Home » Life style: ಹಲ್ಲಿಯನ್ನು ಮನೆಯಿಂದ ಓಡಿಸಲು ಸುಲಭ ಉಪಾಯ ಇಲ್ಲಿದೆ

Life style: ಹಲ್ಲಿಯನ್ನು ಮನೆಯಿಂದ ಓಡಿಸಲು ಸುಲಭ ಉಪಾಯ ಇಲ್ಲಿದೆ

0 comments

Life style: ಮನೆಯ ಗೋಡೆಯ ಮೇಲೆ, ಮೇಲ್ಛಾವಣಿಯ ಮೇಲೆ ಎಲ್ಲೆಂದರಲ್ಲಿ ಹಲ್ಲಿ ಇರುವುದು ಸರ್ವೇ ಸಾಮಾನ್ಯ. ಹಲ್ಲಿಗಳು ತುಂಬಾ ವಿಷಪೂರಿತವಾದುದು. ಹಲ್ಲಿ, ಜಿರಳೆಗಳಿಂದ ಇವುಗಳಿಂದ ಫುಡ್ (food) ಪಾಯಿಸನ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದರಲ್ಲೂ ಮನೆಯಲ್ಲಿ ಮಕ್ಕಳು ಮತ್ತು ವಯಸ್ಸಾದವರು ಇದ್ದರೆ ಅವರಿಗೆ ಇವುಗಳಿಂದ ಆರೋಗ್ಯದ (health) ಸಮಸ್ಯೆ ಜಾಸ್ತಿ.

ಹಲ್ಲಿಯನ್ನು ಮನೆಯಿಂದ ಓಡಿಸಲು ಹರಸಾಹಸ ಪಡುವ ನಿಮಗೆ ಇಲ್ಲಿದೆ ಸುಲಭ ಉಪಾಯ.

• ಮನೆಯಲ್ಲಿ ಬೇಡವಾದ ಕಸ ಆಹಾರವನ್ನು ಹೊರಗೆ ಎಸೆದು ಬಿಡಿ ಯಾಕೆಂದರೆ ಇದರಿಂದ ತಮ್ಮ ಸಂತತಿಯನ್ನು ಹೆಚ್ಚು ಮಾಡಿ ಕೊಳ್ಳಲು ಸಾಧ್ಯವಾಗುತ್ತದೆ. ಇದರ ಜೊತೆಗೆ ಬೇರೆ ಬೇರೆ ಕೀಟಗಳು, ಚಿಟ್ಟೆಗಳು, ಜಿರಳೆಗಳು ಜೊತೆಗೆ ಇರುವೆಗಳು ಕೂಡ ನಿಮ್ಮ ಮನೆ ಯಲ್ಲಿ ಹೆಚ್ಚಾಗುತ್ತವೆ.

• ಟೇಬಲ್ ಫ್ಯಾನ್ ಬಳಿ ಈರುಳ್ಳಿ ಬೆಳ್ಳುಳ್ಳಿ ಇಟ್ಟು ಬಿಡಿ ಯಾಕೆಂದರೆ ಹಲ್ಲಿಗಳಿಗೆ ಈರುಳ್ಳಿ ಬೆಳ್ಳುಳ್ಳಿ ಆಗಿ ಬರುವುದಿಲ್ಲ.

• ನ್ಯಾಪ್ತಲಿನ್ ಬಾಲ್ ಬಳಸಿ ಇದು ಕೇವಲ ಪಲ್ಲಿಗಳನ್ನು ಮಾತ್ರವಲ್ಲ ಯಾವುದೇ ರೀತಿಯ ಕೀಟ ಗಳನ್ನು, ಜಿರಳೆಗಳನ್ನು ಸಹ ಮನೆಯಿಂದ ಹೊರ ಹೋಗುವಂತೆ ಮಾಡುತ್ತದೆ. ಆದರೆ ಒಂದು ವೇಳೆ ನಿಮ್ಮ ಮನೆಯಲ್ಲಿ ಮಕ್ಕಳು ಇದ್ದರೆ, ಅವರ ಕೈಗೆ ಸಿಗದಂತೆ ಇರಿಸುವುದು ಉತ್ತಮ.

• ಪೆಪ್ಪರ್ ಸ್ಪ್ರೇ ಹಾಕುವುದರಿಂದ ಇದು ಹಲ್ಲಿಗಳ ದೇಹದ ಮೇಲೆ ಉರಿ ಕಂಡುಬರುವಂತೆ ಮಾಡುತ್ತದೆ ಮತ್ತು ಇದರಿಂದ ಹಲ್ಲಿ ದೂರ ಉಳಿಯುತ್ತವೆ.

• ಸೊಳ್ಳೆ ನಿವಾರಕ ದ್ರಾವಣವು ಹೆಚ್ಚಾಗಿ ಪ್ರತಿಯೊಬ್ಬರ ಮನೆಯಲ್ಲೂ ಇರುವುದು. ಹೀಗಾಗಿ ಇದನ್ನು ಬಳಸಿದರೆ ಹಲ್ಲಿಗಳನ್ನು ದೂರ ಮಾಡಬಹುದು.

ಇದನ್ನೂ ಓದಿ:Bigg Boss-12: ಬಿಗ್ ಬಾಸ್ ಕನ್ನಡ ವೀಕ್ಷಕರಿಗೆ ಗುಡ್ ನ್ಯೂಸ್ – ಜಸ್ಟ್ ಮಾಡಿ, ಬಂಗಾರದ ನಾಣ್ಯ ಗೆಲ್ಲಿ

You may also like