Home » Viral video: OTP ಗಾಗಿ ಆಧಾ‌ರ್ ಲಿಂಕ್ ಆಗಿರುವ ಫೋನ್ ತನ್ನಿ ಅಂದ್ರೆ ಈ ಮುಗ್ಧ ಅಜ್ಜ ತಂದಿದ್ದೇನು ಗೊತ್ತೇ? ಗೊತ್ತಾದ್ರೆ ನೀವೂ ಮರುಗುತ್ತೀರಾ !!

Viral video: OTP ಗಾಗಿ ಆಧಾ‌ರ್ ಲಿಂಕ್ ಆಗಿರುವ ಫೋನ್ ತನ್ನಿ ಅಂದ್ರೆ ಈ ಮುಗ್ಧ ಅಜ್ಜ ತಂದಿದ್ದೇನು ಗೊತ್ತೇ? ಗೊತ್ತಾದ್ರೆ ನೀವೂ ಮರುಗುತ್ತೀರಾ !!

1 comment
Viral Video

Viral video: ಇಂದು ಏನೇ ಸರ್ಕಾರಿ ಸವಲತ್ತು ಪಡೀಬೇಕು ಅಂದ್ರೂ ಆಧಾರ್ ಕಾರ್ಡ್(Adhar card) ಬೇಕೇ ಬೇಕು. ಅದರಲ್ಲೂ ಆಧಾರ್ ಲಿಂಕ್ ಆಗಿರೋ ಫೋನ್ ನಂಬರ್, ಫೋನ್ ಎಲ್ಲವೂ ಬೇಕು. ಯಾಕೆಂದ್ರೆ ಅದಕ್ಕೆ ಬಂದ OTP ಹೇಳಿದರೇನೆ ಮುಂದಿನ ಕೆಲಸ ಆಗೋದು. ಇಂದು ಹೆಚ್ಚಿನವರಿಗೆ ಇದರ ಅರಿವಿದ್ದರೂ ಪಾಪ ಮುಗ್ಧರಾದ ಹಳ್ಳಿಯ ಜನರಲ್ಲಿ ಅನೇಕರಿಗಿದು ಇನ್ನು ತಿಳಿದಿಲ್ಲ.

ಇದನ್ನೂ ಓದಿ: Pavagadh: ಪಾವಗಡದ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ನಂತರ ಸೋಂಕು ತಗುಲಿ 3 ಮಹಿಳೆಯರ ಸಾವು: ಆಸ್ಪತ್ರೆ ಸಿಬ್ಬಂದಿ ಅಮಾನತು

ಅಂತೆಯೇ ಹಳ್ಳಿಯೊಂದ ಆಧಾರ್ ಕೇಂದ್ರದ ಯುವತಿಯೊಬ್ಬಳು ತಮ್ಮ ಬಳಿ ಏನೋ ಕೆಲಸದ ಸಲುವಾಗಿ ಬಂದ ಹಳ್ಳಿಯ ಅಜ್ಜನಿಗೆ ಮುಂದಿನ ಸಲ ಬರುವಾಗ ಆಧಾರ್ ಲಿಂಕ್ ಆಗಿರೋ ಫೋನ್ ನಂಬರ್ ತನ್ನಿ, OTPಪಡೆಯಬೇಕು ಎಂದು ಹೇಳಿದ್ದಾರೆ. ಅಂತೆಯೇ ಅಜ್ಜನು ಮನೆಗೆ ಮರಳಿದ್ದಾನೆ. ಆದರೆ ಯುವತಿ ಹೇಳಿದ್ದನ್ನು ಆಲಿಸಿದ ಅಜ್ಜ ತಮ್ಮ ಮನೆಯಲ್ಲಿದ್ದ ಲ್ಯಾಂಡ್‌ಲೈನ್ ಫೋನ್ ಅನ್ನು ನೇರವಾಗಿ ಯುವತಿಗೆ ತಂದುಕೊಟ್ಟಿದ್ದಾರೆ.

ಇದ್ಯಾಕೆ ಎಂದು ಯುವತಿ ಕೇಳಿದ್ರೆ, ಫೋನ್ ತರಲು ಹೇಳಿದ್ರಲ್ಲ ಎಂದು ಹೇಳಿದ್ದಾರೆ, ಇದನ್ನು ಕಂಡ ಯುವತಿ ಮತ್ತಿತರರು ನಸುನಕ್ಕಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್(Viral video)ಆಗುತತಿದ್ದು, ಪಾಪ ಅಜ್ಜ ಎಷ್ಟು ಮುಗ್ದರು ಎಂದು ಜನರೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ.

You may also like

Leave a Comment