Home » ಗಂಡನ ಸಾವನ್ನಪ್ಪತ್ತಿದ್ದಂತೆ 6 ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾದ ಮಹಿಳೆ!!!

ಗಂಡನ ಸಾವನ್ನಪ್ಪತ್ತಿದ್ದಂತೆ 6 ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾದ ಮಹಿಳೆ!!!

0 comments

ಗಂಡ ಸಾವನ್ನಪ್ಪುತ್ತಿದ್ದಂತೆ ಆರು ಮಕ್ಕಳ ತಾಯಿಯೋರ್ವಳು ತನ್ನ ಎಲ್ಲಾ ಮಕ್ಕಳನ್ನೂ ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಿರುವ ಆಶ್ಚರ್ಯಕರ ಘಟನೆಯೊಂದು ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಶಂಶಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಮಹಿಳೆಗೆ ಒಂದು ವರ್ಷದ ಮಗು ಕೂಡಾ ಇದೆ ಎಂದು ತಿಳಿದು ಬಂದಿದೆ.

ಈ ಮಹಿಳೆಯ ಗಂಡ ಕಳೆದ ಕೆಲ ತಿಂಗಳ ಹಿಂದೆ ನೀರಿನ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಇದರ ಬೆನ್ನಲ್ಲೇ ಎಲ್ಲಾ ಮಕ್ಕಳನ್ನು ಬಿಟ್ಟು ಮಹಿಳೆ ನೆರೆಮನೆಯ ಯುವಕನೊಂದಿಗೆ ಓಡಿ ಹೋಗುವ ನಿರ್ಧಾರ ಕೈಗೊಂಡಿದ್ದು ಮಾತ್ರವಲ್ಲದೇ ಓಡಿಹೋಗಿದ್ದಾಳೆ. ಮಕ್ಕಳನ್ನು ಅನಾಥರನ್ನಾಗಿ ಮಾಡಿದ ಈ ಮಹಿಳೆಯ ನಿರ್ಧಾರಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಆಕೆಯ ನಿರ್ಧಾರಕ್ಕೆ ಹಿಡಿಶಾಪ ಹಾಕ್ತಿದ್ದಾರೆ. ತಾಯಿ ಪರಾರಿಯಾಗಿರುವ ಕಾರಣ ಅಸಹಾಯಕರಾದ ಮಕ್ಕಳೆಲ್ಲರೂ ಸೇರಿ ಸಂಬಂಧಿಕರೊಂದಿಗೆ ಶಂಶಾಬಾದ್ ಪೊಲೀಸ್ ಠಾಣೆಗೆ ಬಂದಿದ್ದಾರೆ.

30 ವರ್ಷದ ರಾಣಿ ತಾನು ನೆರೆ ಮನೆಯ ಯುವಕನೊಂದಿಗೆ ಓಡಿ ಹೋಗಿದ್ದಾಳೆಂದು ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಮಹಿಳೆಯನ್ನ ಹುಡುಕಿಕೊಡುವ ಭರವಸೆ ನೀಡಿದ್ದಾರೆ. ಇದೇ ವೇಳೆ ಪರಾರಿಯಾಗಿರುವ ಯುವತಿಯ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಮಕ್ಕಳ ತಂದೆ ನೀರಿನ ಟ್ಯಾಂಕ್‌ನಲ್ಲಿ ಬಿದ್ದು ಸಾವನ್ನಪ್ಪಿರುವುದರಿಂದ ಪರಿಹಾರವಾಗಿ 15 ಲಕ್ಷ ರೂ. ಬರಲಿದೆ. ಇದರ ಬೆನ್ನಲ್ಲೇ ಯುವಕನೊಂದಿಗೆ ಓಡಿ ಹೋಗಿದ್ದಾಳೆ. ತಕ್ಷಣವೇ ಅದನ್ನು ಮುಟ್ಟುಗೋಲು ಹಾಕುವಂತೆ ಮನವಿ ಮಾಡಿದ್ದಾರೆ.

You may also like

Leave a Comment