Home » ಎರಡು ಪುಟ್ಟ ಕಲ್ಲುಗಳ ಸಹಾಯದಿಂದ ಹಾಡುವ ಈ ವೃದ್ಧನ ಕಂಠ ‘ ಶ್ರೀಮಂತ ಕಂಠ’| ಈ ಹಿರಿಯ ವ್ಯಕ್ತಿಯ ಹಾಡು ನಿಮ್ಮನ್ನು ಮಂತ್ರಮುಗ್ಧರನ್ನಾಗಿ ಮಾಡಿಸುವುದರಲ್ಲಿ ಎರಡು ಮಾತಿಲ್ಲ!

ಎರಡು ಪುಟ್ಟ ಕಲ್ಲುಗಳ ಸಹಾಯದಿಂದ ಹಾಡುವ ಈ ವೃದ್ಧನ ಕಂಠ ‘ ಶ್ರೀಮಂತ ಕಂಠ’| ಈ ಹಿರಿಯ ವ್ಯಕ್ತಿಯ ಹಾಡು ನಿಮ್ಮನ್ನು ಮಂತ್ರಮುಗ್ಧರನ್ನಾಗಿ ಮಾಡಿಸುವುದರಲ್ಲಿ ಎರಡು ಮಾತಿಲ್ಲ!

0 comments

ಇದು ಇಂಟರ್ ನೆಟ್ ಯುಗ. ಅನೇಕ ಪ್ರತಿಭೆಗಳು ಈ ಮೂಲಕ ಬೆಳಕಿಗೆ ಬರುತ್ತಿವೆ ಬರುತ್ತಲೇ ಇವೆ. ಕೆಲವರು ರಾತ್ರೋ ರಾತ್ರಿ ಸ್ಟಾರ್ ಗಳಾಗಿದ್ದೂ ಉಂಟು. ಇತ್ತ ಕಳೆದ ಎರಡೂರು ತಿಂಗಳಿನಿಂದ ಸೋಶಿಯಲ್ ಮೀಡಿಯಾದಲ್ಲಿ ಕಡಲೆ ಬೀಜ ಮಾರಾಟ ಮಾಡುತ್ತಿದ್ದ ಭುವನ್ ಬದ್ಯಾಕರ್ ಹಾಡಿದ ಕಚ್ಚಾ ಬದಾಮ್ ಹಾಡು ಈಗಲೂ ಎಲ್ಲೆಡೆ ಸದ್ದು ಮಾಡುತ್ತಿದೆ. ಭುವನ್ ಬದ್ಯಾಕರ್ ಕೂಡಾ ರಾತ್ರೋ ರಾತ್ರಿ ಸ್ಟಾರ್ ಆದವರರಲ್ಲಿ ಒಬ್ಬರು. ಇವರ ಜೊತೆಗೆನೇ ರೈಲ್ವೇ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ರಾನು ಮಂಡಲ್ ಕೂಡಾ ಈ ಮೂಲಕನೇ ಸ್ಟಾರ್ ಆದವರು. ಓರ್ವ ಸಾಮಾನ್ಯ ವ್ಯಕ್ತಿಯನ್ನು ಸ್ಟಾರ್ ಮಾಡಿಸುವ ಎಲ್ಲಾ ಶಕ್ತಿ ಈ ಸೋಶಿಯಲ್ ಮೀಡಿಯಾಗಿದೆ. ಈ ಮೂಲಕ ದೇಶದ ಜನತೆಗೆ ಪ್ರತಿಭಾವಂತರ ಪ್ರತಿಭೆಯ ಪರಿಚಯ ಮಾಡಿಕೊಳ್ಳಲು ಸಾಮಾಜಿಕ ಜಾಲತಾಣಗಳು ಅವಕಾಶ ಮಾಡಿಕೊಡುತ್ತಿವೆ. ಈಗ ನಾವು ಹೇಳಲು ಹೊರಡಿರೋ ವ್ಯಕ್ತಿ ಹಿರಿಯ ವ್ಯಕ್ತಿ. ಈ ವೃದ್ಧ ವ್ಯಕ್ತಿ ರಸ್ತೆ ಬದಿ ಕುಳಿತು ಹಾಡು ಹೇಳುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಇವರ ಧ್ವನಿ ಸಂಗೀತ ಪ್ರೇಮಿಗಳನ್ನು ಕಾಡುತ್ತಿದೆ.

ಈ ಹಿರಿಯ ವ್ಯಕ್ತಿಯ ಪ್ರತಿಭೆ ನೋಡಿ ಜನರೇ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಕೈಯಲ್ಲಿ ಚಿಕ್ಕದಾದ ಎರಡು ಕಲ್ಲುಗಳನ್ನು ಹಿಡಿದು ಹಾಡು ಹೇಳಿದ್ದು, ಇವರ ಧ್ವನಿಗೆ ಜನರು ಕಳೆದು ಹೋಗುತ್ತಿದ್ದಾರೆ. ಇವರ ಧ್ವನಿಗೆ ಆ ಎರಡು ಪುಟ್ಟ ಕಲ್ಲುಗಳ ಸಂಗೀತವೇ ಸಾಕೆನಿಸುತ್ತಿದೆ. ಇವರ ಕಂಠಕ್ಕೆ ಪ್ರಭಾವಿತರಾಗಿರುವ ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ.

ಶ್ರೀಮಂತ ಕಂಠ ಹೊಂದಿದ್ದಾರೆ ಈ ವ್ಯಕ್ತಿ. ನೀವೇನಾದರೂ ಇವರ ಸಂಗೀತ ಕೇಳುತ್ತಾ ನಿಂತರೆ
ನಿಂತಲ್ಲಿಯೇ ಕಳೆದು ಹೋಗುವುದು ಖಂಡಿತ. ಯಾವುದೇ ಸಂಗೀತ ವಾದ್ಯಗಳು ಇಲ್ಲ, ಆದರೂ ಕೇವಲ ಎರಡು ಕಲ್ಲುಗಳ ಮೂಲಕ ಇಂಪಾದ ಸಂಗೀತ ಕೇಳಲು ದೊರೆಯುತ್ತದೆ. ವಯಸ್ಸಾದರೂ ಇವರ ಕಂಠಕ್ಕೆ ಮಾತ್ರ ಇನ್ನು ನವಯುವಕರೂ ನಾಚಬೇಕು ಹಾಗೇ ಇದೆ. ಈ ವೀಡಿಯೋವನ್ನು ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.

ಆದ್ರೆ ಈ ವೃದ್ಧ ಯಾರು ಮತ್ತು ಹೆಸರೇನು ಮತ್ತು ಯಾವ ಊರು ಎಂಬುವುದು ತಿಳಿದು ಬಂದಿಲ್ಲ.

ಈ ವೀಡಿಯೋ ತುಣುಕು ನಿಮಗಾಗಿ ಇಲ್ಲಿದೆ.

https://www.instagram.com/reel/CbKMSRHpmwL/?utm_source=ig_web_copy_link

You may also like

Leave a Comment