Home » ಕೊನೆ ಘಳಿಗೆಯಲ್ಲಿ ಮದುವೆ ನಿರಾಕರಿಸಿ ಮಂಟಪದಿಂದ ಓಡಿ ಹೋದ ವರ | ವರನನ್ನು ಬೆನ್ನಟ್ಟಿ ಹಿಡಿದ ವಧು | ವೀಡಿಯೋ ವೈರಲ್

ಕೊನೆ ಘಳಿಗೆಯಲ್ಲಿ ಮದುವೆ ನಿರಾಕರಿಸಿ ಮಂಟಪದಿಂದ ಓಡಿ ಹೋದ ವರ | ವರನನ್ನು ಬೆನ್ನಟ್ಟಿ ಹಿಡಿದ ವಧು | ವೀಡಿಯೋ ವೈರಲ್

by Mallika
1 comment

ಮದುವೆ ಎಂಬುದು ಎಲ್ಲರ ಜೀವನದಲ್ಲಿ ನಡೆಯುವ ಸುಂದರ ಘಳಿಗೆ. ಸುಂದರ ಕನಸುಗಳನ್ನು ಹೊತ್ತು ತರುವ ಸವಿನೆನಪು ಎಂದೇ ಹೇಳಬಹುದು. ಆದರೂ ಕೆಲವೊಮ್ಮೆ ಮದುವೆಯ ಕೊನೆಯ ಕ್ಷಣದವರೆಗೂ ಏನೋ ಒಂದು ಅಳುಕು, ಭಯ ನಿಜಕ್ಕೂ ಎಲ್ಲರನ್ನೂ ಕಾಡುತ್ತೆ. ಕುತ್ತಿಗೆಗೆ ತಾಳಿ ಬಿದ್ದ ಮೇಲೆ ಏನೋ ಸಮಾಧಾನ ಪಡುವವರೂ ಇದ್ದಾರೆ. ಹೀಗಾಗಿ ಈ ನೆನಪನ್ನು ಸದಾಕಾಲ ನೆನಪಿನಲ್ಲಿ ಉಳಿಯುವಂತೆ ಮಾಡಲು ಎಲ್ಲರೂ ಪ್ರಯತ್ನಿಸುತ್ತಾರೆ.

ಇಲ್ಲೊಂದೆಡೆ ಮದುವೆಯ ಕೊನೆಘಳಿಗೆಯಲ್ಲಿ, ಮದುವೆಯಾಗಲು ನಿರಾಕರಿಸಿದ ವರನನ್ನು ರಸ್ತೆಯಲ್ಲೇ ಸಿನಿಮೀಯಾ ಸ್ಟೈಲ್‌ನಲ್ಲಿ ಹಿಂಬಾಲಿಸಿದ ಮಹಿಳೆಯ ವೀಡಿಯೋ ವೈರಲ್ ಆಗಿದೆ ಇಲ್ಲಿದೆ ನೋಡಿ.

