1
ಈಗಾಗಲೇ ಮೈ ನಡುಗುವ ಚಳಿ ಜೊತೆಗೆ ಮುಂಜಾನೆ ಆಲಸ್ಯ ಕೂಡ ನಮ್ಮನ್ನು ಹಿಂಬಾಲಿಸುತ್ತಿದೆ. ಹೌದು ಚಳಿಗಾಲದಲ್ಲಿ ನಾವು ಆಕ್ಟಿವ್ ಆಗಿರಲು, ದೇಹದಲ್ಲಿ ಚೈತನ್ಯ ತುಂಬಿರಲು ಚಳಿಗಾಲದಲ್ಲಿ ಹೆಚ್ಚು ಹಸಿರು ತರಕಾರಿಗಳನ್ನು ತಿನ್ನಬೇಕು. ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಾವು ಸರಿಯಾಗಿ ಎಲ್ಲಾ ಆಹಾರವನ್ನು ಸಮತೋಲನವಾಗಿ ಸೇವಿಸಬೇಕು ಎನ್ನುವುದು ನಮಗೆ ಗೊತ್ತಿರುವ ವಿಚಾರ ಹಾಗೆಯೇ ಪ್ರತಿಯೊಂದು ತರಕಾರಿಗಳಲ್ಲಿಯೂ ತನ್ನದೇ ಆದ ಗುಣಗಳು ಹೊಂದಿರುತ್ತದೆ. ಚಳಿಗಾಲದಲ್ಲಿ ಒಗ್ಗಿಕೊಳ್ಳುವ ಆಹಾರವನ್ನು ನಾವು ಸೇವಿಸಬೇಕಾಗುತ್ತದೆ. ಮುಖ್ಯವಾಗಿ ಹಸಿರು ಬಟಾಣಿಯನ್ನು ಚಳಿಗಾಲದಲ್ಲಿ ತಿನ್ನುವುದರಿಂದ ಹಲವು ಪ್ರಯೋಜನಗಳು ಇವೆ.
ಹಸಿರು ಬಟಾಣಿ ಪ್ರಯೋಜನಗಳು:
- ಹಸಿರು ಬಟಾಣಿಗಳಲ್ಲಿ ಪಾಲಿಮಿಯೋಥಲ್ಲಾನಮೈಡ್ ಇರುತ್ತದೆ. US ಮತ್ತು ಯೂರೋಪ್ನಲ್ಲಿನ ಇತ್ತೀಚಿನ ಸಂಶೋಧನೆಯು ಪಾಲಿಮಿಯೋಥೈಲೀನಮೈಡ್ ಆಲ್ಝೈಮರ್ನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಾಗೆಯೇ ಇದರಲ್ಲಿರುವ ಸೆಲೆನಿಯಮ್ ಸಂಧಿವಾತ, ಕೀಲು ನೋವು ಮತ್ತು ಊತವನ್ನು ಕಡಿಮೆ ಮಾಡುತ್ತದೆ.
- ಚಳಿಗಾಲದಲ್ಲಿ ತಾಜಾ ಹಸಿರು ಬಟಾಣಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಸಿರು ಬಟಾಣಿ ಹೃದಯ ಮತ್ತು ಮೂತ್ರಪಿಂಡಗಳನ್ನು ಆರೋಗ್ಯವಾಗಿಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಸಿರು ಬಟಾಣಿ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು ಎಂದು ಸಾಬೀತಾಗಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ತೂಕವನ್ನು ಸಹ ಕಡಿಮೆ ಮಾಡಬಹುದು.
- ಹಸಿರು ಬಟಾಣಿ ಕಬ್ಬಿಣ, ಸತು, ಮ್ಯಾಂಗನೀಸ್, ತಾಮ್ರವನ್ನು ಹೊಂದಿದ್ದು, ಚಳಿಗಾಲದಲ್ಲಿ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ. ಅಲ್ಲದೆ, ಆ್ಯಂಟಿ ಆಕ್ಸಿಡೆಂಟ್ಗಳಲ್ಲಿ ಸಹ ಇದು ಸಮೃದ್ಧವಾಗಿದ್ದು, ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ.
