Home » Dream : ಕನಸು ಕಾಣುವ ಪ್ರತಿಯೊಂದು ವಿಷಯಕ್ಕೂ ಇದೆ ಇಷ್ಟೆಲ್ಲಾ ಅರ್ಥ!

Dream : ಕನಸು ಕಾಣುವ ಪ್ರತಿಯೊಂದು ವಿಷಯಕ್ಕೂ ಇದೆ ಇಷ್ಟೆಲ್ಲಾ ಅರ್ಥ!

1 comment
Dream

Dream : ಜೀವನ ಎಂಬುದು ಎಷ್ಟು ವಿಚಿತ್ರ ಅಂದ್ರೆ ನಡೆಯುವ ಆಗು-ಹೋಗುಗಳು ಯಾರಿಗೂ ತಿಳಿಯದೆ ನಡೆದು ಹೋಗುತ್ತದೆ. ಆದ್ರೆ, ಕೆಲವೊಂದು ವಿಚಾರಗಳು ಭವಿಷ್ಯವಾಣಿಯ ಮೂಲಕ ಹೊರ ಬರುತ್ತೆಯಾದರೂ ಅದನ್ನು ನಂಬುವವರಿಗೆ ಮಾತ್ರ ಸೀಮಿತವಾಗಿರುತ್ತದೆ. ಯಾಕಂದ್ರೆ, ಕೆಲವೊಂದಷ್ಟು ವಿಷಯಗಳು ಸತ್ಯ ಅನಿಸಿದರೆ, ಇನ್ನೂ ಕೆಲವೊಂದಷ್ಟು ಸಂಗತಿಗಳು ನಂಬಲು ಸ್ವಲ್ಪ ಯೋಚಿಸಬೇಕಾದ ಪರಿಸ್ಥಿತಿಯಾಗಿರುತ್ತದೆ.

ಇಂತಹುದ್ದೆ ಒಂದು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಾವು ನಿಮಗೆ ತಿಳಿಸುತ್ತೇವೆ. ಜ್ಯೋತಿಷ್ಯದ ಪ್ರಕಾರ ಕನಸಿನಲ್ಲಿ (Dream) ಕಾಣುವ ಪ್ರತಿಯೊಂದು ವಸ್ತುವಿಗೂ ಅದರದೇ ಆದ ಅರ್ಥವಿದೆ. ಕನಸು ಎಲ್ಲರೂ ಕಾಣುತ್ತಾರೆ ಆದರೆ ಕೆಲವೊಂದು ಕನಸುಗಳು ವಿಭಿನ್ನವಾಗಿರುತ್ತದೆ. ಯಾವ ಕನಸು ಬಿದ್ದರೆ ಯಾವ ಫಲ ಅನ್ನೋದು ಕೂಡ ಜ್ಯೋತಿಷ್ಯದ ಪ್ರಕಾರ ಹೇಳಲಾಗುತ್ತದೆ. ಹಾಗಿದ್ರೆ ಬನ್ನಿ ಈ ಕುರಿತಾದ ಮಾಹಿತಿ ತಿಳಿಯೋಣ.

*ಕಣ್ಣಿಗೆ ಕಾಡಿಗೆ ಹಚ್ಚಿಕೊಂಡಂತೆ ಕಂಡ್ರೆ ದೈಹಿಕ ನೋವು ಎದುರಿಸಬೇಕಾಗುತ್ತದೆ.
*ಕತ್ತರಿಸಿದ ಶವದ ಕೈ ಕಂಡಲ್ಲಿ ಹತ್ತಿರ ಸಂಬಂಧಿಯ ಸಾವು.
*ಒಣಗಿದ ಉದ್ಯಾನವನ ಕಂಡರೆ ಕಷ್ಟ ಪ್ರಾಪ್ತಿ.
*ತೋಳ ಕಂಡರೆ ಶತ್ರುಗಳ ಭಯ ಎದುರಾಗಲಿದೆ.
*ಕನಸಿನಲ್ಲಿ ರಾಜಕಾರಣಿ ಸತ್ತಂತೆ ಕಂಡರೆ ದೇಶಕ್ಕೆ ಆಪತ್ತು.
*ಪರ್ವತಗಳು ಅಲ್ಲಾಡಿದಂತೆ ಕಂಡರೆ ಆರೋಗ್ಯ ಸಮಸ್ಯೆ.
*ಪೂರಿಯ ಊಟ ಮಾಡಿದಂತೆ ಕಂಡರೆ ಸಂತೋಷದ ಸುದ್ದಿ ಸಿಗಲಿದೆ.
*ತಾಮ್ರ ಕಂಡರೆ ರಹಸ್ಯ ಪತ್ತೆಯಾಗಲಿದೆ ಎಂದರ್ಥ.
*ಹಾಸಿಗೆಯಲ್ಲಿ ಮಲಗಿದಂತೆ ಕಂಡ್ರೆ ಗೌರವ ಪ್ರಾಪ್ತಿ.
*ಹಸಿರು ಕಾಡು ಕಂಡರೆ ಆನಂದ ಸಿಗಲಿದೆ.
*ಆಕಾಶದಲ್ಲಿ ಹಾರಾಡಿದಂತೆ ಕಂಡರೆ ಸಮಸ್ಯೆಯಿಂದ ಪರಿಹಾರ ಸಿಗಲಿದೆ.
*ಸಣ್ಣ ಚಪ್ಪಲಿ ಧರಿಸಿದಂತೆ ಕಂಡಲ್ಲಿ ಸ್ತ್ರೀ ಜೊತೆ ಜಗಳ ಗ್ಯಾರಂಟಿ.
*ಸ್ತ್ರೀ ಜೊತೆ ಲೈಂಗಿಕ ಕ್ರಿಯೆ ಮಾಡಿದಂತೆ ಕನಸಿನಲ್ಲಿ ಕಂಡರೆ ಧನ ಪ್ರಾಪ್ತಿ.
ಬೇರೆಯವರ ಜೊತೆ ಜಗಳ ಆಡಿದಂತೆ ಕಂಡಲ್ಲಿ ಸಂತೋಷ ಸಿಗಲಿದೆ.
*ಚಂದ್ರಗ್ರಹಣ ನೋಡಿದಂತೆ ಕಂಡರೆ ರೋಗ ಪ್ರಾಪ್ತಿಯಾಗಲಿದೆ.

You may also like

Leave a Comment