Home » Egyptian mother kills son: ತನ್ನ ಮಗನ ಕೊಂದು, ತಲೆಯನ್ನು ಕುದಿಸಿ ತಿಂದ ಪಾಪಿ ತಾಯಿ! ಕಾರಣ?

Egyptian mother kills son: ತನ್ನ ಮಗನ ಕೊಂದು, ತಲೆಯನ್ನು ಕುದಿಸಿ ತಿಂದ ಪಾಪಿ ತಾಯಿ! ಕಾರಣ?

by ಹೊಸಕನ್ನಡ
1 comment
Egyptian mother kills son

Egyptian mother kills son: ತಾಯಿಯನ್ನು ದೇವರ ಸಮಾನ ಎನ್ನಲಾಗುತ್ತದೆ. ಆದರೆ, ತಾಯಿಯೇ ಮಗನನ್ನು ಕೊಂದು(Egyptian mother kills son)ತಿಂದಿರುವ ಹೇಯ ಕೃತ್ಯ ವರದಿಯಾಗಿದೆ. ಈ ಕೃತ್ಯ ಎಸಗಿರುವ ಮಹಿಳೆಯನ್ನು ಹನಾ ಮೊಹಮ್ಮದ್ ಹಸನ್ ಎನ್ನಲಾಗಿದ್ದು, ಈಕೆ ತನ್ನ ಐದು ವರ್ಷದ ಮಗನನ್ನು ಕೊಂದು ತಲೆ ತಿಂದಿರುವ ಆರೋಪ ಕೇಳಿಬಂದಿದೆ.

ಮಹಿಳೆ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಹಿನ್ನೆಲೆ ಗಂಡ ಹೇಳಿದ ಮಾತನ್ನು ಕೇಳದೆ ಹನಾ ಮಗನನ್ನು ಕರೆದುಕೊಂಡು ಬಂದಿದ್ದಳು ಎನ್ನಲಾಗಿದೆ. ಈ ನಡುವೆ ವಿಚ್ಛೇಧನ ಕೂಡ ಆಗಿದ್ದು, ಆದರೂ ಪತಿ ರಾಜಿ ಮಾಡಲು ಮುಂದಾದರು ಪ್ರಯೋಜನವಾಗಿಲ್ಲ ಎನ್ನಲಾಗಿದೆ. ಹನಾ ಮೊಹಮ್ಮದ್ ಹಸನ್ ತನ್ನ 5 ವರ್ಷದ ಮಗ ಯೂಸುಫ್‌ನೊಂದಿಗೆ ಒಬ್ಬಂಟಿಯಾಗಿ ನೆಲೆಸಿದ್ದಳು. ಹನಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಬಿಸಿನೀರಿನಲ್ಲಿ ಕುದಿಸಿ ತಲೆಯ ಭಾಗವನ್ನು ತುಂಡು ಮಾಡಿ ಚಾಕುವಿನಿಂದ ಇರಿದು ತನ್ನ ಮಗ ಯೂಸುಫ್ ನನ್ನು ನಂತರ ತಲೆಯನ್ನು ಬೇರ್ಪಡಿಸಿ ತಿಂದಿದ್ದಾಳೆ.

ಮಗನನ್ನು ಕೊಂದ ಬಳಿಕ ಮಹಿಳೆ ಮಗುವಿನ ಶವವನ್ನು ನೀರಿಗೆ ಹಾಕಿದ್ದು, ಆದರೆ, ಮನೆಯ ಪಕ್ಕದಲ್ಲಿಯೇ ವಾಸವಿರುವ ಸೋದರ ಸಂಬಂಧಿಯ ಮನೆಗೆ ಬಂದಾಗ ಯೂಸುಫ್ ಎಲ್ಲೂ ಕಾಣಿಸಲಿಲ್ಲ ಎನ್ನಲಾಗಿದೆ. ಆ ಬಳಿಕ, ಮೃತದೇಹದ ಕೆಲವು ತುಣುಕುಗಳು ಪತ್ತೆಯಾಗಿದ್ದು, ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಪೊಲೀಸರು ತನಿಖೆ ನಡೆಸಿದ ಸಂದರ್ಭ ಆಘಾತಕಾರಿ ಮಾಹಿತಿಗಳು ಬೆಳಕಿಗೆ ಬಂದಿದೆ.

ಇದನ್ನೂ ಓದಿ: 7th Pay Commission: ಸರಕಾರಿ ನೌಕರರಿಗೆ ಡಬಲ್‌ ಅಲ್ಲ ತ್ರಿಬಲ್‌ ಧಮಾಕಾ ಆಫರ್!!!‌ ವೇತನ ಹೆಚ್ಚಳ, ಡಿಎ ಅರಿಯರ್ಸ್ ಕುರಿತು ಬಿಗ್‌ ಅಪ್ಡೇಟ್‌ ಇಲ್ಲಿದೆ!!

You may also like

Leave a Comment