White Hair: ನಮ್ಮ ಸೌಂದರ್ಯದ ವಿಚಾರದಲ್ಲಿ ಕೂದಲು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇಂದಿನ ಜೀವನಶೈಲಿ, ಆಹಾರ ಪದ್ಧತಿ ಮತ್ತು ಪರಿಸರ ಮಾಲಿನ್ಯದಿಂದ ಕೂದಲು ಉದುರುವಿಕೆ(Hair Fall Problem), ಬಿಳಿ ಕೂದಲು(White Hair), ಕೂದಲು ಒಣಗುವುದು ಮತ್ತು ತಲೆಹೊಟ್ಟು ಮುಂತಾದ ಸಮಸ್ಯೆಗಳು ಕಂಡುಬರುತ್ತವೆ. ಸಾಮಾನ್ಯವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಗೋರಂಟಿ ಇಲ್ಲವೇ ಹೇರ್ ಕಲರ್ ಬಳಕೆ ಮಾಡುವುದು ಸಹಜ. ಇದರಿಂದ ಕೂದಲು ಒರಟಾಗುತ್ತದೆ. ಇದಕ್ಕೆ ಸುಲಭವಾಗಿ ಮನೆಯಲ್ಲೇ ಸರಳ ಮನೆ ಮದ್ದು ಬಳಸಿ ಪರಿಹಾರ ಕಂಡುಕೊಳ್ಳಬಹುದು.
# ಶುಂಠಿ ರಸಕ್ಕೆ ಜೇನು ತುಪ್ಪವನ್ನು ಬೆರೆಸಿಕೊಂಡು, ಈ ಮಿಶ್ರಣವನ್ನು ವಾರದಲ್ಲಿ ಎರಡು ಬಾರಿ ಕೂದಲಿಗೆ ಹಚ್ಚಿದರೆ ಕೂದಲು ಬೆಳ್ಳಗಾಗುವ ಸಮಸ್ಯೆಯನ್ನು ಕಡಿಮೆಯಾಗಲಿದೆ.
# ಈರುಳ್ಳಿ ರಸವನ್ನು ಕೂದಲಿಗೆ ಹಚ್ಚುವ ಮೂಲಕ ಕೂದಲು ಕಪ್ಪಾಗಲಿದೆ.
# ಪಾತ್ರೆಯಲ್ಲಿ 2 ಚಮಚ ತ್ರಿಫಲ ಚೂರ್ಣ ಪುಡಿ, 4 ಚಮಚ ನೆಲ್ಲಿಕಾಯಿ ಪುಡಿ, ನಾಲ್ಕು ಅಥವಾ ಐದು ಲವಂಗವನ್ನು 1 ಲೋಟ ನೀರಿನಲ್ಲಿ ಕುದಿಸಿ.ನಂತರ ತಣ್ಣಗಾಗಿಸಿ ಕೂದಲಿಗೆ ಹಚ್ಚಿ 1 ಗಂಟೆ ಬಳಿಕ ತೊಳೆಯಿರಿ. ಕೂದಲಿಗೆ ಕಪ್ಪು ಬಣ್ಣದ ಜೊತೆಗೆ ಹೊಳಪು ಕೂಡ ಹೆಚ್ಚಾಗಲಿದೆ.
# ಕಪ್ಪು ಕೂದಲಿಗೆ ನೆಲ್ಲಿಕಾಯಿ ಬಳಕೆ ಹೆಚ್ಚು ಪ್ರಯೋಜನ ಕಾರಿಯಾಗಿದ್ದು, ನೆಲ್ಲಿಕಾಯಿ ರಸಕ್ಕೆ ಬಾದಾಮಿ ಎಣ್ಣೆಯನ್ನು ಬೆರೆಸಿ ಕೂದಲಿಗೆ ಹಚ್ಚಿಕೊಂಡರೆ ಕೂದಲು ಕಪ್ಪಾಗುತ್ತದೆ.
# ಮೆಹಂದಿ ಜೊತೆ ಮೊಸರು ಬೆರೆಸಿ ಪೇಸ್ಟ್ ಮಾಡಿಕೊಂಡು ವಾರದಲ್ಲಿ ಎರಡು ಬಾರಿ ಈ ಪೇಸ್ಟನ್ನು ಕೂದಲಿಗೆ ಹಚ್ಚುತ್ತ ಬಂದರೆ ಬಿಳಿ ಕೂದಲಿನ ಸಮಸ್ಯೆ ಕಡಿಮೆಯಾಗುತ್ತದೆ.
# ಪ್ರತಿದಿನ ಸಾಸಿವೆ ಎಣ್ಣೆ ಹಚ್ಚುವ ಅಭ್ಯಾಸ ರೂಡಿಸಿಕೊಂಡರೆ ಕೂದಲು ಕಪ್ಪಗಾಗುತ್ತದೆ.
ಕೂದಲು ಉದುರುವ ಸಮಸ್ಯೆ ಹಾಗೂ ಬಿಳಿ ಕೂದಲಿನ ಸಮಸ್ಯೆಗಳಿಂದ ಪಾರಾಗಲು, ಅನೇಕ ವಸ್ತುಗಳನ್ನು ಬಳಕೆ ಮಾಡುತ್ತಾರೆ. ಆದರೆ ಈ ಉತ್ಪನ್ನಗಳು ಕೂದಲನ್ನು ಸುಧಾರಿಸುವ ಬದಲಿಗೆ ಹಾನಿ ಮಾಡುವ ರಾಸಾಯನಿಕಗಳಿಂದ ತುಂಬಿದ್ದು, ಈ ಸಂದರ್ಭದಲ್ಲಿ ಕೂದಲು ಉದುರುವಿಕೆಯನ್ನು ತಡೆಯಲು ನೈಸರ್ಗಿಕ ಮನೆಮದ್ದುಗಳನ್ನು ಬಳಸಬಹುದು.
