Home » Yadgiri: 5ತಿಂಗಳ ಹಸುಗೂಸಿಗೆ ಹಾಲಿನಲ್ಲಿ ವಿಷ ಹಾಕಿ ಕೊಂದಳಾ ಮಲತಾಯಿ! ಜೀವಕ್ಕಿಂತ ಆಸ್ತಿ ಹೆಚ್ಚಾಯಿತೇ ಅಮ್ಮ???

Yadgiri: 5ತಿಂಗಳ ಹಸುಗೂಸಿಗೆ ಹಾಲಿನಲ್ಲಿ ವಿಷ ಹಾಕಿ ಕೊಂದಳಾ ಮಲತಾಯಿ! ಜೀವಕ್ಕಿಂತ ಆಸ್ತಿ ಹೆಚ್ಚಾಯಿತೇ ಅಮ್ಮ???

by Mallika
0 comments
Yadgiri

Yadgiri: ಮನುಷ್ಯನಿಗೆ ಹಣ, ಆಸ್ತಿಯ ಮದ ಹತ್ತಿದರೆ ಯುದ್ಧವೇ ನಡೆದಿರುವಂತಹ ಘಟನೆಗಳನ್ನು ನಾವು ನೋಡಿದ್ದೇವೆ. ಒಡಹುಟ್ಟಿದವರು ದಾಯಾದಿಗಳಾಗಿ ಬದಲಾಗುತ್ತಾರೆ. ಆಸ್ತಿ, ಹಣ, ಭೂಮಿ, ಮಣ್ಣು ಇದರ ಆಸೆಗೆ ಮಿತಿಯೇ ಇಲ್ಲವೇ ಅನ್ನುವ ರೀತಿಯಲ್ಲಿ ಇಲ್ಲೊಂದು ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯಲ್ಲಿ ಮಲತಾಯಿಯೊಬ್ಬಳು ತನ್ನ ಗಂಡನ ಆಸ್ತಿಗಾಗಿ ಗಂಡನ ಇನ್ನೊಬ್ಬ ಹೆಂಡತಿಯ ಐದು ತಿಂಗಳ ಹಸುಗೂಸಿಗೆ ಹಾಲಿನಲ್ಲಿ ವಿಷ ಬೆರೆಸಿ ಕುಡಿಸಿರುವ ಘಟನೆಯೊಂದು ನಡೆದಿದ್ದು, ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆಯೊಂದು ನಡೆದಿದೆ(Yadgiri).

ಮೃತ ಮಗು ಸಂಗೀತಾ (5ತಿಂಗಳು) ಎಂದು ಗುರುತಿಸಲಾಗಿದೆ. ತಾಯಿ ಶ್ರೀದೇವಿ ಚೆಟ್ಟಗೇರಿ ಮಗುವಿಗೆ ಹಾಲು ಕುಡಿಸಲೆಂದು ಹೋದಾಗ, ನಾನು ಮಗುವಿಗೆ ಹಾಲು ಕುಡಿಸುತ್ತೇನೆಂದು ದೇವಮ್ಮ ಮಲತಾಯಿ ಕರೆದುಕೊಂಡು ಹೋಗಿದ್ದಾಳೆ. ಆಸ್ತಿಯೆಲ್ಲ ಎಲ್ಲಿ ಈ ಮಗುವಿನ ಪಾಲಾಗುತ್ತೆ ಎಂಬ ಕಾರಣದಿಂದ ಈಕೆ ಮಗುವಿಗೆ ಹಾಲಿನಲ್ಲಿ ವಿಷವುಣಿಸಿದ್ದಾಳೆ.

ಹಾಲಿನ ಬಾಟಲಿಯಲ್ಲಿ ವಿಷ ಬೆರೆಸಿ ಕುಡಿಸಿದ್ದಾಳೆ ಈ ಪಾಪಿ. ಹಾಲು ಕುಡಿದ ಮಗು ಸ್ವಲ್ಪ ಹೊತ್ತಿನಲ್ಲೇ ವಾಂತಿ ಮಾಡಲು ಪ್ರಾರಂಭಿಸಿದೆ. ಹಾಲು ಮಗುವಿನ ಹೊಟ್ಟೆಗೆ ಹೋಗದೆ ಅಜೀರ್ಣವಾಗಿದೆ ಎಂದು ತಾಯಿ ಸಮಾಧಾನ ಮಾಡಿದ್ದಾಳೆ. ಆದರೆ ಮಗು ಒಂದೇ ಸಮನೆ ಅಳುತ್ತಿದ್ದು, ಮಗುವಿನ ಬಾಯಲ್ಲಿ ನೊರೆ ಬಂದಿದ್ದರಿಂದ ಇಡೀ ದೇಹದಲ್ಲಿ ವಿಷ ಆವರಿಸಿತ್ತು. ಹಾಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮಗು ಸಂಗೀತಾ ಸಾವಿಗೀಡಾಗಿದೆ.

ಇದನ್ನೂ ಓದಿ: Bengaluru: ಮದ್ಯದ ಅಮಲಿನಲ್ಲಿ ಬಟ್ಟೆ ಬಿಚ್ಚಿ ವಿದ್ಯಾರ್ಥಿಗಳ ಜೊತೆ ಅನುಚಿತ ವರ್ತನೆ ತೋರಿದ ಶಿಕ್ಷಕ!!!

You may also like

Leave a Comment