Home » ರಾಜ್ಯದಲ್ಲೊಂದು ಭೀಭತ್ಸ್ಯ ಘಟನೆ | ದೇಹ ಎರಡು ಕಟ್ ಮಾಡಿದ ಮಹಿಳೆಯರ ಶವ ಪತ್ತೆ | ಬೆಚ್ಚಿಬಿದ್ದ ಜನತೆ

ರಾಜ್ಯದಲ್ಲೊಂದು ಭೀಭತ್ಸ್ಯ ಘಟನೆ | ದೇಹ ಎರಡು ಕಟ್ ಮಾಡಿದ ಮಹಿಳೆಯರ ಶವ ಪತ್ತೆ | ಬೆಚ್ಚಿಬಿದ್ದ ಜನತೆ

0 comments

ಮಂಡ್ಯ: ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮಹಿಳೆಯರಿಬ್ಬರ ಅರ್ಧ ಕತ್ತರಿಸಿದ ಮೃತದೇಹಗಳು ಜಿಲ್ಲೆಯ ಬೇರೆ ಬೇರೆ ಕಡೆ ಪತ್ತೆಯಾಗಿದೆ.

ಇಬ್ಬರು ಮಹಿಳೆಯರನ್ನು ಒಂದೇ ರೀತಿ ಹತ್ಯೆ ಮಾಡಲಾಗಿದೆ. ತಲೆ, ಎದೆ, ಕೈಗಳು ಇಲ್ಲದೆ ಹೊಟ್ಟೆಯಿಂದ ಕೆಳ ಭಾಗ ಮಾತ್ರ ಪತ್ತೆಯಾಗಿದೆ. ಕಾಲುಗಳನ್ನು ಕಟ್ಟಿ ದೇಹವನ್ನು ತುಂಡರಿಸಿ ಅರ್ಧಭಾಗವನ್ನ ಕಾಲುವೆಗಳಿಗೆ ಎಸೆದಿದ್ದಾರೆ. ಪಾಂಡವಪುರ ತಾಲೂಕಿನಲ್ಲಿ ಒಬ್ಬ ಮಹಿಳೆಯ ಅರ್ಧ ಶವ, ಶ್ರೀರಂಗಪಟ್ಟಣ ತಾಲೂಕಿನಲ್ಲಿ ಮತ್ತೊಬ್ಬ ಮಹಿಳೆಯ ಅರ್ಧ ಶವ ಪತ್ತೆಯಾಗಿದೆ.

30 ವರ್ಷ ವಯಸ್ಸಿನ ಮಹಿಳೆಯ ಶವ ಬೇಬಿ ಗ್ರಾಮದ ಕಾಲುವೆಯಲ್ಲಿ ಸಿಕ್ಕರೆ, ಅರಕೆರೆ ಗ್ರಾಮದ ಕಾಲುವೆಯಲ್ಲಿ ಪತ್ತೆಯಾದ ಶವ 40 ರಿಂದ 45 ವಯಸ್ಸಿನ ಮಹಿಳೆಯದ್ದು ಎನ್ನಲಾಗಿದೆ.

ಒಂದೇ ರೀತಿಯಲ್ಲಿ ಇಬ್ಬರು ಮಹಿಳೆಯರನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು, ನಂತರ ಬೇರೆ ಬೇರೆ ಕಡೆ ಎಸೆದಿರುವ ಅನುಮಾನ ಇದೆ. ದೇಹ ಕಟ್ ಮಾಡಿ ಒಂದು ಭಾಗವನ್ನ ನಾಲೆಗಳಿಗೆ ಎಸೆದು ಬಿಟ್ಟಿದ್ದಾರೆ. ಸೊಂಟದಿಂದ ಮೇಲ್ಬಾಗ ಏನು ಮಾಡಿದ್ದಾರೆ ಎಂಬುದು ಗೊತ್ತಾಗಬೇಕಿದೆ. ಈ ಮಹಿಳೆಯರು ಯಾರು ?ಮಹಿಳೆಯರನ್ನು ಇಷ್ಟೊಂದು ಭಯಂಕರವಾಗಿ ಯಾರು ಕೊಂದದ್ದು? ಎಂಬುದೆಲ್ಲ ತನಿಖೆಯ ನಂತರವೇ ತಿಳಿಯಬೇಕಿದೆ. ಅರಕೆರೆ ಹಾಗೂ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

You may also like

Leave a Comment