Steel bottle: ಇಂದು ಹೆಚ್ಚಿನವರು ಪ್ಲಾಸ್ಟಿಕ್ ಬಾಟಲಿಯನ್ನು ಬಿಟ್ಟು ಸ್ಟೀಲ್ ಬಾಟಲ್ ಬಳಸುವುದೇ ಹೆಚ್ಚು. ಪ್ರತಿದಿನ ಶಾಲಾ, ಕಾಲೇಜು, ಆಫೀಸ್ ಗಳಿಗೆ ಈ ಬಾಟಲಿನಲ್ಲಿ ನೀರು ಕೊಂಡೊಯ್ಯುವುದರಿಂದ, ಅಥವಾ ಅದರಲ್ಲಿ ಹಾಲು, ಕಾಫಿ ಇಲ್ಲಾ ಯಾವುದಾದರೂ ಕೋಲ್ಡ್ ಡ್ರಿಂಕ್ಸ್ ಅನ್ನು ಕೊಂಡೊಯ್ಯುವುದರಿಂದ ಅದು ಬೇಗ ಸ್ಮೆಲ್ ಬಂದುಬಿಡುತ್ತದೆ. ಒಮ್ಮೊಮ್ಮೆ ನಾವು ಎಷ್ಟು ತೊಡೆದರು ಆ ಸ್ಮೆಲ್ ಹೋಗುವುದಿಲ್ಲ. ಇದು ನೀರು ಕುಡಿಯುವಾಗ ಒಂತರ ಅನಿಸುತ್ತದೆ. ಹಾಗಾದರೆ ಚಿಂತೆ ಬೇಡ, ಜಸ್ಟ್ ಒಂದು ಎಲೆಯನ್ನು ಹಾಕಿ ಮುಂದೆ ಚಮತ್ಕಾರ ನೋಡಿ.
https://www.instagram.com/reel/DODlUKRjdD5/?igsh=MTc0MDB3Y2x0emRteg==
ಹೌದು, ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ. ಇದರಲ್ಲಿ ಮಹಿಳೆಯೊಬ್ಬರು ಬಾಟಲಿಯಿಂದ ವಾಸನೆಯನ್ನು ತೊಡೆದುಹಾಕಲು ಒಂದೊಳ್ಳೆ ಐಡಿಯಾ ಹೇಳಿ ಕೊಟ್ಟಿದ್ದಾರೆ. ಇದರಲ್ಲಿ ಮಹಿಳೆ ಪಲಾವ್ ಎಲೆಯನ್ನು ಸುಟ್ಟು ಸ್ಟೀಲ್ ಬಾಟಲಿಯಲ್ಲಿ ಹಾಕಿ ಮುಚ್ಚಳದಿಂದ ಮುಚ್ಚುತ್ತಾರೆ. ಕೆಲವು ನಿಮಿಷಗಳ ನಂತರ ಮುಚ್ಚಳವನ್ನು ತೆರೆದು ನೀರಿನಿಂದ ತೊಳೆಯುತ್ತಾರೆ. ನಂತರ ಬಾಟಲಿಯು ಒಳಗಿನಿಂದ ಹೊಳೆಯುವುದಲ್ಲದೆ, ಸ್ವಚ್ಛವಾಗಿ ಕಾಣುತ್ತದೆ.
ಇದನ್ನು ಓದಿ:Bangalore: ಬೆಂಗಳೂರಿಗರೇ ಇನ್ಮುಂದೆ ಎಲ್ಲೆಂದರಲ್ಲಿ ಕಸ ಎಸೆದರೆ ಬೀಳುತ್ತೆ ಭರ್ಜರಿ ದಂಡ
ಹೀಗಾದ್ರೆ ನೀವು ಮಾಡಬೇಕಾದದ್ದು ಇಷ್ಟೇ. ಮೊದಲಿಗೆ ಗ್ಯಾಸ್ ಮೇಲೆ ಪಲಾವ್ ಎಲೆಯನ್ನು ಸುಟ್ಟು, ಬಾಟಲಿಯಲ್ಲಿ ಹಾಕಿ ಮುಚ್ಚಿ. ಕೆಲವು ನಿಮಿಷಗಳ ನಂತರ, ಬಾಟಲಿಯ ಮುಚ್ಚಳವನ್ನು ತೆರೆಯಿರಿ. ಹೊಗೆ ಹೋದ ನಂತರ ಅದನ್ನು ಶುದ್ಧ ನೀರು ಅಥವಾ ಡಿಟರ್ಜೆಂಟ್‌ನಿಂದ ತೊಳೆದು ಒಣಗಿಸಿ ಬಳಸಿ. ಈ ವೈರಲ್ ಹ್ಯಾಕ್ ಅನ್ನು @pari.gound.31 ಹೆಸರಿನ Instagram ಪೇಜ್‌ನಲ್ಲಿ ಹಂಚಿಕೊಂಡಿದ್ದು, ಇದು ಸಾಕಷ್ಟು ವೈರಲ್ ಆಗುತ್ತಿದೆ. ಆದರೆ ನೆನಪಿಡಿ ಈ ಐಡಿಯಾ ಪ್ಲಾಸ್ಟಿಕ್ ಬಾಟಲಿಗಳಿಗೆ ಅಪ್ಲೈ ಆಗಲ್ಲ. ನೀವು ಈ ಹ್ಯಾಕ್ ಅನ್ನು ಸ್ಟೀಲ್ ಬಾಟಲಿಗಳ ಮೇಲೆ ಮಾತ್ರ ಪ್ರಯತ್ನಿಸಬಹುದು.
