ಶುಕ್ಲಾ (72) ಎಂಬ ವೃದ್ಧನಿಗೆ ಪಶ್ಚಿಮ ಬಂಗಾಳದ (West Bengal) ಮೂರು ವ್ಯಕ್ತಿಗಳು ಕನ್ನಡಿ ಕೊಟ್ಟು, ಇದರಲ್ಲಿ ಎಲ್ಲರೂ ಬೆತ್ತಲಾಗಿ ಕಾಣುತ್ತಾರೆ. ಇದು ಭವಿಷ್ಯವನ್ನು ತೋರಿಸುತ್ತದೆ. ಇದನ್ನು ನಾಸಾ ವಿಜ್ಞಾನಿಗಳು (Nasa Scientist) ಬಳಸಿದ್ದಾರೆ ಎಂದು ಸುಳ್ಳು ಹೇಳಿ ಕನ್ನಡಿ ಕೊಳ್ಳುವಂತೆ ಮಾಡಿದ್ದರು.
ಇದನ್ನು ನಂಬಿದ ವೃದ್ಧ ಬರೋಬ್ಬರಿ 9 ಲಕ್ಷ ರೂ. ಕೊಟ್ಟು ಮ್ಯಾಜಿಕ್‌ ಕನ್ನಡಿ ಖರೀದಿಸಿದ್ದು, ಆನಂತರ ಇದರಲ್ಲಿ ಯಾವುದೇ ಮ್ಯಾಜಿಕ್‌ ಇಲ್ಲ, ತನಗೆ ವಂಚಿಸಲಾಗಿದೆ ಎಂಬುದು ಅರಿವಿಗೆ ಬಂದ ವೃದ್ಧ ಪೊಲೀಸರಿಗೆ ದೂರು ನೀಡಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಥ ಸಿಂಗ್ರೇ, ಮೊಲಯ ಸರ್ಕಾರ್‌, ಸುದೀಪ್ತ ಸಿನ್ಹಾ ರಾಯ್‌ ಎಂಬ ಮೂವರು ವಂಚಕರನ್ನು ಬಂಧಿಸಲಾಗಿದೆ. ಅಲ್ಲದೇ ಬಂಧಿತರಿಂದ 5 ಮೊಬೈಲುಗಳು, ಅತಿಂದ್ರೀಯ ಶಕ್ತಿ ಪ್ರದರ್ಶಿಸುವ ವಿಡಿಯೋ 28 ಸಾವಿರ ರು.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

You may also like