Home » Viral News: ಫಸ್ಟ್‌ನೈಟ್‌ನಲ್ಲಿ ನಾನು ನಿನ್ನ ತಾಯಿ, ಪಾದಕ್ಕೆ ನಮಸ್ಕರಿಸು ಎಂದ ಪತ್ನಿ! ಗಂಡ ಶಾಕ್‌!!!

Viral News: ಫಸ್ಟ್‌ನೈಟ್‌ನಲ್ಲಿ ನಾನು ನಿನ್ನ ತಾಯಿ, ಪಾದಕ್ಕೆ ನಮಸ್ಕರಿಸು ಎಂದ ಪತ್ನಿ! ಗಂಡ ಶಾಕ್‌!!!

by Mallika
0 comments

ಅವರು ದಂಪತಿಗಳು. ಏಳು ತಿಂಗಳ ಹಿಂದೆಯೇ ಮದುವೆ ನಡೆದಿದ್ದು, ಆದರೆ ಹೆಂಡತಿ ಮದುವೆಯಾದ ದಿನದಿಂದ ನಾನು ನಿನ್ನ ತಾಯಿ, ನನ್ನ ಪಾದಗಳನ್ನು ಮುಟ್ಟಿ ನಮಸ್ಕರಿಸು, ಇಲ್ಲದಿದ್ದರೆ ನಿನ್ನನ್ನೆಲ್ಲ ಸಾಯಿಸುತ್ತೇನೆ ಎಂದು ಹೇಳುತ್ತಿದ್ದಾಳಂತೆ. ಹಾಗೆ ಮಾಡದಿದ್ದರೆ ಒದೆ ಕೂಡಾ ಈ ಪತಿಮಹಾಶಯನಿಗೆ ಬಿದ್ದಿದೆಯಂತೆ.

ಇದೀಗ ನೊಂದ ಗಂಡ ಪೊಲೀಸರಿಗೆ ದೂರು ನೀಡಿದ್ದು, ಇದನ್ನು ಕೇಳಿದ ಪೊಲೀಸರು ಕೂಡಾ ಅಚ್ಚರಿಗೊಂಡಿದ್ದಾರೆ. ಇದೀಗ ಪತಿ ಝಂಘಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಪತ್ನಿ ಹಾಗೂ ಅತ್ತೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಿಯ ಪ್ರಕಾರ, ಮುಜಾಫರ್‌ನಗರದ ಘಟಪನ್‌ ಉತ್ತರದ ನಿವಾಸಿ ರವೀಂದ್ರ ಕುಮಾರ್‌ ಅವರು ಝಂಘಾ ಪ್ರದೇಶದ ಇಂಟರ್‌ ಕಾಲೇಜಿನಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ರವೀಂದ್ರ ಪ್ರಕಾರ, 24 ಫೆಬ್ರವರಿ 2023 ರಂದು, ಅವರು ಶಾಮ್ಲಿ ಜಿಲ್ಲೆಯ ಆದರ್ಶ ಮಂಡಿಯ ಬನಾತ್ ಗ್ರಾಮದ ನಿವಾಸಿ ಸಗಾಬೀರ್ ಸಿಂಗ್ ಅವರ ಪುತ್ರಿ ದೀಪಾ ಅವರನ್ನು ವಿವಾಹವಾಗಿದ್ದಾರೆ. ಆದರೆ ಯಾವಾಗ ಪತ್ನಿ ತನ್ನ ಮನೆಗೆ ಬಂದಿದ್ದಾಳೋ ಅಂದಿನಿಂದ ಆಕೆಯನ್ನು ತಾಯಿಯಂತೆ ಪೂಜಿಸಬೇಕು, ಆಕೆಯ ಪಾದಗಳನ್ನು ಮುಟ್ಟಿ ನಮಸ್ಕರಿಸಬೇಕು ಎಂದೆಲ್ಲಾ ಹೇಳುತ್ತಿರುವುದಾಗಿಯೂ, ಹಾಗೂ ಇದೆಲ್ಲ ಮಾಡದಿದ್ದರೆ ಆತ್ಮಹತ್ಯೆ ಮಾಡುವುದಾಗಿ ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

ನಿಮ್ಮ ಮಗಳು ಈ ರೀತಿ ಹೇಳುತ್ತಿದ್ದಾಳೆಂದು ಅತ್ತೆಗೆ ಹೇಳಿದರೂ, ಆಕೆ ಏನು ಹೇಳಿದರೂ ಮಾಡು ಎಂದು ಹೇಳಿದ್ದಾರೆ ಎಂದು ರವೀಂದ್ರಕುಮಾರ್‌ ದೂರಿನಲ್ಲಿ ತಿಳಿಸಿದ್ದಾರೆ. ಪತ್ನಿ ತೀವ್ರ ಮಾನಸಿಕ ಅಸ್ವಸ್ಥೆ ಎಂದು ರವೀಂದ್ರ ಆರೋಪಿಸಿದ್ದಾರೆ.

ಸೆ.18 ರಂದು ಸಂಜೆ ಏಳು ಗಂಟೆಗೆ ಪತ್ನಿ ದೀಪಾಳ ಸಹೋದರರು, ಹಾಗೂ ಇಬ್ಬರು ಅಪರಿಚಿತ ವ್ಯಕ್ತಿಗಳು ನನ್ನ ಬಾಡಿಗೆ ಮನೆಗೆ ಬಂದು, ಎಲ್ಲರೂ ಸೇರಿ ನನ್ನನ್ನು ಥಳಿಸಿರುವುದಾಗಿ ಆರೋಪಿಸಲಾಗಿದೆ. ಸಂತ್ರಸ್ತ ಶಿಕ್ಷಕ ದೂರಿನ ಮೇರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

You may also like

Leave a Comment