ಕಿತ್ತಳೆ ಹಣ್ಣು ಅಂದ್ರೆ ಅದೆಷ್ಟೋ ಜನರಿಗೆ ಸಖತ್ ಫೇವರೆಟ್ ಇರುತ್ತೆ ಅಲ್ವಾ? ಹಾಗೆ ಕಿತ್ತಳೆ ಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ಇನ್ನೊಬ್ಬರ ಕಣ್ಣಿಗೆ ಹಾರಿಸುವುದು ಸಣ್ಣ ಮಕ್ಕಳಿಂದ ಆಡಿ ಅಭ್ಯಾಸವಿರುತ್ತದೆ. ಈ ರಸವು ಕಣ್ಣಿಗೆ ತುಂಬಾ ಒಳ್ಳೆಯದಂತೆ. ಹಾಗಂತ ಹೆಚ್ಚಾಗಿ ಕಣ್ಣಿಗೆ ಆ ರಸವನ್ನು ಹಾಕಬಾರದು. ಇಂದು ಈ ಸಿಪ್ಪೆಯಿಂದ ಏನೆಲ್ಲಾ ಬಗಳಿದೆ ಎಂಬುದನ್ನು ತಿಳಿಯೋಣ ಬನ್ನಿ.
ಪರಿಮಳಯುಕ್ತ ಫೈರ್ ಸ್ಟಾರ್ಟರ್: ನೀವು ಪರಿಸರ ಸ್ನೇಹಿ ರೀತಿಯಲ್ಲಿ ಬೆಂಕಿಯನ್ನು ಹಚ್ಚಲು ಬಯಸಿದರೆ, ಕಿತ್ತಳೆ ಸಿಪ್ಪೆಬಳಸಬಹುದು. ಅದನ್ನು ಒಣಗಿಸಿ ಸುಟ್ಟಾಗ, ಆ ಸ್ಥಳವು ಸಿಟ್ರಸ್ ಪರಿಮಳದಿಂದ ಆವೃತವಾಗಿರುತ್ತದೆ. ಆದ್ದರಿಂದ ರಾಸಾಯನಿಕ ಫೈರ್ ಸ್ಟಾರ್ಟರ್ಗಳನ್ನು ತಪ್ಪಿಸಿ. ಇಂದಿನಿಂದ ಕಿತ್ತಳೆ ಸಿಪ್ಪೆಗಳನ್ನು ಬಳಸಿ.
ನಾವು ತ್ಯಾಜ್ಯ ಎಂದು ಭಾವಿಸುವ ಕಿತ್ತಳೆ ಸಿಪ್ಪೆಗಳು ಅತ್ಯುತ್ತಮ ಕೀಟನಾಶಕವಾಗಿ ಕಾರ್ಯನಿರ್ವಹಿಸುತ್ತವೆ. ನಿಮ್ಮ ಮನೆಯ ಪ್ರವೇಶ ದ್ವಾರದಲ್ಲಿ ಅಥವಾ ನಿಮ್ಮ ತೋಟದಲ್ಲಿ ಒಣಗಿದ ಕಿತ್ತಳೆ ಸಿಪ್ಪೆಗಳನ್ನು ಸಿಂಪಡಿಸಿ. ಹೀಗೆ ಮಾಡುವುದರಿಂದ ಮನೆಯೊಳಗೆ ಬೇಡದ ಕೀಟಗಳು ಬರುವುದಿಲ್ಲ.
ಕಿತ್ತಳೆ ಸಿಪ್ಪೆಗಳು ನೈಸರ್ಗಿಕವಾಗಿ ಸ್ವಚ್ಛಗೊಳಿಸುವ ಗುಣಗಳನ್ನು ಹೊಂದಿವೆ. ಕಿತ್ತಳೆ ಸಿಪ್ಪೆಯ ರಸದಲ್ಲಿ ಸ್ವಲ್ಪ ವಿನೆಗರ್ ಮಿಶ್ರಣ ಮಾಡಿ, ಪೇಸ್ಟ್ ಮಾಡಿ ಇಟ್ಟುಕೊಳ್ಳಿ. ಮನೆಯಲ್ಲಿ ತಯಾರಿಸಿದ ಈ ಕ್ಲೀನರ್ ಸಿಟ್ರಸ್ ಎಣ್ಣೆಯಲ್ಲಿ ಸಮೃದ್ಧವಾಗಿದೆ. ಇದು ಎಣ್ಣೆಯುಕ್ತ ಕಲೆಗಳನ್ನು ತೆಗೆದುಹಾಕುತ್ತದೆ ಮತ್ತು ಅವುಗಳನ್ನು ಹೊಳೆಯುವಂತೆ ಮಾಡುತ್ತದೆ. ಇದಲ್ಲದೇ, ನಿಮ್ಮ ಮನೆಯು ತಾಜಾ ವಾಸನೆಯನ್ನು ಪಡೆಯುತ್ತದೆ.
ಇದನ್ನು ಓದಿ: CAA: ಸದ್ಯದಲ್ಲೇ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ- ಇಲ್ಲಿದೆ ಬಿಗ್ ಅಪ್ಡೇಟ್
ಸಿಟ್ರಸ್ ಟೀ: ಪ್ರತಿದಿನ ಒಂದೇ ಟೀ ಕುಡಿದು ಬೇಸರವಾಗಿದ್ಯಾ? ಹಾಗಾದ್ರೆ ಇನ್ಮುಂದೆ ಚಹಾಕ್ಕೆ ಬಿಸಿಲಿನಲ್ಲಿ ಒಣಗಿಸಿದ ಕಿತ್ತಳೆ ಸಿಪ್ಪೆಗಳನ್ನು ಸೇರಿಸಬೇಕು. ನಿಮಗೆ ಇದು ಹೊಸ ಸುವಾಸನೆ ಮತ್ತು ಪರಿಮಳವನ್ನು ನೀಡುತ್ತದೆ. ನಿಮ್ಮ ಮುಂಜಾನೆಯನ್ನು ರಿಫ್ರೆಶ್ ಮಾಡಲು ಇದು ಉತ್ತಮ ಚಹಾವಾಗಿದೆ.
ಗೊತ್ತಾಯ್ತು ಅಲ್ವಾ ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಏನೆಲ್ಲ ಲಾಭಗಳಿದೆ ಅಂತ. ಇನ್ನು ಮುಂದೆ ಎಸೆಯದೆ ಟ್ರೈ ಮಾಡಿ.
