Home » Cleaning Water Bottle: ನೀರಿನ ಬಾಟಲಿಗಳನ್ನು ಬಳಸುವ ಮುನ್ನ ಎಚ್ಚರವಾಗಿ ಇರಿ! ಈ ವಿಧಾನಗಳಿಂದ ನಿಮ್ಮ ಬಾಟಲಿ ಸ್ವಚ್ಚಗೊಳಿಸಿ!!!

Cleaning Water Bottle: ನೀರಿನ ಬಾಟಲಿಗಳನ್ನು ಬಳಸುವ ಮುನ್ನ ಎಚ್ಚರವಾಗಿ ಇರಿ! ಈ ವಿಧಾನಗಳಿಂದ ನಿಮ್ಮ ಬಾಟಲಿ ಸ್ವಚ್ಚಗೊಳಿಸಿ!!!

1 comment
Water Bottle

Water Bottle :ನಾವುಗಳು ಮನೆಯಲ್ಲಿ, ಆಫೀಸಿನಲ್ಲಿ ಹೆಚ್ಚಾಗಿ ನೀರಿನ ಬಾಟಲಿಗಳನ್ನು ಬಳಸುತ್ತೇವೆ. ಮಕ್ಕಳಿಗೂ ಕೂಡ ಶಾಲೆಗೆ ಬಾಟಲಿಗಳಲ್ಲಿ ನೀರು ತುಂಬಿಸಿ ಕಳುಹಿಸುತ್ತೇವೆ. ನೀರಿನ ಬಾಟಲಿ(Water Bottle)ಗಳನ್ನು ಬಳಸುವುದು ಉತ್ತಮ. ಕೆಲವರು ಗಾಜಿನ ಬಾಟಲಿಗಳನ್ನು, ಪ್ಲಾಸ್ಟಿಕ್ ಬಾಟಲಿಗಳನ್ನು ಮತ್ತು ಇನ್ನು ಕೆಲವರು ಸ್ಟೀಲ್ ಬಾಟಲಿಗಳನ್ನು ಬಳಸುತ್ತಾರೆ.

ಜನರನ್ನು ಆಕರ್ಷಿಸಲು ದಿನೇ  ದಿನೇ ವಿಶೇಷತೆ ರೀತಿಯಲ್ಲಿ ಬಾಟಲಿಗಳನ್ನು ಮಾಡಿ ಮಾರುಕಟ್ಟೆಗೆ ಬಿಡುತ್ತಾರೆ. ಇವುಗಳ ಹೊರ ಬಾಗವನ್ನು ನೋಡೆ ಜನರು ಆಕರ್ಷಿತವಾಗಿ ಖರೀದಿಸುತ್ತಾರೆ. ಬಾಟಲಿಗಳನ್ನು ಯಾವಾಗಲೂ ಸ್ವಚ್ಛಗೊಳಿಸುವುದು ಬಹಳ  ಮುಖ್ಯ. ಕೇವಲ ಹೊರಗೆ ಸ್ವಚ್ಛ ಮಾಡದೆ ಒಳಗೂ ಕೂಡ ಸ್ವಚ್ಛ ಮಾಡುವುದು ಉತ್ತಮ.

ಹೌದು, ನೀರಿನ ಬಾಟಲಿಗಳನ್ನು ಒಳಭಾಗದಲ್ಲಿ ಸ್ವಚ್ಛಗೊಳಿಸದಿದ್ದರೆ ಅಪಾಯ ಖಂಡಿತ. ಇದರಿಂದ ಹಲವು ರೋಗಗಳಿಗೆ ತುತ್ತಾಗಬಹುದು. ಇದಲ್ಲದೆ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಂತಹ ಸೂಕ್ಷ್ಮಜೀವಿಗಳ ನೀರಿನಲ್ಲಿ ಸೇರಬಹುದು. ಇದು ನಮ್ಮದೇಹ ಸೇರಿ ಅನೇಕ ಸಮಸ್ಯೆಗಳನ್ನು ಹುಟ್ಟು ಹಾಕುತ್ತವೆ.  ಬಾಟಲಿಗಳ ಒಳಭಾಗ ಚಿಕ್ಕದಿರುತ್ತದೆ ಎಂಬ ಕಾರಣಕ್ಕೆ  ಬಾಟಲಿಗಳನ್ನು ಸ್ವಚ್ಛಗೊಳಿಸುಲು ಸಾಧ್ಯವಾಗುವುದಿಲ್ಲ.  ಬಾಟಲಿಗಳ ಒಳ ಭಾಗವನ್ನು ಸ್ವಚ್ಛಗೊಳಿಸುವ ಸುಲಭ ಮಾರ್ಗ ಇಲ್ಲಿದೆ ನೋಡಿ.

