Home » ಉತ್ತರಕನ್ನಡ: ಆಯತಪ್ಪಿ ಬಾವಿಗೆ ಬಿದ್ದು ಮೂರು ವರ್ಷದ ಮಗು ಸಾವು!

ಉತ್ತರಕನ್ನಡ: ಆಯತಪ್ಪಿ ಬಾವಿಗೆ ಬಿದ್ದು ಮೂರು ವರ್ಷದ ಮಗು ಸಾವು!

by Mallika
0 comments

ಉತ್ತರ ಕನ್ನಡ: ಆಟವಾಡುತ್ತಿದ್ದಾಗ ಆಯತಪ್ಪಿ ಮೂರು ವರ್ಷದ ಮಗುವೊಂದು ಬಾವಿಗೆ ಬಿದ್ದು, ಮೃತಹೊಂದಿದ ಘಟನೆಯೊಂದು ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರದ ಹರಿದೇವನಗರದಲ್ಲಿ ನಡೆದಿದೆ.

ಸ್ತುತಿ(3 ವರ್ಷ) ಸಾವಿಗೀಡಾದ ಬಾಲಕಿ. ಮಗು ಮಣ್ಣಿನಲ್ಲಿ ಆಟವಾಡುತ್ತಿದ್ದು, ಗಣಪತಿ ಮೂರ್ತಿ ಎಂದುಕೊಂಡು ಬಾವಿಗೆ ಮಣ್ಣು ಹಾಕಲು ಹೋಗಿದ್ದು, ಆಯತಪ್ಪಿ ಬಿದ್ದು ಸಾವಿಗೀಡಾಗಿದ್ದಾಳೆ. ತುಂಬಾ ಹೊತ್ತಿನ ನಂತರ ಮಗು ಕಾಣದಿದ್ದಾಗ, ಹುಡುಕಲು ಶುರುಮಾಡಿದಾಗ, ಮಗುವಿನ ಮೃತದೇಹ ಪತ್ತೆಯಾಗಿದೆ.

ಹೆತ್ತವರು ಸಣ್ಣ ಮಕ್ಕಳ ಬಗ್ಗೆ ಎಷ್ಟೇ ಕಾಳಜಿ ವಹಿಸಿದರೂ ಕಡಿಮೆ ಎಂದು ಹೇಳಬಹುದು. ಇತ್ತೀಚೆಗಷ್ಟೇ ಮೊಬೈಲ್‌ ಚಾರ್ಜರ್‌ ನಿಂದ ವಿದ್ಯುತ್‌ ತಗುಲಿ ಮಗುವೊಂದು ಸಾವನ್ನಪ್ಪಿತ್ತು. ಈ ಘಟನೆಯ ಕುರಿತು ಕಾರವಾರ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment