Home » ಬೆಳ್ತಂಗಡಿ: ಮಾಜಿ ಶಾಸಕರ ಪತ್ನಿಗೆ ಹೃದಯಾಘಾತ, ಅಪಾಯದಿಂದ ಪಾರು

ಬೆಳ್ತಂಗಡಿ: ಮಾಜಿ ಶಾಸಕರ ಪತ್ನಿಗೆ ಹೃದಯಾಘಾತ, ಅಪಾಯದಿಂದ ಪಾರು

0 comments

ಬೆಳ್ತಂಗಡಿ :ಮಾಜಿ ಶಾಸಕರಾದ ಕೆ.ವಸಂತ ಬಂಗೇರರ ಪತ್ನಿ ಸುಜಿತಾ.ವಿ.ಬಂಗೇರರಿಗೆ ಶನಿವಾರ ಸಂಜೆ ಹೃದಯಘಾತ ಸಂಭವಿಸಿದೆ.

ತಕ್ಷಣ ಖಾಸಗಿ ವೈದ್ಯರು ಮನೆಗೆ ಬಂದು ಪರೀಕ್ಷಿಸಿದ
ನಂತರ ಅಂಬುಲೆನ್ಸ್ ಮೂಲಕ ಮಂಗಳೂರು ಎಜೆ ಆಸ್ಪತ್ರೆಗೆ ದಾಖಲಿಸಿದರು.ವೈದ್ಯರು ರಾತ್ರಿಯೆ ಸರ್ಜರಿ ಮಾಡಿ ಹೃದಯಕ್ಕೆ ಸ್ಟ್ಯಾಂಟ್ ಅಳವಡಿಸಿದ್ದು ಅಪಾಯದಿಂದ ಪಾರಾಗಿದ್ದಾರೆ. ಎ.ಜೆ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸುಜಿತಾ ಬಂಗೇರರವರು ಗೆಜ್ಜೆಗಿರಿ ಕ್ಷೇತ್ರದ
ಬ್ರಹ್ಮಕಲಶೋತ್ಸವ ಮತ್ತು ಇತರ ಧಾರ್ಮಿಕ ಹಾಗೂ
ಸಾಮಾಜಿಕ ಕಾರ್ಯಕ್ರಮಗಳ ಮೂಲಕ ತನ್ನನ್ನು
ತಾನು ತೊಡಗಿಸಿಕೊಂಡು ತಮ್ಮ ಸೇವೆ ಗೈದಿದ್ದರು.

You may also like

Leave a Comment