ಈ ಘಟನೆ ನಡೆದದ್ದು, ಬಿಹಾರದ ನವಾಡಾದ ಭಗತ್ ಸಿಂಗ್ ಚೌಕ್ ನಲ್ಲಿ ಮಾರುಕಟ್ಟೆಯಲ್ಲಿ. ಇಲ್ಲಿ ಮದುವೆ ನಡೆಯುತ್ತಿರುವ ಸಂದರ್ಭದಲ್ಲಿ ವರ ಏನೋ ತಗಾದೆ ತೆಗೆದಿದ್ದಾನೆ. ಅನಂತರ ಹೊರಗೆ ಬಂದಿದ್ದಾನೆ. ಆತನನ್ನು ಹಿಂಬಾಲಿಸಿಕೊಂಡು ವಧು ಬಂದಿದ್ದಾಳೆ. ಆತನನ್ನು ವಧು ಮದುವೆಯಾಗು ಎಂದು ಹೇಳುವ ದೃಶ್ಯದ ಜೊತೆಗೆ ವರನ ಹಿಂದೆ ಓಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಠಾತ್ತಾಗಿ ಕಂಡುಬಂದಿದೆ. ಎಲ್ಲರೂ ನೋಡು ನೋಡುತ್ತಿದ್ದಂತೆ, ವರನು ತಪ್ಪಿಸಿಕೊಳ್ಳಲು ತನ್ನ ಕೈಲಾದಷ್ಟು ಪ್ರಯತ್ನ ಪಟ್ಟಿದ್ದಾನೆ. ಆದಾಗ್ಯೂ, ವಧು ಹಾಗೂ ಕೆಲವರು ಅವನನ್ನು ಹಿಡಿದಿದ್ದಾರೆ. ನಂತರ ಆಕೆ ಆತನ ಬಳಿ ಮದುವೆಯಾಗು ಎಂದು ಬೇಡಿಕೊಳ್ಳುವುದನ್ನು ಕಾಣಬಹುದು ಈ ವೀಡಿಯೋದಲ್ಲಿ.

ವಿಷಯ ಏನೆಂದರೆ, ಇವರಿಬ್ಬರ ಮದುವೆಯನ್ನು ಮನೆ ಮಂದಿ ಸೇರಿ, ಸುಮಾರು ಮೂರು ತಿಂಗಳ ಹಿಂದೆ ನಿಶ್ಚಯ ಮಾಡಿದ್ದರು. ಆವಾಗಲೇ, ಆತನಿಗೆ ಒಂದು ಬೈಕ್ ಮತ್ತು 50,000 ರೂ.ಗಳ ನಗದನ್ನು ವರದಕ್ಷಿಣೆಯಾಗಿ ಆ ವ್ಯಕ್ತಿಯ ಕುಟುಂಬಕ್ಕೆ ನೀಡಿದ್ದಾರೆ. ಆದರೆ ಅದ್ಯಾಕೋ ವರ ನೆಪ ಮಾಡುತ್ತಲೇ ಇದ್ದ. ಏನಾದರೊಂದು ತಗಾದೆ ತೆಗೆಯುತ್ತಲೇ ಇದ್ದ. ಆದರೆ ಈತ ಯಾಕಾಗಿ ಮದುವೆಯನ್ನು ವಿಳಂಬ ಮಾಡುತ್ತ ಇದ್ದ ಎಂಬುದಕ್ಕೆ ಆತನಲ್ಲೇ ಉತ್ತರ ಇಲ್ಲ. ಕೊನೆಗೆ ಮದುವೆ ಸಮಯದಲ್ಲೇ ಈ ಘಟನೆ ನಡೆದಿದ್ದು ದೊಡ್ಡ ಡ್ರಾಮನೇ ಕ್ರಿಯೇಟ್ ಆಯಿತು.

ಕೊನೆಗೆ ಇದು ಪೊಲೀಸ್ ಠಾಣೆ ಮೆಟ್ಟಿಲೇರಿತು. ಪೊಲೀಸರ ಮದ್ಯಪ್ರವೇಶದ ನಂತರ ಈ ಪ್ರಕರಣ ಸುಖಾಂತ್ಯ ಗೊಂಡಿತು. ಇಬ್ಬರನ್ನೂ ಠಾಣೆಗೆ ಕರೆದೊಯ್ದು ಅವರಿಗೆ ಸಲಹೆ ನೀಡಿದಾಗ, ಯುವಕ ಮನಪರಿವರ್ತನೆ ಮಾಡಿ ಮದುವೆಗೆ ಒಪ್ಪಿಕೊಂಡಿದ್ದಾನೆ. ಕೊನೆಗೆ ಯುವತಿ ಮತ್ತು ಪುರುಷ ಪೊಲೀಸ್ ಠಾಣೆಯ ಪಕ್ಕದ ದೇವಾಲಯದಲ್ಲಿ ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ.

You may also like

Leave a Comment