Teacher instructs Namaz to-Student :ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜು(School- Collages) ಗಳಲ್ಲಿ ವಿದ್ಯಾರ್ಥಿಗಳನ್ನು ಧಾರ್ಮಿಕ ವಿಚಾರದ ಪ್ರಚೋದನೆಗೆ ಬಳಸಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಂತೆಯೇ ಇದೀಗ ಕಾಲೇಜಿನಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯರಿಗೆ ನಮಾಜ್ ಮಾಡುವುದನ್ನು ಹೇಳಿಕೊಡುತ್ತಿರುವ (Teacher instructs Namaz to-Student) ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು, ಉತ್ತರಪ್ರದೇಶದ(Uttar pradesh) ಭಾಗ್ಪತ್ ಜಿಲ್ಲೆಯ(Bhagpat district) ಕಾಲೇಜೊಂದರಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯರಿಗೆ ನಮಾಜ್ ಮಾಡುವುದನ್ನು ಹೇಳಿಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral) ಆಗಿದೆ. ಇದರಿಂದ ಕೆರಳಿದ ಹಿಂದೂ ಪರ ಸಂಘಟನೆಗಳು ಕಠಿಣ ಕಾನೂನು ಕ್ರಮ ಜರುಗಿಸುವಂತೆ ಹಿಂದೂ ಆಗ್ರಹಿಸಿವೆ. ಈ ಹಿನ್ನೆಲೆಯಲ್ಲಿ ಭಾಗ್ಪತ್ ಪೊಲೀಸರು(Bhagpath Police) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅಂದಹಾಗೆ ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇದರಲ್ಲಿ ಶಿಕ್ಷಕಿ ಕುಳಿತುಕೊಂಡು ವಿದ್ಯಾರ್ಥಿನಿಯರಿಗೆ ಸೂಚನೆ ನೀಡಬಹುದನ್ನು ಕಾಣಬಹುದಾಗಿದೆ. ಅಲ್ಲದೆ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಶಾಲಾ ಆಡಳಿತ ಮಂಡಳಿ ಸದಸ್ಯರು ನಾಟಕದ ರಿಹರ್ಸಲ್ ವೇಳೆ ಹಾಗೆ ಮಾಡಲಾಗಿತ್ತು ಎಂದು ವಿವರಣೆ ನೀಡಿದ್ಧಾರೆ.
ಇನ್ನು ಹೋಶಿಯಾರಿ ದೇವಿ ಗರ್ಲ್ಸ್ ಇಂಟರ್ ಕಾಲೇಜ್ ಮುಖ್ಯೋಪಾಧ್ಯಾಯ ಮುನೇಶ್ ಚೌಧರಿ ಕಳೆದ ವರ್ಷ ಅಕ್ಟೋಬರ್ ಸಮಯದಲ್ಲಿ ನಾಟಕದ ಅಭ್ಯಾಸದ ವೇಳೆ ಹುಡುಗಿಯರು ನಮಾಜ್ ಮಾಡುವುದಿತ್ತು. ಅಂತಿಮವಾಗಿ ಆ ದೃಶ್ಯವನ್ನು ನಾಟಕದಿಂದ ತೆಗೆದುಹಾಕಲಾಯಿತು ವೈರಲ್ ಆಗಿರುವ ವಿಡಿಯೋ ಆ ಸಮಯದಲ್ಲಿ ತೆಗೆದಿದ್ದು ಎಂದು ತಿಳಿಸಿದ್ದಾರೆ.
