Wallet: ವ್ಯಾಲೆಟ್ (wallet)ಅಥವಾ ಪರ್ಸ್ ಬಳಕೆ ಮಾಡದವರೆ ವಿರಳ. ವ್ಯಾಲೆಟ್ ಅಥವಾ ಪರ್ಸ್ ಒಯ್ಯುವುದೇ ಹರಸಾಹಸ. ಹೆಚ್ಚಿನ ಮಂದಿ ತಮ್ಮ ಪ್ಯಾಂಟ್ ನ ಹಿಂಭಾಗದ ಜೇಬಿನಲ್ಲಿ ವ್ಯಾಲೆಟ್ ಇಡುತ್ತಾರೆ. ನೀವು ಕೂಡಾ ಈ ಅಭ್ಯಾಸ ಇಟ್ಟುಕೊಂಡಿದ್ದೀರಾ?? ಹಾಗಿದ್ರೆ, ಈ ವಿಷಯ ಮೊದಲು ತಿಳಿದುಕೊಳ್ಳಿ.
ಪುರುಷರು ವ್ಯಾಲೆಟ್ ಅನ್ನು ಪ್ಯಾಂಟ್ ಹಿಂಭಾಗದ ಜೇಬಿನಲ್ಲಿ ಇಡುವ ಅಭ್ಯಾಸ ಇಟ್ಟುಕೊಂಡರೆ ವಿವಿಧ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಪ್ಯಾಂಟ್ ನ ಹಿಂಭಾಗದ ಜೇಬಿನಲ್ಲಿ ವ್ಯಾಲೆಟ್ ಅನ್ನು ದೀರ್ಘಕಾಲ ಇಡುವುದು ‘ಫ್ಯಾಟ್ ವ್ಯಾಲೆಟ್ ಸಿಂಡ್ರೋಮ್’ ಗೆ ಕಾರಣವಾಗುವ ಸಾಧ್ಯತೆಯಿದೆ. ಅಷ್ಟಕ್ಕೂ ಈ ರೋಗ ಏಕೆ ಕಾಣಿಸಿಕೊಳ್ಳುತ್ತದೆ?
ಕುತ್ತಿಗೆ ಮತ್ತು ಬೆನ್ನಿನ ಸಮಸ್ಯೆಗಳು:
ಹೆಚ್ಚಿನ ಮಂದಿ ತಮ್ಮ ವ್ಯಾಲೆಟ್ ನಲ್ಲಿ ವಿವಿಧ ಕಾರ್ಡ್ ಗಳು, ಹಣ, ಬಿಲ್ ಗಳು ಇತ್ಯಾದಿಗಳನ್ನು ಇಡುತ್ತಾರೆ. ಹೆಚ್ಚಿನ ಜನರು ಅನಗತ್ಯ ವಸ್ತುಗಳನ್ನು ಇಟ್ಟುಕೊಳ್ಳುವ ಅಭ್ಯಾಸ ರೂಡಿಸಿಕೊಂಡಿರುತ್ತಾರೆ. ಇದು ಪರ್ಸ್ ನ ತೂಕವನ್ನು ಹೆಚ್ಚಿಸುವುದಲ್ಲದೆ, ಭಾರವಾದ ವ್ಯಾಲೆಟ್ ಅನ್ನು ನಿರಂತರವಾಗಿ ಹಿಂಭಾಗದ ಜೇಬಿನಲ್ಲಿ ಇಡುವುದರಿಂದ ಭುಜ, ಕುತ್ತಿಗೆ ಮತ್ತು ಬೆನ್ನಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.ಪ್ಯಾಂಟ್ ಅನ್ನು ಹಿಂಭಾಗದ ಜೇಬಿನಲ್ಲಿ ಇಡುವ ಪರಿಣಾಮ ಈ ಸಮಸ್ಯೆಗಳು ಕಂಡುಬರುವ ಸಂಭವವಿದೆ.
ಕೀಲುಗಳು ಒತ್ತಡಕ್ಕೊಳಗಾಗುತ್ತವೆ:
ತೂಕದ ವ್ಯಾಲೆಟ್ ಅನ್ನು ಹಿಂಭಾಗದ ಜೇಬಿನಲ್ಲಿ ಇಡುವ ಅಭ್ಯಾಸ ಇಟ್ಟುಕೊಂಡರೆ, ಸೊಂಟದ ಮೂಳೆಯ ಸ್ನಾಯುಗಳು ಮತ್ತು ಕೀಲುಗಳು ಒತ್ತಡಕ್ಕೆ ಒಳಗಾಗುವ ಜೊತೆಗೆ ಹೆಚ್ಚಿನ ತೂಕದಿಂದಾಗಿ, ಅನೇಕ ಜನರು ಸ್ವಯಂಚಾಲಿತವಾಗಿ ಒಂದು ಬದಿಗೆ ವಾಲುವುದು ಕೂಡ ಇದೆ. ಇದರಿಂದ ಬೆನ್ನುಹುರಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಸಮಸ್ಯೆಯಿಂದ ಪಾರಾಗಲು, ಅನಗತ್ಯ ಬಿಲ್ ಗಳನ್ನು ವ್ಯಾಲೆಟ್ ನಿಂದ ತೆಗೆಯಿರಿ. ವ್ಯಾಲೆಟ್ ತೂಕ ಕಡಿಮೆ ಇರುವಂತೆ ನೋಡಿಕೊಳ್ಳಿ.ವೈದ್ಯರ ಪ್ರಕಾರ, ಇದು ಕುತ್ತಿಗೆ, ಬೆನ್ನು, ಕಾಲುಗಳು ಮತ್ತು ಭುಜದ ಸಮಸ್ಯೆಗಳಿಂದ ಸ್ವಲ್ಪ ಪರಿಹಾರವನ್ನು ನೀಡುತ್ತದೆ.
ಇದನ್ನು ಓದಿ: ಮಂಗಳೂರು: ಮಂಗಳಾದೇವಿ ನವರಾತ್ರಿ ಉತ್ಸವ- ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಉಂಟಾ, ಇಲ್ವಾ ?!
