Home » Uttar Pradesh rail tragedy: ಸಿಟ್ಟುಗೊಂಡು ಸಾಯಲು ಬಂದ ಹೆಂಡತಿಯ ಸಮಾಧಾನ ಪಡಿಸಿ, ರೈಲ್ವೇ ಹಳಿಯಲ್ಲಿ ತಬ್ಬಿಕೊಂಡ ಪತಿ! ಆದರೆ ವಿಧಿ…

Uttar Pradesh rail tragedy: ಸಿಟ್ಟುಗೊಂಡು ಸಾಯಲು ಬಂದ ಹೆಂಡತಿಯ ಸಮಾಧಾನ ಪಡಿಸಿ, ರೈಲ್ವೇ ಹಳಿಯಲ್ಲಿ ತಬ್ಬಿಕೊಂಡ ಪತಿ! ಆದರೆ ವಿಧಿ…

by Mallika
1 comment
Uttar Pradesh rail tragedy

Uttar Pradesh rail tragedy: ಸಣ್ಣ ಪುಟ್ಟ ವಿಷಯಗಳಿಗೆ ಪತಿ-ಪತ್ನಿಯರ ನಡುವೆ ಮನೆಯಲ್ಲಿ ಜಗಳ ನಡೆಯುವುದು ಸಾಮಾನ್ಯ. ಸಾಮಾನ್ಯವಾಗಿ ಈ ಜಗಳಗಳು ಮನೆಯೊಳಗೆ ನಾಲ್ಕು ಗೋಡೆಯ ಮಧ್ಯೆ ಪರಿಹಾರ ಕಂಡರೆ ಒಳ್ಳೆಯದು. ಆದರೆ ಈ ಜಗಳಗಳು ಮನೆಯಿಂದ ಹೊರಬಂದಾಗ, ಅವು ಯಾವ ಪರಿಣಾಮಗಳಿಗೆ ಕಾರಣವಾಗುತ್ತವೆ? ಪತಿ-ಪತ್ನಿಯ ನಡುವಿನ ಜಗಳ ಕೊನೆಗೆ ಏನಾಯಿತು ಎಂಬ ಘಟನೆಯೊಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಬೆಳಕಿಗೆ ಬಂದಿದೆ.

ಪತಿಯ ಕುಡಿತದ ಚಟದಿಂದ ಕೋಪಗೊಂಡ ಪತ್ನಿ ಆತನನ್ನು ಹೆದರಿಸಲು ರೈಲ್ವೆ ಹಳಿ ಹೋಗಿದ್ದಾಳೆ. ಅವಳನ್ನು ಸಮಾಧಾನ ಪಡಿಸಲೆಂದು ಗಂಡನೂ ಅವಳ ಹಿಂದೆ ಹೋದನು. ಇಬ್ಬರ ನಡುವೆ ರಾಜಿ ಸಂಧಾನ ನಡೆಯುತ್ತಿದ್ದಾಗ ಏಕಾಏಕಿ ಅತಿವೇಗದಲ್ಲಿ ಬಂದ ರೈಲು ಇಬ್ಬರ ಮೇಲೆ ಹೋಗಿದೆ(Uttar Pradesh rail tragedy). ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವಾರಣಾಸಿ ಪೊಲೀಸರ ಪ್ರಕಾರ, ಸಾರಾನಾಥ್ ಪೊಲೀಸ್ ಠಾಣೆ ವ್ಯಾಪ್ತಿಯ ಪಂಚಕೋಸಿ ರೈಲ್ವೇ ಕ್ರಾಸಿಂಗ್ ಬಳಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಗೋವಿಂದ್ ಸೋಂಕರ್ (30) ಆತನ ಪತ್ನಿ ಖುಷ್ಬೂ ಸೋಂಕರ್ (28) ಇವರಿಬ್ಬರೇ ಮೃತ ಹೊಂದಿದವರು.

ಬುಧವಾರ ರಾತ್ರಿ ಗೋವಿಂದ್ ಕುಡಿದು ಮನೆಗೆ ಬಂದಾಗ, ಖುಷ್ಬೂ ಆತನೊಂದಿಗೆ ಜಗಳವಾಡಿದ್ದಾಳೆ. ಖುಷ್ಬೂ ಕೋಪದಿಂದ ರೈಲ್ವೇ ಹಳಿ ಬಳಿ ಬಂದಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಗೋವಿಂದ್ ಕೂಡ ಕುಡಿದ ಅಮಲಿನಲ್ಲಿ ಟ್ರ್ಯಾಕ್ ನಲ್ಲಿ ಆಕೆಯನ್ನು ಹಿಂಬಾಲಿಸಿದ್ದಾನೆ.

ಜಗಳದ ವೇಳೆ ಖುಷ್ಬೂ ಪದೇ ಪದೇ ಕೋಪದಲ್ಲಿ ಗೋವಿಂದ್ ಮದ್ಯಪಾನ ನಿಲ್ಲಿಸದಿದ್ದರೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಳು. ಗೋವಿಂದ್ ತನ್ನ ಹೆಂಡತಿ ಖುಷ್ಬೂಳನ್ನು ಪದೇ ಪದೇ ತಬ್ಬಿಕೊಳ್ಳುವ ಮೂಲಕ ಶಾಂತಗೊಳಿಸಲು ಪ್ರಯತ್ನಿಸಲು ಪ್ರಯತ್ನ ಮಾಡುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೊನೆಗೂ ಗಂಡ ಹೆಂಡತಿ ಮಧ್ಯೆ ಸಂಧಾನ ನಡೆದು ಗೋವಿಂದ್ ಖುಷ್ಬೂ ಅವರನ್ನು ತಬ್ಬಿಕೊಂಡಾಗ ಅದೇ ಹಳಿಯಲ್ಲಿ ಅತಿ ವೇಗದ ರೈಲು ಬಂದಿತ್ತು. ಇಬ್ಬರೂ ಹಳಿಯಿಂದ ದೂರ ಸರಿಯಲು ಅವಕಾಶ ಸಿಗದೇ ರೈಲಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ.

ಸಾವಿಗೀಡಾದ ಪತಿ ಪತ್ನಿಗೆ ಮೂವರು ಮಕ್ಕಳಿದ್ದಾರೆ ಎಂದು ಪೊಲೀಸ್ ನವರು ತಿಳಿಸಿದ್ದಾರೆ.ಅಪ್ಪ, ಅಮ್ಮ ಇಲ್ಲದೇ ಇದೀಗ ಮೂವರೂ ಮಕ್ಕಳು ಅನಾಥರಾಗಿದ್ದಾರೆ. ಹಿರಿಯ ಮಗು 6 ವರ್ಷದ ಮಗ, 3 ಮತ್ತು 4 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಗೋವಿಂದ್ ಅವರು ತಮ್ಮ ಜೀವನೋಪಾಯಕ್ಕಾಗಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ದಿನಕ್ಕೆ ಬಾಡಿಗೆ 17ಸಾವಿರ ನೀಡಿ ಹೋಟೆಲ್‌ ರೂಂನಲ್ಲಿ ಮಲಗಿದ್ದ ಮಹಿಳೆಗೆ ರಾತ್ರಿಯಿಡೀ 200ಕ್ಕೂ ಹೆಚ್ಚು ತಿಗಣೆ ಕಡಿತ!!!

You may also like

Leave a Comment