Bucket Cleaning : ಮನೆಯಲ್ಲಿ ಬಾತ್ರೂಮ್ ಹಾಗೂ ಇತರ ಕಡೆಗಳಲ್ಲಿ ಬಳಸುವಂತಹ ಬಕೆಟ್ ಮತ್ತು ಮಗ್ ಗಳು ಕೊಳೆಯಾದರೆ ಅವುಗಳನ್ನು ಶುಚಿಗೊಳಿಸುವಾಗ ಹರಸಾಹಸ ಪಡಬೇಕಾಗುತ್ತದೆ. ಎಷ್ಟು ಉಜ್ಜಿ, ತಿಕ್ಕಿ ತೊಳೆದರೂ ಕೂಡ ಅವುಗಳ ಮೇಲಿನ ಕಲೆಯು ತೊಲಗಲಾರದು. ತೊಳೆದು ತೊಳೆದು ನಮ್ಮ ಬೆನ್ನು ಮೂಳೆಗಳು, ರಟ್ಟೆಗಳು ನೋಯಬೇಕಷ್ಟೆ. ಆದರೆ ಇನ್ನು ಮುಂದೆ ಆ ಚಿಂತೆ ಬಿಡಿ. ಮನೆಯಲ್ಲಿರುವ ಈ ಒಂದು ವಸ್ತುವನ್ನು ಬಳಸಿ, ನಯಾ ಪೈಸೆ ಖರ್ಚಿಲ್ಲದೆ ಬಕೆಟ್ ಮತ್ತು ಮಗ್ ಗಳನ್ನು ಪಳ ಪಳ ಹೊಳೆಯುವಂತೆ ಮಾಡಿ
ಎಲ್ಲರ ಮನೆಯ ಅಡುಗೆ ಮನೆಯಲ್ಲಿ ಅಡುಗೆ ಸೋಡಾ ಇದ್ದೇ ಇರುತ್ತದೆ. ಇದು ಬಕೆಟ್ಗಳ ಮೇಲೆ ಅಂಟಿಕೊಂಡ ಹಳದಿ ಬಣ್ಣಗಳಿಗೆ ರಾಮಬಾಣವಿದ್ದಂತೆ. ಅಡುಗೆ ಸೋಡವನ್ನು ಬಳಸಿಕೊಂಡು ನೀವು ಆರಾಮಾಗಿ ಮನೆಯಲ್ಲಿರುವ ಕೊಳಕಾದ ಬಕೆಟ್ ಮತ್ತು ಮಗ್ಗುಗಳನ್ನು ಸುಲಭವಾಗಿ ಶುಭ್ರಗೊಳಿಸಬಹುದು.
ಇದನ್ನೂ ಓದಿ:Vehicle: 15 ವರ್ಷಕ್ಕಿಂತ ಹಳೇ ಸರ್ಕಾರಿ ವಾಹನ ಗುಜರಿಗೆ ಹಾಕಲು ಸರ್ಕಾರದಿಂದ ಆದೇಶ
ಹೌದು ಅಡುಗೆ ಸೋಡಾದ ಜೊತೆಗೆ, ನಿಮಗೆ ಪಾತ್ರೆ ತೊಳೆಯುವ ಸೋಪ್, ನಿಂಬೆ ರಸ ಮತ್ತು ಹಲ್ಲುಜ್ಜುವ ಬ್ರಷ್ ಕೂಡ ಬೇಕಾಗುತ್ತದೆ. ಬಕೆಟ್ ಅನ್ನು ಸ್ವಚ್ಛಗೊಳಿಸಲು, ಮೊದಲು ಅದನ್ನು ನೀರಿನಿಂದ ತೊಳೆಯಿರಿ. ನಂತರ ಒಂದು ಬಟ್ಟಲಿನಲ್ಲಿ ಅಡುಗೆ ಸೋಡಾ, ಪಾತ್ರೆ ತೊಳೆಯುವ ಸೋಪ್ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ. ಟೂತ್ ಬ್ರಷ್ ಸಹಾಯದಿಂದ ಬಕೆಟ್ ಮೇಲೆ ಪೇಸ್ಟ್ ಅನ್ನು ಹಚ್ಚಿ ಚೆನ್ನಾಗಿ ಸ್ಕ್ರಬ್ ಮಾಡಿ. ಬಕೆಟ್ ತುಂಬಾ ಕೊಳಕಾಗಿದ್ದರೆ, ಪೇಸ್ಟ್ ಅನ್ನು ಹಚ್ಚಿ 5-10 ನಿಮಿಷಗಳ ಕಾಲ ಬಿಡಿ. ನಂತರ ಸ್ಕ್ರಬ್ ಮಾಡಿ ಸ್ವಚ್ಛಗೊಳಿಸಿ. ಇದರ ನಂತರ, ಬಕೆಟ್ ಅನ್ನು ಶುದ್ಧ ನೀರಿನಿಂದ ತೊಳೆಯಿರಿ. ನಿಮ್ಮ ಬಕೆಟ್ ಹೊಸದರಂತೆ ಹೊಳೆಯಲು ಪ್ರಾರಂಭಿಸುತ್ತದೆ!