ಬಿಸಿ ನೀರನ್ನು ಬಳಸಿ ಸ್ವಚ್ಛಗೊಳಿಸಿ

ಬಿಸಿ ನೀರಿನಿಂದ ಗಾಜಿನ ಬಾಟಲಿಗಳು, ಪ್ಲಾಸ್ಟಿಕ್ ಬಾಟಲಿಗಳು ಸ್ವಚ್ಛಗಳಿಸಬಹುದು, ಆದರೆ ಬಾಟಲಿಗೆ ಬಿಸಿ ನೀರನ್ನು ನೇರವಾಗಿ ಹಾಕುವ ಅಗತ್ಯವಿಲ್ಲ. ಬಿಸಿ ನೀರನ್ನು ಬಾಟಲಿಗೆ ಹಾಕಿದರೆ ಅದು ಬಿರುಕು ಹಾಗೂ ಕರಗುತ್ತವೆ ಹಾಗಾಗಿ ಬಾಟಲಿಗೆ ನೇರವಾಗಿ ಬಿಸಿ ನೀರನ್ನು ಹಾಕುವುದನ್ನು ನಿಲ್ಲಿಸಿ.

ನೀವು ಮೊದಲು ಬಿಸಿ ನೀರಿಗೆ ಉಪ್ಪನ್ನು ಸೇರಿಸಿ ಅದಾದ ನಂತರ,ನೀರು ಸ್ವಲ್ಪ ಆರಿದ ಮೇಲೆ  ಬಾಟಲಿನ ಒಳ ಭಾಗಕ್ಕೆ ಹಾಕಿ ಅದನ್ನು ಸ್ವಚ್ಛಗೊಳಿಸಿ.

ನಿಂಬೆ ರಸ ಮತ್ತು ಉಪ್ಪಿನಿಂದ ಬಾಟಲಿಗಳನ್ನು ಸ್ವಚ್ಛಗೊಳಿಸಿ

ಪ್ಲಾಸ್ಟಿಕ್ ಬಾಟಲಿ ಅಥವಾ ಲೋಟವನ್ನು ಸ್ವಚ್ಛಗೊಳಿಸಲು, ಬಾಟಲಿಗೆ ಅರ್ಧ ನೀರು ತುಂಬಿ ನಂತರ ಆ ನೀರಿಗೆ ಮೂರರಿಂದ ನಾಲ್ಕು ನಿಂಬೆ ತುಂಡುಗಳನ್ನು ಹಾಕಿ, ಅದಕ್ಕೆ ಸ್ವಲ್ಪ ಉಪ್ಪನ್ನು ಬೆರೆಸಿ ಚೆನ್ನಾಗಿ ವಿಶ್ರಣ ಮಾಡಿ. ಇದರಿಂದ ಬಾಟಲಿಗಳು ಸಂಪೂರ್ಣವಾಗಿ ಸ್ವಚ್ಛಗೊಳ್ಳುತ್ತವೆ. ಮತ್ತು ಬಾಟಲಿನಲ್ಲಿ ಇರುವ ಬ್ಯಾಕ್ಟೀರಿಯಾಗಳು ಕೂಡ ನಾಶವಾಗುತ್ತವೆ.

ವಿನೆಗರ್ ಮತ್ತು ಬೇಕಿಂಗ್ ಸೋಡಾ ಬಳಸಿ

ಗಾಜಿನ ಅಥವಾ ಪ್ಲಾಸ್ಟಿಕ್ ಬಾಟಲಿಗಳನ್ನು ಸ್ವಚ್ಛಗೊಳಿಸಲು ಅಡುಗೆ ಮನೆಯಲ್ಲಿ ಇರುವ ವಿನೆಗರ್ ಮತ್ತು ಅಡಿಗೆ ಸೋಡಾವನ್ನು ಬಳಿಸಿ. ಬಾಟಲಿಗೆ ಎರಡು ಚಮಚ ವಿನೆಗರ್ ಅನ್ನು ಹಾಕಿ ನಂತರ ಒಂದು ಚಮಚ ಅಡುಗೆ ಸೋಡಾವನ್ನು ಬೆರೆಸಿ, ಇದಾದ ಬಳಿಕ ಬಾಟಲಿನ ಮುಚ್ಚಳ ಹಾಕಿ ಚೆನ್ನಾಗಿ ಅಲ್ಲಾಡಿಸಿ ಮತ್ತು ಸ್ವಲ್ಪ ಸಮಯ ಹಾಗೆ ಬಿಡಿ. ಆ ನಂತರ ಬಾಟಲಿಗೆ ಶುದ್ದವಾದ ನೀರನ್ನು ಬಳಸಿ ಪೂರ್ತಿ ಬಾಟಲಿಯನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಬಾಟಲಿ ಪೂರ್ಣಾವಾಗಿ ಸ್ವಚ್ಛ ಆಗುತ್ತದೆ.

You may also like

Leave a Comment