Home » Fastest Internet: ಚೀನಾದಲ್ಲಿ ಬಂದಿದೆ ಹೈ ಸ್ಪೀಡ್ ಇಂಟರ್ನೆಟ್ !! ಅಬ್ಬಬ್ಬಾ.. ಪ್ರತಿ ಸೆಕೆಂಡ್’ಗೆ ಇಷ್ಟೊಂದು ಮೂವಿ ಡೌನ್ಲೋಡ್ ಮಾಡ್ಬೋದು!!

Fastest Internet: ಚೀನಾದಲ್ಲಿ ಬಂದಿದೆ ಹೈ ಸ್ಪೀಡ್ ಇಂಟರ್ನೆಟ್ !! ಅಬ್ಬಬ್ಬಾ.. ಪ್ರತಿ ಸೆಕೆಂಡ್’ಗೆ ಇಷ್ಟೊಂದು ಮೂವಿ ಡೌನ್ಲೋಡ್ ಮಾಡ್ಬೋದು!!

2 comments
Fastest Internet

Fastest Internet: ತಂತ್ರಜ್ಞಾನ ವಲಯದಲ್ಲಿ ಮುಂದಡಿ ಇಡುತ್ತಿರುವ ಚೀನಾ, ಇದೀಗ ವಿಶ್ವದ ಅತ್ಯಂತ ವೇಗದ ಇಂಟರ್ನೆಟ್‌ (Fastest Internet)ಅನ್ನು ಅನಾವರಣಗೊಳಿಸಿದೆ. ಹೊಸ ತಲೆಮಾರಿನ ವೇಗದ ಇಂಟರ್ನೆಟ್‌ (Internet)ಎಂದು ಖ್ಯಾತಿ ಪಡೆದಿರುವ ಇದರಲ್ಲಿ 1 ಸೆಕೆಂಡ್‌ಗೆ 1.2 ಟೆರಾಬೈಟ್‌ ವೇಗದಲ್ಲಿ ಮಾಹಿತಿ ರವಾನಿಸಬಹುದು. ಅಂದರೆ, ಒಂದು ಸೆಕೆಂಡ್‌ಗೆ ಎಚ್‌ಡಿ ಗುಣಮಟ್ಟದ 156 ಚಲನಚಿತ್ರಗಳನ್ನು (Film)ಒಂದು ಕಡೆಯಿಂದ ಮತ್ತೊಂದೆಡೆಗೆ ರವಾನಿಸಬಹುದು.

ಚೀನಾದ ಹುವಾಯ್‌ ಟೆಕ್ನಾಲಜೀಸ್‌(Huawei Technologies), ಸಿಂಗ್‌ಹ್ವಾ ವಿಶ್ವವಿದ್ಯಾಲಯ (Tsinghua University) ಹಾಗೂ ಸೆರ್‌ನೆಟ್‌ ಎಂಬ ಶಿಕ್ಷಣ ಸಂಸ್ಥೆ ಜಂಟಿಯಾಗಿ ಬೀಜಿಂಗ್‌, ವುಹಾನ್‌ ಹಾಗೂ ಗ್ವಾಂಗ್‌ಝೂ ನಗರಗಳ 3000 ಕಿಲೋಮೀಟರ್‌ ನಡುವೆ ಆಪ್ಟಿಕಲ್‌ ಫೈಬರ್‌ ಜಾಲ ಒಳಗೊಂಡಿದೆ. ಈ ವೇಗದ ಇಂಟರ್ನೆಟ್‌ ದಾಖಲಾಗಿದೆ. ಇಂಟರ್ನೆಟ್‌ ಸೆಕೆಂಡ್‌ಗೆ 100 ಗಿಗಾಬೈಟ್‌ ವೇಗದಲ್ಲಿ ಮಾಹಿತಿ ರವಾನಿಸುತ್ತಿದೆ. ಚೀನಾ ಜಾಗತಿಕ ಮಟ್ಟದಲ್ಲಿ ಲಭ್ಯವಿರುವ ವೇಗಕ್ಕಿಂತ 12 ಪಟ್ಟು ವೇಗದ ಇಂಟರ್ನೆಟ್‌ ವೇಗ (1200 ಗಿಗಾಬೈಟ್‌) ಸಾಧಿಸಿದೆ.

 

ಇದನ್ನು ಓದಿ: BJP-JDS: ಬಿಜೆಪಿ ಜೊತೆ ಜೆಡಿಎಸ್ ವಿಲೀನ ?!

You may also like

Leave a Comment