Chennai: ನಮ್ಮ ಎಲ್ಲಾ ಹಣದ ವ್ಯವಹಾರ ನಡೆಸುವುದೇ ಬ್ಯಾಂಕ್. ಅಂತಹ ಬ್ಯಾಂಕ್‌ನಲ್ಲಿ ಅಪ್ಪಿ ತಪ್ಪಿ 50ರೂ. ಕಟ್ ಆದರೂ ನಾವು ಗಾಬರಿಯಾಗುತ್ತೇವೆ. ಆದರೆ ನೀವು ಎಂದಾದರೂ ಊಹಿಸಿದ್ದೀರಾ? ನಿಮ್ಮ ಖಾತೆಗೆ ಒಂದು ಬೆಳ್ಳಂಬೆಳಗ್ಗೆ ಕೋಟಿಗಟ್ಟಲೆ ಹಣ ಬಂದರೆ ಏನಾಗಬೇಡ? ಅಂತಹುದೇ ಒಂದು ಘಟನೆ ಓರ್ವನ ಬಾಳಲ್ಲಿ ನಡೆದಿದೆ. ಆ ಹಣ ಬಂದ ನಂತರ ಏನಾಯ್ತು? ಇಲ್ಲಿದೆ ಮಾಹಿತಿ (Chennai news).
15,000 ಮಾಸಿಕ ಸಂಬಳ ಪಡೆಯುವ ಮೆಡಿಕಲ್ ಶಾಪ್ ಉದ್ಯೋಗಿಯೊಬ್ಬರು ಶನಿವಾರ ಬೆಳಿಗ್ಗೆ 2,000 ಅನ್ನು ಸ್ನೇಹಿತರಿಗೆ ವರ್ಗಾಯಿಸಿದ್ದಾರೆ. ನಂತರ ತನ್ನ ಮೊಬೈಲ್ ಚೆಕ್ ಮಾಡಿದಾಗ SMS ಅನ್ನು ನೋಡಿ ಆಘಾತಗೊಂಡು ಮೂರ್ಛೆ ಹೋಗುವುದೊಂದು ಬಾಕಿ ಇತ್ತು. ಅಲ್ಲಿ ಆತನ ಖಾತೆಯಲ್ಲಿ 753 ಕೋಟಿಗಿಂತ ಹೆಚ್ಚು ಹಣ ಜಮೆಗೊಂಡಿದೆ ಎಂದು ಸಂದೇಶ ಬಂದಿದೆ. ಅಲ್ಲಿಯವರೆಗೆ ₹3,000 ಮಾತ್ರ ಬ್ಯಾಲೆನ್ಸ್ ತೋರಿಸುತ್ತಿದ್ದ ಬ್ಯಾಂಕ್ ಖಾತೆಯಲ್ಲಿ ಏಕಾಏಕಿ ಕೋಟಿಗಟ್ಟಲೆ ಹೇಗೆ ಬಂತು ಎಂದು ತಿಳಿದು ವ್ಯಕ್ತಿ ಮೂರ್ಛೆ ಹೋಗೋದೊಂದು ಬಾಕಿ ಇತ್ತು.
ಖಾತೆಗೆ ಕೋಟಿ ಗಟ್ಟಲೆ ಹಣ ಬಿದ್ದಿರುವವರ ಹೆಸರು ಮೊಹಮ್ಮದ್ ಇದ್ರಿಸ್ ಎಂದು. ಆದರೆ ಕೂಡಲೇ ಬ್ಯಾಂಕ್‌ನವರು ಅವರ ಖಾತೆಯನ್ನು ಸ್ಥಗಿತಗೊಳಿಸದ್ದಾರೆ. ಅವರು ಖಾತೆಯನ್ನು ಹೊಂದಿರುವ ತೆನಾಂಪೇಟೆಯ ಕೋಟಕ್ ಮಹೀಂದ್ರಾ ಬ್ಯಾಂಕ್ ಶಾಖೆಯ ಅಧಿಕಾರಿಗಳು ಅದನ್ನು ಸ್ಥಗಿತಗೊಳಿಸಿದರು, ತಾಂತ್ರಿಕ ದೋಷದಿಂದ ಠೇವಣಿ ಮಾಡಲಾಗಿದೆ ಎಂದು ಹೇಳಿದರು.
ತೆನಾಂಪೇಟೆಯ ಎಲ್ಡಮ್ಸ್ ರಸ್ತೆಯಲ್ಲಿ ವಾಸಿಸುವ ಮತ್ತು ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿರುವ ತಿರುನೆಲ್ವೇಲಿ ಜಿಲ್ಲೆಯ ಇದ್ರಿಸ್ (30) ಎಂಬುವರು ತಮ್ಮ ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ 753,48,35,179.48 ಕೋಟಿ ಠೇವಣಿ ಇರಿಸಲಾಗಿದೆ ಎಂದು ತಮ್ಮ ಸೆಲ್ ಫೋನ್‌ಗೆ ಸಂದೇಶವನ್ನು ಸ್ವೀಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ಗಂಟೆಗಳ ನಂತರ ತಾಂತ್ರಿಕ ದೋಷ ಸರಿ ಮಾಡಲಾಗಿತ್ತು ಎಂಬ ಮಾಹಿತಿಯನ್ನು ಹೇಳಲಾಗಿದೆ.
ಮಧ್ಯಾಹ್ನ ಸುದ್ದಿಗಾರರನ್ನು ಭೇಟಿ ಮಾಡಿದ ಇದ್ರಿಸ್, ಬ್ಯಾಂಕ್ ಶಾಖೆಯ ಅಧಿಕಾರಿಗಳು ಸೂಕ್ತ ವಿವರಣೆ ನೀಡದ ಕಾರಣ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.
ಕೋಟಕ್ ಮಹೀಂದ್ರಾ ಬ್ಯಾಂಕ್ ವಕ್ತಾರರು ಎಸ್‌ಎಂಎಸ್ ಸಂದೇಶದಲ್ಲಿ ದೋಷ ಉಂಟಾಗಿದೆ ಎಂದು ಹೇಳಿದ್ದಾರೆ. ಇದರಿಂದ ಆಗಿರುವ ಅನಾನುಕೂಲಕ್ಕೆ ಬ್ಯಾಂಕ್ ವಿಷಾದ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.
