Plane Crash: ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಶನಿವಾರ ಅವಳಿ ಎಂಜಿನ್ ಲಘು ವಿಮಾನ ಪತನಗೊಂಡಿದ್ದು(Plane Crash), ಭಾರತದ ಇಬ್ಬರು ಟ್ರೈನಿ ಪೈಲಟ್‌ಗಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಭಾರತೀಯ ಟ್ರೈನಿ ಪೈಲಟ್‌ಗಳನ್ನು ಮುಂಬೈ ಮೂಲದ ಅಭಯ್ ಗದ್ರು ಮತ್ತು ಯಶ್ ವಿಜಯ್ ರಾಮುಗಡೆ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಇತರ ಯಾವುದೇ ನಾಗರಿಕರು ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ನೀಡಿದ ಮಸೀದಿ ಜಾಗ ವಾಪಸ್‌ಗೆ ಮುಸ್ಲಿಮರ ಒತ್ತಾಯ!!! ಮತ್ತೊಂದು ವಿವಾದ!
ಮಾಧ್ಯಮ ವರದಿಗಳ ಪ್ರಕಾರ, ಈ ವಿಮಾನ ಅಪಘಾತವು ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಚಿಲ್ಲಿವಾಕ್ ನಗರದಲ್ಲಿ ಸಂಭವಿಸಿದೆ. ಇದು ವ್ಯಾಂಕೋವರ್‌ನಿಂದ ಪೂರ್ವಕ್ಕೆ 100 ಕಿಲೋಮೀಟರ್ ದೂರದಲ್ಲಿದೆ. ಅಪಘಾತದ ತನಿಖೆಗಾಗಿ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಕೆನಡಾದ ಸಾರಿಗೆ ಸುರಕ್ಷತಾ ಮಂಡಳಿ ತಿಳಿಸಿದೆ.
ಪೈಪರ್ ಪಿಎ-34 ಸೆನೆಕಾ, ಅವಳಿ-ಎಂಜಿನ್ ಲಘು ವಿಮಾನ, ಟೇಕ್ ಆಫ್ ಆದ ನಂತರ ಸ್ಥಳೀಯ ವಿಮಾನ ನಿಲ್ದಾಣದ ಬಳಿ ಪೊದೆಗಳಿಗೆ ಅಪ್ಪಳಿಸಿತು ಎಂದು ಕೆನಡಾದ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದರಲ್ಲಿ ಪೈಲಟ್ ಸೇರಿದಂತೆ ವಿಮಾನದಲ್ಲಿದ್ದ ಮೂವರೂ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬದವರಿಗೆ ಮಾಹಿತಿ ನೀಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Crime News: ವಿದ್ಯಾರ್ಥಿನಿಯರ ವಾಶ್‌ರೂಂ ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟ ಸ್ವೀಪರ್!!! ಮುಂದೇನಾಯ್ತು ಗೊತ್ತಾ?
