Home » Curry Leaves Preservation: ಕರಿಬೇವು ಹಾಳಾಗದೆ ಹಲವು ದಿನ ಫ್ರೆಶ್ ಆಗಿರಲು ಈ ಟಿಪ್ಸ್​ ಫಾಲೋ ಮಾಡಿ !!!

Curry Leaves Preservation: ಕರಿಬೇವು ಹಾಳಾಗದೆ ಹಲವು ದಿನ ಫ್ರೆಶ್ ಆಗಿರಲು ಈ ಟಿಪ್ಸ್​ ಫಾಲೋ ಮಾಡಿ !!!

0 comments
Curry Leaves Preservation

Curry Leaves Preservation: ವಿಶೇಷ ಆರೋಗ್ಯ ರಕ್ಷಣೆಯನ್ನು ಮಾಡುವ ನೈಸರ್ಗಿಕ ಆಹಾರ ಉತ್ಪನ್ನ ಅಂದ್ರೆ ಅದು ಕರಿಬೇವಿನ ಎಲೆ. ಇದನ್ನು ಸಮಾನ್ಯವಾಗಿ ಅಡುಗೆಯ ಒಗ್ಗರಣೆಗೆ ಬಳಸುತ್ತೇವೆ. ಇದರಲ್ಲಿರುವ ಸುವಾಸನೆ ಮತ್ತು ಆರೋಗ್ಯಕರ ಅಂಶಗಳು ಆಹಾರದ ರುಚಿ ಹಾಗೂ ಪರಿಮಳವನ್ನು ಹೆಚ್ಚಿಸುತ್ತದೆ.

ಭಾರತೀಯರ ಅಡುಗೆ ಮನೆಯಲ್ಲಿ ಯಾವಾಗಲು ಹಾಜರಿರುವ ಕರಿಬೇವಿನ (Curry Leaves Preservation) ಎಲೆ, ತ್ವಚೆಯಿಂದ ಹಿಡಿದು ಕೂದಲಿನವರೆಗೂ ರಕ್ಷಣೆ ನೀಡುತ್ತದೆ. ಕರಿಬೇವು ಸೌಂದರ್ಯ ಸೇರಿದಂತೆ ಆರೋಗ್ಯಕ್ಕೆ ಕೂಡ ತುಂಬಾ ಪ್ರಯೋಜನಕಾರಿಯಾಗಿದೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕರಿಬೇವಿನ ಸೊಪ್ಪಿನಲ್ಲಿ ಔಷಧೀಯ ಗುಣಗಳೂ ಇವೆ.

ಅಂದಹಾಗೆ ಕರಿಬೇವು ತಾಜಾವಾಗಿದ್ದರೆ ಅಡುಗೆಯ ರುಚಿ ಹಾಗೂ ಪರಿಮಳವೂ ಹೆಚ್ಚುತ್ತದೆ. ಆದರೆ, ಕರಿಬೇವನ್ನು ಗಿಡದಿಂದ ಕಿತ್ತು ತಂದು ಹೆಚ್ಚೆಂದರೆ ಎರಡು ದಿನ ಫ್ರೆಶ್ ಆಗಿ ಇಡಬಹುದು. ಆದರೆ, ಮಾರನೇ ದಿನ ಹಾಳಾಗುತ್ತದೆ. ಹಾಗಿದ್ದಾಗ ಕರಿಬೇವು ಫ್ರೆಶ್​ ಆಗಿರಲು, ಹಾಳಾಗದೇ ಇರಲು ಏನು ಮಾಡಬೇಕು?! ಜಸ್ಟ್ ಈ ಟಿಪ್ಸ್​ ಫಾಲೋ ಮಾಡಿ ‌ಸಾಕು!!.

ಕರಿಬೇವಿನ ಎಲೆ ಫ್ರೆಶ್ ಆಗಿರಲು ಟಿಪ್ಸ್ :-

• ಕರಿಬೇವಿನ ಎಲೆಯನ್ನು ತೊಳೆದು ಟವೆಲ್ ಮೇಲೆ ಒಣಗಿಸಿ. ಟಿಶ್ಯೂ ಪೇಪರ್ ನಲ್ಲಿ ಸುತ್ತಿ ಪ್ಲಾಸ್ಟಿಕ್ ಪಾತ್ರೆಯಲ್ಲಿ ಹಾಕಿ ಫ್ರಿಡ್ಜ್ ನಲ್ಲಿಡಿ. ಅಂದಹಾಗೆ, ಕಾಂಡಗಳಿಂದ ಎಲೆಗಳನ್ನು ಬೇರ್ಪಡಿಸದೆಯೂ ಎಲೆಗಳನ್ನು ನೀರು ತುಂಬಿದ ಪಾತ್ರೆಯಲ್ಲಿ ಇರಿಸಬಹುದು. ಇದು ದೀರ್ಘಕಾಲದವರೆಗೆ ತಾಜಾವಾಗಿರುತ್ತದೆ.

• ಗಿಡ ಅಥವಾ ಮರದಿಂದ ಕಿತ್ತು ತಂದ ಕರಿಬೇವನ್ನು ಚೆನ್ನಾಗಿ ತೊಳೆದು ಒಣಗಿಸಿ. ನಂತರ ಎಲೆಗಳನ್ನು ಅದರ ತೆಳುವಾದ ಕಾಂಡಗಳಿಂದ ಬೇರ್ಪಡಿಸಿ. ಕರಿಬೇವಿನ ಎಲೆಗಳನ್ನು ಕಾಗದದ ಟವೆಲ್ ಲೇಪಿತ ಪಾತ್ರೆಯ ಮೇಲೆ ಇರಿಸಿ. ಬಳಿಕ ಅದರ ಮೇಲೆ ಪೇಪರ್ ಟವಲ್ ಹಾಕಿ. ಗಾಳಿಯಾಡದ ಡಬ್ಬದಲ್ಲಿ ಫ್ರಿಜ್ ನಲ್ಲಿಡಿ.

• ಕರಿಬೇವು ತೊಳೆದು ಬಿಸಿಲಿನಲ್ಲಿ 3-4 ದಿನ ಒಣಗಿಸಿ. ನಂತರ ಅಡುಗೆಮನೆಯಲ್ಲಿ ಅಥವಾ ಫ್ರಿಜ್ನಲ್ಲಿ ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿ. ಈ ರೀತಿ ಮಾಡಿದರೆ ಕರಿಬೇವಿನ ಎಲೆಗಳು 10 ದಿನದಿಂದ 1 ತಿಂಗಳವರೆಗೆ ತಾಜಾವಾಗಿರುತ್ತವೆ.

ಇದನ್ನೂ ಓದಿ: Transport Department App For Auto Cab : ಓಲಾ ಉಬರ್ ಸೀದಾ ಮನೆಗೆ – ಆಟೋ, ಟ್ಯಾಕ್ಸಿ ಚಾಲಕರಿಗಾಗಿ ಸರಕಾರದಿಂದಲೇ ಆ್ಯಪ್‌ ! ಸಾರಿಗೆ ಸಚಿವರ ಮಹತ್ವದ ಘೋಷಣೆ !!!

You may also like