Home » Good luck : ನಿಮಗೆ ತಿಳಿದಿದೆಯೇ!! ಮನೆಯಿಂದ ಹೊರಡುವಾಗ ಈ ಕಾಲನ್ನು ಮೊದಲಿಟ್ಟರೆ ಪ್ರತೀ ಕಾರ್ಯದಲ್ಲಿ ಯಶಸ್ಸು

Good luck : ನಿಮಗೆ ತಿಳಿದಿದೆಯೇ!! ಮನೆಯಿಂದ ಹೊರಡುವಾಗ ಈ ಕಾಲನ್ನು ಮೊದಲಿಟ್ಟರೆ ಪ್ರತೀ ಕಾರ್ಯದಲ್ಲಿ ಯಶಸ್ಸು

0 comments
goog luck

Good luck: ಸನಾತನ ಧರ್ಮದಲ್ಲಿ ನಮ್ಮ ಆಚಾರ ವಿಚಾರ, ರೂಢಿ ಸಂಪ್ರದಾಯಗಳಿಗೆ ಸಕಾರಾತ್ಮಕತೆಯ ನಂಟು ಇದೆ. ಸನಾತನ ಧರ್ಮ ಶಾಸ್ತ್ರ ದಲ್ಲಿ ಪ್ರತಿಯೊಂದು ಒಳಿತು ಕೆಡುಕುಗಳನ್ನು ಬೇರೆ ಬೇರೆ ಶಾಸ್ತ್ರ ಗಳ ಮೂಲಕ ವಿವರಿಸಲಾಗಿದೆ. ಇದೀಗ ಸಾಮುದ್ರಿಕ ಶಾಸ್ತ್ರದಲ್ಲಿ ನಾವು ಮನೆಯಿಂದ ಹೊರಗಡೆ ಹೋಗುವಾಗ ಯಾವ ಕಾಲನ್ನು ಮೊದಲು ಮನೆಯಿಂದ ಹೊರಗಿಡಬೇಕೆಂದು ಹೇಳಲಾಗಿದೆ.

ಮನೆಯಿಂದ ಹೊರಗಡೆ ಹೋಗುವಾಗ ಮೊದಲು ಬಲಗಾಲನ್ನು ಹೊರಗೆ ಹಾಕಿ ಹೋಗಿ ಎನ್ನುವ ಮಾತನ್ನು ನೀವು ಅನೇಕ ಬಾರಿ ಹಿರಿಯರ ಬಾಯಿಂದ ಕೇಳಿರಬಹುದು. ನಮ್ಮ ಹಿರಿಯರು ನಮಗೆ ಯಾವೆಲ್ಲಾ ಸಂಸ್ಕಾರಗಳನ್ನು ಹೇಳಿಕೊಟ್ಟಿದ್ದಾರೋ ಅವೆಲ್ಲವೂ ಒಳ್ಳೆಯ ಸಂಸ್ಕಾರವೇ ಆಗಿದೆ. ಹಿರಿಯರು ನಮಗೆ ಹೇಳಿಕೊಟ್ಟ ಉತ್ತಮ ಸಂಸ್ಕಾರಗಳಲ್ಲಿ ಈ ಸಂಸ್ಕಾರ ಕೂಡ ಒಂದು.

ಸಾಮಾನ್ಯವಾಗಿ ಮನೆಯಿಂದ ಹೊರಡುವಾಗ ಬಲಗಾಲನ್ನು ಮೊದಲು ಹೊಸ್ತಿಲಿನಿಂದ ಹೊರಗೆ ಇಡಬೇಕು. ಇದು ಒಂದು ರೀತಿಯ ಸಂಪ್ರದಾಯವೂ ಹೌದು . ಮನೆಯಿಂದ ಹೊರಗಡೆ ಹೋಗುವಾಗ ಮೊದಲು ಬಲಗಾಲನ್ನು ಇಡಬೇಕು ಎನ್ನುವುದು ಸಂಸ್ಕಾರ ಕೂಡ ಹೌದು. ಹೀಗೆ ಮಾಡಿದರೆ ಕೈಗೊಂಡ ಪ್ರತೀ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂಬುದು ನಂಬಿಕೆ. ಇದನ್ನು ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬರು ಪಾಲಿಸುತ್ತಾರೆ.

ಯಾವುದೇ ಕೆಲಸಕ್ಕೆ ತೆಗೆದುಕೊಂಡ ಮೊದಲ ಹೆಜ್ಜೆಯು ನಮ್ಮ ಭವಿಷ್ಯದ ( good luck ) ಗಮ್ಯಸ್ಥಾನ ಮತ್ತು ಬಲವನ್ನು ನಿರ್ಧರಿಸುತ್ತದೆ, ಅಂದರೆ ಬಲಭಾಗದ ಕಾಲು ಸಕಾರಾತ್ಮಕತೆಯನ್ನು ತೋರಿಸುತ್ತದೆ. ಆದ್ದರಿಂದ ಮನೆಯಿಂದ ಹೊರಗೆ ಹೊರಡುವಾಗ ಬಲಗಾಲನ್ನು ಮೊದಲು ಇರಿಸಿದರೆ, ನೀವು ಕೈಗೊಂಡ ಎಲ್ಲಾ ಕೆಲಸಗಳು ಉತ್ತಮವಾಗಿ ಪೂರ್ಣಗೊಳ್ಳುತ್ತವೆ ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ .

You may also like

Leave a Comment