- ಬಟಾಣಿಯಲ್ಲಿರುವ ಲುಟೀನ್ ಮತ್ತು ಜಿಯಾಕ್ಸಾಂಥಿನ್ ದೃಷ್ಟಿ ಸಮಸ್ಯೆಯನ್ನು ಸುಧಾರಿಸುತ್ತದೆ. ಹಸಿರು ಬಟಾಣಿ ಹೃದಯ ಮತ್ತು ಮೂತ್ರಪಿಂಡಗಳನ್ನು ಆರೋಗ್ಯವಾಗಿರಿಸುತ್ತದೆ. ಅಲ್ಲದೆ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಆದ್ದರಿಂದ ಇದನ್ನು ನಿಯಮಿತವಾಗಿ ಸೇವಿಸುವುದು ಉತ್ತಮ.
- ಬಟಾಣಿಯಲ್ಲಿ ವಿಟಮಿನ್-ಎ ಮತ್ತು ಇ ಸಮೃದ್ಧವಾಗಿದೆ. ಈ ಎರಡೂ ವಿಟಮಿನ್ ಗಳು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಶೀತ ವಾತಾವರಣದಲ್ಲಿ ತುಟಿಗಳು ಮತ್ತು ಹಿಮ್ಮಡಿಗಳು ಬಿರುಕು ಬಿಡುವುದು ಸಾಮಾನ್ಯ. ಹಾಗಾಗಿ ಹಸಿರು ಬಟಾಣಿ ತಿನ್ನುವುದು ಒಳ್ಳೆಯದು.
- ಹಸಿರು ಬಟಾಣಿಯಲ್ಲಿ ಫೈಬರ್, ವಿಟಮಿನ್ ಮತ್ತು ಖನಿಜಗಳು ಸಮೃದ್ಧವಾಗಿವೆ. ಫೈಬರ್ ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಇದು ಪ್ರೋಟೀನ್ ಅನ್ನು ಸಹ ಹೊಂದಿರುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಲ್ಲದೇ, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುತ್ತದೆ.
- ಹಸಿರು ಬಟಾಣಿ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಹಸಿರು ಬಟಾಣಿಯನ್ನು ರುಬ್ಬಿಕೊಂಡು ಮುಖಕ್ಕೆ ಹಚ್ಚುವುದರಿಂದ ನೈಸರ್ಗಿಕ ಸ್ಕ್ರಬ್ ನಂತೆ ಕೆಲಸ ಮಾಡುತ್ತದೆ. ಹಸಿರು ಬಟಾಣಿ ತ್ವಚೆಯನ್ನು ಸ್ವಚ್ಛಗೊಳಿಸಿ ಮುಖವನ್ನು ಕಾಂತಿಯುತವಾಗಿಸುತ್ತದೆ.
- ನಿಮಗೆ ಗ್ಯಾಸ್ ಸಮಸ್ಯೆ ಇದ್ದರೆ ಬಟಾಣಿಯನ್ನು ಸೇವಿಸುವಾಗ ಎಚ್ಚರ. ಆದರೆ ಇದನ್ನು ಅತಿಯಾಗಿ ತಿಂದರೆ ಗ್ಯಾಸ್ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾಗಿ ಯಾವುದನ್ನೂ ಅತಿಯಾಗಿ ಸೇವಿಸದೇ ಇರುವುದು ಉತ್ತಮ.
- ಚಳಿಗಾಲದಲ್ಲಿ ಹಸಿರು ಬಟಾಣಿ ಮಾರುಕಟ್ಟೆಯಲ್ಲಿ ಹೇರಳವಾಗಿ ಲಭ್ಯವಿದೆ. ಈ ಮೇಲಿನಂತೆ ಹಸಿರು ಬಟಾಣಿ ಹಲವಾರು ರೀತಿಯಲ್ಲಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಏಕೆಂದರೆ ಹಸಿರು ಬಟಾಣಿಯಲ್ಲಿ ಪ್ರೋಟೀನ್, ವಿಟಮಿನ್ ಸಿ, ಕಬ್ಬಿಣ, ವಿಟಮಿನ್ ಬಿ6 ಮತ್ತು ಪೊಟ್ಯಾಸಿಯಮ್ ಇದೆ. ನೀವು ಅನ್ನದ ಜೊತೆ ಅಥವಾ ಇತರ ಆಹಾರದ ಜೊತೆಗೆ ಸೇವಿಸಬಹುದಾಗಿದೆ.
