Home » ಸೀರೆಯುಟ್ಟು ಬೈಕ್‌ನಲ್ಲಿ ಸಂಚರಿಸುವಾಗ ಎಚ್ಚರ !ಬೈಕ್‌ನ ಚಕ್ರಕ್ಕೆ ಸೀರೆಯೊಂದಿಗೆ ಕಾಲು ಸಿಲುಕಿ ನರಳಾಡಿದ ಮಹಿಳೆ

ಸೀರೆಯುಟ್ಟು ಬೈಕ್‌ನಲ್ಲಿ ಸಂಚರಿಸುವಾಗ ಎಚ್ಚರ !ಬೈಕ್‌ನ ಚಕ್ರಕ್ಕೆ ಸೀರೆಯೊಂದಿಗೆ ಕಾಲು ಸಿಲುಕಿ ನರಳಾಡಿದ ಮಹಿಳೆ

by Praveen Chennavara
0 comments

ಸೀರೆಯುಟ್ಟು ಬೈಕಿನಲ್ಲಿ ಸಂಚರಿಸುವಾಗ ಮಹಿಳೆಯರು ಎಚ್ಚರ ವಹಿಸಿಕೊಳ್ಳುವುದು ಆವಶ್ಯಕ.ಇಲ್ಲದಿದ್ದರೆ ಅನಾಹುತ ನಡೆಯಬಹುದು.

ಬೈಕ್‌ನ ಚಕ್ರಕ್ಕೆ ಸೀರೆಯೊಂದಿಗೆ ಕಾಲು ಸಿಲುಕಿ ಮಹಿಳೆಯೊಬ್ಬರು ಗಂಟೆಗಳ ಕಾಲ ನರಳಾಡಿದ ಘಟನೆ ಚಿಕ್ಕಮಗಳೂರಿನ ತರೀಕೆರೆ ಪಟ್ಟಣದಲ್ಲಿ ನಡೆದಿದೆ.

ತರಿಕೆರೆಯ ಇಟ್ಟಿಗೆ ಗ್ರಾಮದ ಯಶೋದಾ ಬಾಯಿ ಈ ರೀತಿ ಸಂಕಷ್ಟಕ್ಕೊಳಗಾದ ಮಹಿಳೆ. ಬೈಕಿನಲ್ಲಿ ಸಹ ಸವಾರೆಯಾಗಿ ಸಂಚರಿಸುತ್ತಿದ್ದ ವೇಳೆ ಉಟ್ಟಿದ್ದ ಸೀರೆ ಅವರಿಗೆ ಅರಿವಿಲ್ಲದೆಯೇ ಬೈಕ್ ಚಕ್ರಕ್ಕೆ ಸಿಲುಕಿದೆ. ಸೀರೆಯನ್ನು ಬೈಕ್ ಸೆಳೆದ ರಭಸಕ್ಕೆ ಯಶೋದಾ ಅವರ ಕಾಲು ಕೂಡಾ ಚಕ್ರದೆಡೆಗೆ ಸಿಲುಕಿಕೊಂಡಿತ್ತು. ಈ ವೇಳೆ ಬೈಕ್ ರಸ್ತೆಯಲ್ಲೇ ಉರುಳಿಬಿದ್ದಿದೆ.

ಆದರೆ ಮಹಿಳೆಯ ಕಾಲನ್ನು ಸುಲಭದಲ್ಲಿ ಚಕ್ರದೆಡೆಯಿಂದ ಹೊರ ತೆಗೆಯಲು ಆಗಿರಲಿಲ್ಲ. ಇದರಿಂದ ಕೆಲ ತಾಸು ಮಹಿಳೆ ನೋವಿನಿಂದ ನರಳಾಡುವಂತಾಗಿತ್ತು. ಬಳಿಕ ಫಿಟ್ಟರ್ ಅವರನ್ನು ಸ್ಥಳಕ್ಕೆ ಕರೆಸಿ ಬೈಕಿನ ಚೈನ್ ಅನ್ನು ತುಂಡರಿಸಿ ಮಹಿಳೆಯನ್ನು ರಕ್ಷಿಸಲಾಯಿತು. ಮಹಿಳೆ ಯಶೋಧಾ ಅವರ ಕಾಲಿಗೆ ತೀವ್ರ ತರಹದ ಗಾಯಗಳಾಗಿವೆ.

ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

You may also like

Leave a Comment